ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nepal vs West Indies: ವಿಂಡೀಸ್‌ಗೆ ಸೋಲುಣಿಸಿದ ಕ್ರಿಕೆಟ್‌ ಶಿಶು ನೇಪಾಳ

Nepal Script History: "ಟೆಸ್ಟ್ ಆಡುವ ದೇಶವನ್ನು ಸೋಲಿಸಲು ಬಹಳ ಸಮಯ ಕಾಯಬೇಕಾಯಿತು. ಅದು ಕೂಡ ನಾವು ಯುಎಇಯಲ್ಲಿ ಆಯೋಜಿಸಿದ್ದ ಸರಣಿಯಲ್ಲಿ ಬಂದಿದೆ. ನಾವು ನಮ್ಮ ಕೌಶಲ್ಯಗಳನ್ನು ಮುಂದುವರಿಸಲಿದ್ದೇವೆ" ಎಂದು ನಾಯಕ ರೋಹಿತ್ ಹೇಳಿದರು.

ಐತಿಹಾಸಿಕ ಗೆಲುವು ಸಾಧಿಸಿದ ನೇಪಾಳ; ವಿಂಡೀಸ್‌ಗೆ ಸೋಲಿನ ಮುಖಭಂಗ

-

Abhilash BC Abhilash BC Sep 28, 2025 10:24 AM

ದುಬೈ: ಕ್ರಿಕೆಟ್ ಶಿಶು ನೇಪಾಳ ತಂಡ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಬಲಿಷ್ಠ ವೆಸ್ಟ್‌ ಇಂಡೀಸ್‌(Nepal vs West Indies) ತಂಡಕ್ಕೆ ಸೋಲಿನ ಶಾಕ್‌ ನೀಡಿದೆ. ಶಾರ್ಜಾದಲ್ಲಿ ನಡೆದ ಮೊದಲ ಟಿ20(NEP vs WI 1st T20I) ಪಂದ್ಯದಲ್ಲಿ 19 ರನ್‌ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 29 ರಂದು ನಡೆಯಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ನೇಪಾಳಕ್ಕೆ ಒಲಿದ ಮೊದಲ ಗೆಲುವು ಇದಾಗಿದೆ. ಈ ಗೆಲುವನ್ನು ನಾಯಕ ರೋಹಿತ್ ಪೌಡೆಲ್, ಇತ್ತೀಚೆಗೆ ಜನರಲ್ ಝಡ್ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಅರ್ಪಿಸಿದರು.

"ಟೆಸ್ಟ್ ಆಡುವ ದೇಶವನ್ನು ಸೋಲಿಸಲು ಬಹಳ ಸಮಯ ಕಾಯಬೇಕಾಯಿತು. ಅದು ಕೂಡ ನಾವು ಯುಎಇಯಲ್ಲಿ ಆಯೋಜಿಸಿದ್ದ ಸರಣಿಯಲ್ಲಿ ಬಂದಿದೆ. ನಾವು ನಮ್ಮ ಕೌಶಲ್ಯಗಳನ್ನು ಮುಂದುವರಿಸಲಿದ್ದೇವೆ" ಎಂದು ನಾಯಕ ರೋಹಿತ್ ಹೇಳಿದರು.

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆ ನೇಪಾಳ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 12 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್‌ ಕಳೆದುಕೊಂಡಿತು. ಆದರೆ ಆ ಬಳಿಕ ನಾಯಕ ನಾಯಕ ರೋಹಿತ್(38), ಕುಶಾಲ್ ಮಲ್ಲ(30) ಜತೆಯಾಟದ ನೆರವಿನಿಂದ 8 ವಿಕೆಟ್‌ಗೆ 148 ರನ್‌ ಬಾರಿಸಿತು.



ಇದನ್ನೂ ಓದಿ Asia Cup 2025 final: ಪಾಕ್‌ ಸಚಿವ ನಖ್ವಿಯಿಂದ ಟ್ರೋಫಿ ಸ್ವೀಕರಿಸುತ್ತಾ ಭಾರತ?

ಗುರಿ ಬೆನ್ನಟ್ಟಿದ ವಿಂಡೀಸ್‌ 9 ವಿಕೆಟ್‌ಗೆ ಕೇವಲ 129 ರನ್‌ ಬಾರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ನೇಪಾಳ ಪರ ಕುಶಾಲ್ ಭುರ್ತೆಲ್ 17ಕ್ಕೆ 2 ವಿಕೆಟ್‌ ಕಿತ್ತರು. ಉಳಿದಂತೆ ಐವರು ಬೌಲರ್‌ಗಳು ತಲಾ ಒಂದೊಂದು ವಿಕೆಟ್‌ ಕಿತ್ತರು.