ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಪಾಕ್ ವಿರುದ್ಧ ಭಾರತದ ಗೆಲುವಿಗಾಗಿ ಜಮ್ಮು–ಕಾಶ್ಮೀರದ ಮಹಾಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ

Asia Cup 2025: ಪಾಕ್ ಎದುರಿನ ಹಿಂದಿನ 7 ಮುಖಾಮುಖಿಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಅಭಿಷೇಕ್ ಶರ್ಮ ಆರು ಇನಿಂಗ್ಸ್‌ಗಳಲ್ಲಿ 309 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಅಭಿಷೇಕ್‌ರನ್ನು ಆರಂಭದಲ್ಲಿಯೇ ಪಾಕ್ ಕಟ್ಟಿಹಾಕಿದರೆ ಭಾರತ ಒತ್ತಡದಲ್ಲಿ ಸಿಲುಕುವ ಅಪಾಯವಿದೆ.

ಭಾರತದ ಗೆಲುವಿಗಾಗಿ ಜಮ್ಮು–ಕಾಶ್ಮೀರದ ಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ

-

Abhilash BC Abhilash BC Sep 28, 2025 8:51 AM

ದುಬೈ: ಪಾಕಿಸ್ತಾನವನ್ನು ಈ ಏಷ್ಯಾಕಪ್‌ನಲ್ಲಿ 2 ಬಾರಿ ಹೊಸಕಿ ಹಾಕಿದ ಭಾರತ ತಂಡ ಇದೀಗ ಮತ್ತೊಮ್ಮೆ ಸದೆಬಡಿಯಲು ಸಜ್ಜಾಗಿದೆ. ಇಂದು ದುಬೈನಲ್ಲಿ ನಡೆಯುವ ಫೈನಲ್‌ನಲ್ಲಿ ಸೂರ್ಯಕುಮಾರ್‌ ಪಡೆ ಶತ್ರುಗಳ ಎದುರು ಗೆಲುವು ಸಾಧಿಸಲಿ ಎಂದು ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಟೀಮ್‌ ಇಂಡಿಯಾ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಮಹಾ ಕಾಳಿ ದೇವಾಲಯದಲ್ಲಿ ದೀಪ ಬೆಳಗಿ ಪ್ರಾರ್ಥಿಸಿದ್ದಾರೆ.

ಗುಂಪು ಹಂತದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ, ಸೂಪರ್‌-4 ಪಂದ್ಯದಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ಇಂದು ನಡೆಯಲಿರುವ ಫೈನಲ್‌ನಲ್ಲಿ ಬದ್ಧವೈರಿಯನ್ನು ಮತ್ತೊಮ್ಮೆ ಹೊಸಕಿಹಾಕಿ, 9ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಲು ಭಾರತ ಕಾತರಿಸುತ್ತಿದೆ.



ಪಾಕ್ ಎದುರಿನ ಹಿಂದಿನ 7 ಮುಖಾಮುಖಿಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಅಭಿಷೇಕ್ ಶರ್ಮ ಆರು ಇನಿಂಗ್ಸ್‌ಗಳಲ್ಲಿ 309 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಅಭಿಷೇಕ್‌ರನ್ನು ಆರಂಭದಲ್ಲಿಯೇ ಪಾಕ್ ಕಟ್ಟಿಹಾಕಿದರೆ ಭಾರತ ಒತ್ತಡದಲ್ಲಿ ಸಿಲುಕುವ ಅಪಾಯವಿದೆ. ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ಓವರ್‌ಗಳು ಪಂದ್ಯದ ಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ. ಹಾರ್ದಿಕ್ ಪಾಂಡ್ಯ ಅಲಭ್ಯರಾದರೆ ತಂಡದ ಸಂಯೋಜನೆ ಮೇಲೆ ಪರಿಣಾಮ ಬೀರಲಿದೆ.

ಸಂಭಾವ್ಯ ತಂಡಗಳು

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ/ಅರ್ಶ್‌ದೀಪ್‌ ಸಿಂಗ್‌, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ಪಾಕಿಸ್ತಾನ: ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸೈಮ್ ಅಯೂಬ್, ಸಲ್ಮಾನ್ ಅಘಾ (ನಾಯಕ), ಹುಸೇನ್ ತಲತ್, ಮೊಹಮ್ಮದ್ ಹ್ಯಾರಿಸ್ (ವಿ.ಕೀ.), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹಾರಿಸ್ ರೌಫ್, ಅಬ್ರಾರ್ ಅಹ್ಮದ್.