ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025 final: ಪಾಕ್‌ ಸಚಿವ ನಖ್ವಿಯಿಂದ ಟ್ರೋಫಿ ಸ್ವೀಕರಿಸುತ್ತಾ ಭಾರತ?

Asia Cup 2025 final: ಆಪರೇಷನ್‌ ಸಿಂಧೂರ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈಗಾಗಲೇ ಈ ವಿಚಾರವಾಗಿ ಎರಡೂ ತಂಡಗಳ ಆಟಗಾರರ ಮಧ್ಯೆ ಕೈಸನ್ನೆ, ಹೇಳಿಕೆ ಮುಂದಾದ ರೀತಿಯಲ್ಲಿ ಮುಸುಕಿನ ಗುದ್ದಾಟ ಕೂಡ ನಡೆದುಹೋಗಿದೆ.

IND vs PAK: ಫೈನಲ್‌ ಪಂದ್ಯಕ್ಕೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಭಾರತ; ಏನದು?

-

Abhilash BC Abhilash BC Sep 28, 2025 9:42 AM

ದುಬೈ: ಭಾರತ ಮತ್ತು ಪಾಕಿಸ್ತಾನ(India vs Pakistan) ತಂಡಗಳು ಇಂದು ನಡೆಯುವ ಏಷ್ಯಾಕಪ್‌ ಟಿ20 ಟೂರ್ನಿ ಹೈವೋಲ್ಟೇಜ್‌ ಫೈನಲ್‌(Asia Cup 2025 final) ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಹೊಸ ತೊಂದರೆಯೊಂದು ತಲೆದೋರಿದೆ. ಲೀಗ್‌ ಮತ್ತು ಸೂಪರ್‌ ಫೋರ್‌ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರನ್ನು ಕಣ್ಣೆತ್ತಿಯೂ ನೋಡದೆ, ಮಾತನಾಡಿಸದೆ, ಕೈಕುಲುಕದೆ ಭಾರತೀಯ ಆಟಗಾರರು ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ತಕ್ಕ ತಿರುಗೇಟು ನೀಡಿದ್ದರು. ಒಂದು ವೇಳೆ ಭಾರತವು ಇಂದು ಫೈನಲ್‌ ಪಂದ್ಯದಲ್ಲಿ ಗೆದ್ದರೆ, ಪಾಕ್‌ ಸಚಿವ ಮೊಹ್ಸಿನ್‌ ನಖ್ವಿ(Mohsin Naqvi)ಯಿಂದ ಪ್ರಶಸ್ತಿ ಸ್ವೀಕರಿಸಲಿದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಒಂದು ವೇಳೆ ಭಾರತ ಟೂರ್ನಿಯಲ್ಲಿ ಚಾಂಪಿಯನ್ ಆದರೆ ಟ್ರೋಫಿ ಸ್ವೀಕರಿಸುವುದು ಯಾರಿಂದ ಎಂಬ ಕುತೂಹಲವಿದೆ. ಯಾಕೆಂದರೆ, ಎಸಿಸಿ ಮುಖ್ಯಸ್ಥರಾಗಿರುವುದು ಪಾಕ್‌ನ ಮೊಹ್ಸಿನ್‌ ನಖ್ವಿ. ವಿಜೇತರಿಗೆ ಮುಖ್ಯಸ್ಥರೇ ಟ್ರೋಫಿ ವಿತರಿಸುವುದು ವಾಡಿಕೆ. ಟೂರ್ನಿ ಆರಂಭಕ್ಕೂ ಮುನ್ನ ನಡೆದಿದ್ದ ನಾಯಕರ ಸುದ್ದಿಗೋಷ್ಠಿ ವೇೆಳೆ ಸೂರ್ಯಕುಮಾರ್‌ ಅವರು ಮೊಹ್ಸಿನ್‌ ನಖ್ವಿಗೆ ಹಸ್ತಲಾಘವ ನೀಡಿದ್ದರು. ಆದರೆ ಆ ಬಳಿಕ ನಡೆದ ಘಟನೆ ಬಳಿಕ ಇದೀಗ ಭಾರತ ಗೆದ್ದರೆ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲಿದೆಯೇ ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳಲ್ಲಿದೆ.

ಆಪರೇಷನ್‌ ಸಿಂಧೂರ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈಗಾಗಲೇ ಈ ವಿಚಾರವಾಗಿ ಎರಡೂ ತಂಡಗಳ ಆಟಗಾರರ ಮಧ್ಯೆ ಕೈಸನ್ನೆ, ಪರಸ್ಪರ ಹೇಳಿಕೆ ಮುಂದಾದ ರೀತಿಯಲ್ಲಿ ಮುಸುಕಿನ ಗುದ್ದಾಟ ಕೂಡ ನಡೆದುಹೋಗಿದೆ. ಇದೀಗ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಪಂದ್ಯದ ವೇಳೆ ಉಭಯ ದೇಶಗಳ ಆಟಗಾರರ ನಡುವೆ ಹಸ್ತಲಾಘವ ಮಾಡುವ ಹಾಗೂ ಪ‍ಂದ್ಯದ ಬಳಿಕ ಪ್ರಶಸ್ತಿ ನೀಡುವ ಅಧಿಕಾರವಿದೆ. ಪಾಕ್‌ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದ ಭಾರತೀಯ ಆಟಗಾರರು, ಪಾಕ್‌ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆಯೇ ಎನ್ನುವ ಪ‍್ರಶ್ನೆ ಎದುರಾಗಿದೆ.

ಇದನ್ನೂ ಓದಿ Asia Cup 2025 final: ಏಷ್ಯಾಕಪ್‌ಗಾಗಿ ಇಂದು ಇಂಡೋ-ಪಾಕ್ ಫೈನಲ್ ಫೈಟ್‌; ಪಾಂಡ್ಯ ಅಲಭ್ಯ?

ನಖ್ವಿ ಅವರು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದ್ದು, ಭಾರತೀಯ ಆಟಗಾರರು ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆಯೇ ಎನ್ನುವ ಕುರಿತು ಬಿಸಿಸಿಐ ಯಾವುದೇ ಬಹಿರಂಗ ಪ್ರಕಟಣೆಯನ್ನು ಮಾಡಿಲ್ಲ.