IPL 2025: ʻಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XIನಲ್ಲಿ ಎಂಎಸ್ ಧೋನಿ ಇರಲ್ಲʼ-ಅನಿಲ್ ಕುಂಬ್ಳೆ ಅಚ್ಚರಿ ಹೇಳಿಕೆ!
Anil Kumble on MS Dhoni's IPL Future: ಬಹುನಿರೀಕ್ಷಿತ 2025ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಐಪಿಎಲ್ ವೃತ್ತಿ ಜೀವನದ ಅಂತಿಮ ಹಂತದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಸ್ಪಿನ್ ದಿಗ್ಗಜ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.

ಎಂಎಸ್ ಧೋನಿ-ವೀರೇಂದ್ರ ಸೆಹ್ವಾಗ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ವೃತ್ತಿ ಜೀವನದ ಅಂತಿಮ ಹಂತದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಭಾರತದ ಸ್ಪಿನ್ ದಿಗ್ಗಜ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಿದ ಕುಂಬ್ಳೆ, ಅವರನ್ನು ಸಿಎಸ್‌ಕೆ ತಂಡ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು ಎಂದು ಭಾರತದ ಮಾಜಿ ಸ್ಪಿನ್ನರ್ ಭವಿಷ್ಯ ನುಡಿದಿದ್ದಾರೆ. ಅಂದ ಹಾಗೆ ಎಂಎಸ್ ಧೋನಿ 2020ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ, ಅಂದಿನಿಂದ ಇಲ್ಲಿಯವರೆಗೂ ಅವರು ಐಪಿಎಲ್ ವೃತ್ತಿ ಜೀವನವನ್ನು ಮುಂದುವರಿಸಿದ್ದಾರೆ. ಆದರೆ, ಡೆತ್ ಓವರ್‌ಗಳಲ್ಲಿ ಮಾತ್ರ ಬ್ಯಾಟ್ ಮಾಡುತ್ತಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ 57 ಎಸೆತಗಳನ್ನು ಎದುರಿಸಿದ್ದ ಅವರು, 2024ರ ಟೂರ್ನಿಯಲ್ಲಿ 73 ಎಸೆತಗಳನ್ನು ಆಡಿದ್ದರು. ಇದರ ಹೊರತಾಗಿಯೂ ಅವರನ್ನು ಚೆನ್ನೈ ಫ್ರಾಂಚೈಸಿ 4 ಕೋಟಿ ರೂ. ಗಳಿಗೆ ರಿಟೈನ್ ಮಾಡಿಕೊಂಡಿದೆ.
2024ರಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕನನ್ನಾಗಿ ನೇಮಿಸಿಕೊಂಡಿತ್ತು. ಇದೀಗ ಮುಂವರುವ ಆವೃತ್ತಿಯಲ್ಲಿಯೂ ಎಂಎಸ್ ಧೋನಿ, ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. ಕಳೆದ ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ಸ್ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಮುಂಬರುವ ಟೂರ್ನಿಯ ನಿಮಿತ್ತ ಸಿಎಸ್‌ಕೆ ತಂಡದ ಬಹುತೇಕ ಆಟಗಾರು ಚೆನ್ನೈ ತಲುಪಿದ್ದು, ತರಬೇತಿ ನಡಸುತ್ತಿದ್ದಾರೆ. ಇದರ ನಡುವೆ ಮಾತನಾಡಿದ ಅನಿಲ್ ಕುಂಬ್ಳೆ, ಎಂಎಸ್ ಧೋನಿ ಈ ಬಾರಿ ಎಲ್ಲಾ ಪಂದ್ಯಗಳನ್ನು ಆಡುವುದು ಬಹುತೇಕ ಅನುಮಾನ ಎಂದು ಹೇಳಿದ್ದಾರೆ.
IPL 2025: ಐಪಿಎಲ್‌ನಲ್ಲೂ ಆಟಗಾರರ ಕುಟುಂಬಕ್ಕೆ ನಿರ್ಬಂಧ ಹೇರಿದ ಬಿಸಿಸಿಐ
ಜಿಯೊ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಅನಿಲ್ ಕುಂಬ್ಳೆ, "ಋತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ, ಈ ಒಂದು ಕಾರಣದಿಂದ ಎಂಎಸ್ ಧೋನಿ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಸಿಎಸ್‌ಕೆ ತಂಡದ ಭಾಗವಾಗಿ ಉಳಿದಿರುತ್ತಾರೆ. ಇದಕ್ಕೆ ನಾವು ರಿಟೆನ್ಷನ್ ನಿಯಮಗಳಿಗೆ ಧನ್ಯವಾದಗಳನ್ನು ತಿಳಿಸಬೇಕಾಗಿದೆ. ಏಕೆಂದರೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮವಿದೆ. ಅವರು ಪ್ರತಿಯೊಂದು ಪಂದ್ಯವನ್ನು ಆಡದೇ ಇದ್ದರೂ ತಂಡದಲ್ಲಿ ಅವರು ಮೌಲ್ಯವನ್ನು ತಂದುಕೊಡುತ್ತಾರೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
#ABDevilliers, #VirenderSehwag & #AnilKumble have their say on #MSDhoni coming down the order in #TATAIPL#IPLonJioStar 👉 Tata IPL 2025| Starts 22nd March, 6:30 PM | LIVE on JioHotstar & Star Sports Network
— Star Sports (@StarSportsIndia) March 7, 2025
📺📱 Start Watching FREE on #JioHotstar pic.twitter.com/V4kSPZTZbC
ಎಂಎಸ್ ಧೋನಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆಯೇ? ಅಥವಾ ಅವರು ಅಂತಿಮ ಆಡುವ ಬಳಗದಲ್ಲಿ ಆಡಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ. ಮುಂಬರುವ ಆವೃತ್ತಿಯಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರು ಈಗಾಗಲೇ ಭಾರತ ಟಿ20 ತಂಡವನ್ನು ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡ, 2023ರ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು. ಸಿಎಸ್‌ಕೆ ಅಭಿಮಾನಿಗಳು ಋತುರಾಜ್ ಗಾಯಕ್ವಾಡ್ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟಿದ್ದಾರೆ.
IPL 2025: ಕೋಲ್ಕತಾ ನೈಟ್ ರೈಡರ್ಸ್‌ಗೆ ಅಜಿಂಕ್ಯ ರಹಾನೆ ನಾಯಕ, ವೆಂಕಟೇಶ್ ಅಯ್ಯರ್ ಉಪ ನಾಯಕ!
ಮಾರ್ಚ್ 23 ರಂದು ಮುಂಬೈ ಇಂಡಿಯನ್ಸ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲನೇ ಪಂದ್ಯವನ್ನು ಆಡುವ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಭಿಯಾನವನ್ನು ಆರಂಭಿಸಲಿದೆ. ಮಾರ್ಚ್ 28 ರಂದು ತನ್ನ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.