Kho-Kho : ಡಿ.31ರಿಂದ ಜನವರಿ 4ರವರೆಗೆ ಗುಂಜೂರ್ ನಲ್ಲಿ ರಾಷ್ಟ್ರಮಟ್ಟದ ಬಾಲಕ/ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್ ಪಂದ್ಯಾವಳಿ
ಖೋ-ಖೋ ಕ್ರೀಡೆಯಲ್ಲಿ ಸಾಧಕರಿಗೆ ಕೇಂದ್ರ, ರಾಜ್ಯ ಸರ್ಕಾರದ ಉತ್ತಮ ಹುದ್ದೆಗಳಲ್ಲಿ ನೇಮಕ ರಾಗಿದ್ದಾರೆ. ಖೋ-ಖೋ ಕ್ರೀಡೆ ದೃಹಿಕ, ಬುದ್ದಿಕೌಶಲ್ಯ ಕ್ರೀಡೆಯಾಗಿದೆ. ಮಾನಸಿಕ ಮತ್ತು ದೃಹಿಕ ವಾಗಿ ಸದೃಢವಾಗಿ ಇರಬೇಕು ಖೋ-ಖೋ ಕ್ರೀಡೆಯನ್ನು ಚಿಕ್ಕ ವಯಸ್ಸಿನಲ್ಲಿ ಶಾಲಾ ಮಕ್ಕಳು ಕಲಿಯ ಬೇಕು. ಖೋ-ಖೋ ಕ್ರೀಡೆ ಬೆಳೆಯಬೇಕು ಈ ನಿಟ್ಟಿನಲ್ಲಿ ಪ್ರೋತ್ಸಾಹ ಸಹಕಾರ ನೀಡುತ್ತಿದ್ದೇವೆ
-
ಬೆಂಗಳೂರು: ಪ್ರೆಸ್ ಕ್ಲಬ್ ಗುಂಜೂರು ಖೋ-ಖೋ ಕ್ಲಬ್ ವತಿಯಿಂದ ಗುಂಜೂರು ವಾಜಪೇಯಿ ಕ್ರೀಡಾಂಗಣದಲ್ಲಿ 44ನೇ ರಾಷ್ಟ್ರಮಟ್ಟದ ಜೂನಿಯರ್ ಬಾಲಕ ಮತ್ತು ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್-2025 ಡಿಸೆಂಬರ್ 31ರಿಂದ 2026ಜನವರಿ 4ನೇ ತಾರೀಖವರೆಗೆ ಪಂದ್ಯಾವಳಿ ನಡೆಯಲಿದೆ.
ಇದರ ಕುರಿತು ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷರಾದ ಲೋಕೇಶ್ವರ್ ರವರು ಮತ್ತು ಗುಂಜೂರು ಖೋ-ಖೋ ಕ್ಲಬ್ ಅಧ್ಯಕ್ಷರಾದ ಜಿ.ಟಿ.ನಾಗೇಶ್ ರವರು , ಮತ್ತು ರಾಜ್ಯ ಖೋ-ಖೋ ಸಂಸ್ಥೆಯ ಪದಾಧಿಕಾರಿಗಳಾದ ಜಯರಾಮ್, ವೆಂಕಟೇಶ್, ಜಿ.ಟಿ.ಚಂದ್ರಪ್ಪ, ಜಗದೀಶ್ ,ಬಸವರಾಜ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಲೋಕೇಶ್ವರ್ ರವರು ಮಾತನಾಡಿ ಖೋ-ಖೋ ಇಂದು ಅಂತರಾಷ್ಟ್ರೀಯ ಕ್ರೀಡೆಯಾಗಿದೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೇರ್ಪಡೆಯಾಗಿದೆ. ಪ್ರಧಾನಿ ನರೇಂದ್ರಮೋದಿರವರು ಖೋ-ಖೋ ಕ್ರೀಡೆ ಯನ್ನು ಮುಂದಿನ ಓಲಂಪಿಕ್ ಗೇಮ್ಸ್ ನಲ್ಲಿ ಖೋ-ಖೋ ಸೇರಿಸಲಾಗುತ್ತಿದೆ.
ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ
ಗುಂಜೂರ್ ವಾಜಪೇಯಿ ಕ್ರೀಡಾಂಗಣದಲ್ಲಿ ಹೊನಲು-ಬೆಳಕಿನಲ್ಲಿ ಖೋ-ಖೋ ಪಂದ್ಯಾವಳಿ ನಡೆಯಲಿದೆ. ನಾಲ್ಕು ಕೋರ್ಟ್ ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಎರಡು ಮ್ಯಾಟ್ ಕೋರ್ಟ್ ಗಳಿಗೆ. ಭಾರತ ದೇಶ 32ರಾಜ್ಯಗಳ ತಂಡಗಳು ಭಾಗವಹಿಸಲಿದೆ.
ಖೋ-ಖೋ ಕ್ರೀಡೆಯಲ್ಲಿ ಸಾಧಕರಿಗೆ ಕೇಂದ್ರ, ರಾಜ್ಯ ಸರ್ಕಾರದ ಉತ್ತಮ ಹುದ್ದೆಗಳಲ್ಲಿ ನೇಮಕ ರಾಗಿದ್ದಾರೆ. ಖೋ-ಖೋ ಕ್ರೀಡೆ ದೃಹಿಕ, ಬುದ್ದಿಕೌಶಲ್ಯ ಕ್ರೀಡೆಯಾಗಿದೆ. ಮಾನಸಿಕ ಮತ್ತು ದೃಹಿಕ ವಾಗಿ ಸದೃಢವಾಗಿ ಇರಬೇಕು ಖೋ-ಖೋ ಕ್ರೀಡೆಯನ್ನು ಚಿಕ್ಕ ವಯಸ್ಸಿನಲ್ಲಿ ಶಾಲಾ ಮಕ್ಕಳು ಕಲಿಯ ಬೇಕು. ಖೋ-ಖೋ ಕ್ರೀಡೆ ಬೆಳೆಯಬೇಕು ಈ ನಿಟ್ಟಿನಲ್ಲಿ ಪ್ರೋತ್ಸಾಹ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದರು.
ಜಿ.ಟಿ.ನಾಗೇಶ್ ರವರು ಮಾತನಾಡಿ ರವರು ಮಾತನಾಡಿ ಗುಂಜೂರ್ ಖೋ-ಖೋ ಕ್ರೀಡೆ ಹೆಸರಾಂತ ಪ್ರದೇಶವಾಗಿದೆ. ನಮ್ಮ ಕ್ಲಬ್ ನಿಂದ ಸಾಕಷ್ಟು ಕ್ರೀಡಾಪಟುಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಆಟಗಾರರು ಇದ್ದಾರೆ.
ಖೋ-ಖೋ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಶಾಸಕಿ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಪಿ.ಸಿ.ಮೋಹನ್ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರ.