viral video: ಪಂತ್ ಸಹೋದರಿ ಮದುವೆಯಲ್ಲಿ ಧೋನಿ, ರೈನಾ ಮಸ್ತ್ ಡ್ಯಾನ್ಸ್
ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಧೋನಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ವಾರವೇ ಚೆನ್ನೈಗೆ ಆಗಮಿಸಿದ ಧೋನಿ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಪಂತ್ ಸಹೋದರಿ ಮದುವೆ ಸಮಾರಂಭ ಮುಗಿಸಿ ಮತ್ತೆ ಧೋನಿ ಚೆನ್ನೈಗೆ ಮರಳಲಿದ್ದಾರೆ.


ಡೆಹ್ರಾಡೂನ್: ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ಉದ್ಯಮಿ ಅಂಕಿತ್ ಚೌಧರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರಾಖಂಡದ ಮಸ್ಸೂರಿಯಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಹಲವು ಭಾರತೀಯ ಕ್ರಿಕೆಟ್ ತಂಡದ ಹಾಲಿ ಮತ್ತು ಮಾಜಿ ಆಟಗಾರರು ಕುಟುಂಬ ಸಮೇತರಾಗಿ ಕಾಣಿಸಿಕೊಂಡಿದ್ದರು. ಮಂಗಳವಾರ ರಾತ್ರಿ ನಡೆದಿದ್ದ ಸಂಗೀತ್ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಅವರು 'ದಮಾ ದಂ ಮಸ್ತ್ ಕಲಂದರ್' ಹಾಡಿಗೆ ಮಸ್ತ್ ಆಗಿ ನೃತ್ಯ ಮಾಡಿದ ವಿಡಿಯೊವೊಂದು ವೈರಲ್ ಆಗಿದೆ.
ಧೋನಿಯ ತಮ್ಮನಂತಿರುವ ಪಂತ್, ಧೋನಿ ಮನೆಯ ಎಲ್ಲಾ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಧೋನಿ ಕುಟುಂಬ ಕೂಡ ಪಂತ್ ಸಹೋದರಿಯ ಮದುವೆಯಲ್ಲೂ ಕಾಣಿಸಿಕೊಂಡಿದೆ. ಪಂತ್ ಸೋಮವಾರವಷ್ಟೇ ಚಾಂಪಿಯನ್ಸ್ ಟ್ರೋಫಿ ಮುಗಿಸಿ ಭಾರತಕ್ಕೆ ಬಂದಿದ್ದರು. ಸುರೇಶ್ ರೈನಾ, ಧೋನಿ ಸೇರಿ ಕೆಲವರು ನೃತ್ಯ ಮಾಡುತ್ತಿದ್ದಾಗ ಪಂತ್ ಕೂಡ ಸಾಥ್ ನೀಡಿದ್ದರು. ಕಳೆದ ವರ್ಷ ಸಾಕ್ಷಿ ಪಂತ್ ಮತ್ತು ಅಂಕಿತ್ ಚೌಧರಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಧೋನಿ, ರೈನಾ ನೃತ್ಯ ಮಾಡಿದ ವಿಡಿಯೊ ಇಲ್ಲಿದೆ
Rishabh Pant, MS Dhoni and Suresh Raina dancing at Rishabh Pant's sister's sangeet ceremony 🕺🏻❤️ pic.twitter.com/pw232528w8
— Sandy (@flamboypant) March 11, 2025
ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಧೋನಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ವಾರವೇ ಚೆನ್ನೈಗೆ ಆಗಮಿಸಿದ ಧೋನಿ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಪಂತ್ ಸಹೋದರಿ ಮದುವೆ ಸಮಾರಂಭ ಮುಗಿಸಿ ಮತ್ತೆ ಧೋನಿ ಚೆನ್ನೈಗೆ ಮರಳಲಿದ್ದಾರೆ.
ಬಾರಿಯ ಟೂರ್ನಿಯಲ್ಲಿ ಧೋನಿ ತಮ್ಮ ಬ್ಯಾಟ್‌ನ ತೂಕವನ್ನು ಇಳಿಸಿ ಆಡಲಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಧೋನಿ 1250-1300 ಗ್ರಾಂ ತೂಕದ ಬ್ಯಾಟ್‌ನೊಂದಿಗೆ ಆಡುತ್ತಾರೆ. ಆದರೆ ಈ ಬಾರಿ ಕನಿಷ್ಠ 10-20 ಗ್ರಾಂಗಳಷ್ಟು ತೂಕವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ ಈ ಬಾರಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.
ಕೆಲ ದಿನಗಳ ಹಿಂದೆ ಧೋನಿ 'ಹೆಲಿಕಾಪ್ಟರ್ ಶಾಟ್' ಮೂಲಕ ಸಿಕ್ಸರ್ ಬಾರಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಕ್ಯಾಪ್ಟ್ ನಿಯಮದ ಅಡಿಯಲ್ಲಿ ಧೋನಿಯನ್ನು 4 ಕೋಟಿ ರೂ. ನೀಡಿ ರಿಟೇನ್ ಮಾಡಿತ್ತು.
ಚೆನ್ನೈ ತಂಡ ಮಾ.23 ರಂದು ಮುಂಬೈ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ತವರು ಮೈದಾನವಾದ ಚೆಪಾಕ್‌ನಲ್ಲಿ ನಡೆಯಲಿದೆ.