ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC Women's World Cup Team: ಟ್ರೋಫಿ ಗೆದ್ದರೂ ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ಹರ್ಮನ್‌ಪ್ರೀತ್‌ ಕೌರ್‌!

ಸ್ಮೃತಿ ಮಂಧಾನ ಮತ್ತು ಲಾರಾ ವೋಲ್ವಾರ್ಡ್ಟ್ ಟೂರ್ನಮೆಂಟ್‌ನ ತಂಡದಲ್ಲಿ ಆರಂಭಿಕರಾಗಿ, ಜೆಮಿಮಾ ರೊಡ್ರಿಗಸ್ 3 ನೇ ಸ್ಥಾನದಲ್ಲಿದ್ದಾರೆ. ವೋಲ್ವಾರ್ಡ್ 71.37 ರ ಅತ್ಯುತ್ತಮ ಸರಾಸರಿಯಲ್ಲಿ 571 ರನ್‌ಗಳೊಂದಿಗೆ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಸತತ ಶತಕಗಳನ್ನು ದಾಖಲಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಮತ್ತು ಲಾರಾ ವೋಲ್ವಾರ್ಡ್ಟ್

ದುಬೈ: 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌(Women's World Cup 2025) ಪಂದ್ಯಾವಳಿ ಯಶಸ್ವಿಯಾಗಿ ಮುಗಿದಿದೆ. ಭಾರತ ಮಹಿಳಾ ತಂಡ ಮೊದಲ ಸಲ ಕಪ್‌ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಈ ಬಾರಿಯ ಸಾಧಕ ಆಟಗಾರರನ್ನೊಳಗೊಂಡ 12 ಸದಸ್ಯರ ತಂಡವನ್ನು(ICC Women's World Cup Team) ಪ್ರಕಟಿಸಿದೆ(ಐಸಿಸಿ ಟೀಮ್‌ ಆಫ್‌ ಟೂರ್ನಮೆಂಟ್‌). ಇದರಲ್ಲಿ ಮೂವರು ಭಾರತೀಯ ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ವಿಶ್ವಕಪ್‌ ಗೆದ್ದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ಸ್ಥಾನ ಪಡೆದಿಲ್ಲ.

ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ಟ್ ಅವರನ್ನು ನಾಯಕಿಯಾಗಿ ನೇಮಿಸಲಾಗಿದೆ. ಭಾರತದ ಗೆಲುವಿನ ಅಭಿಯಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್ ಮತ್ತು ದೀಪ್ತಿ ಶರ್ಮಾ ಸ್ಥಾನ ಪಡೆದ ಭಾರತೀಯ ಆಟಗಾರ್ತಿಯರು.

ಸ್ಮೃತಿ ಮಂಧಾನ ಮತ್ತು ಲಾರಾ ವೋಲ್ವಾರ್ಡ್ಟ್ ಟೂರ್ನಮೆಂಟ್‌ನ ತಂಡದಲ್ಲಿ ಆರಂಭಿಕರಾಗಿ, ಜೆಮಿಮಾ ರೊಡ್ರಿಗಸ್ 3 ನೇ ಸ್ಥಾನದಲ್ಲಿದ್ದಾರೆ. ವೋಲ್ವಾರ್ಡ್ 71.37 ರ ಅತ್ಯುತ್ತಮ ಸರಾಸರಿಯಲ್ಲಿ 571 ರನ್‌ಗಳೊಂದಿಗೆ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಸತತ ಶತಕಗಳನ್ನು ದಾಖಲಿಸಿದ್ದಾರೆ. ಏತನ್ಮಧ್ಯೆ, ಸ್ಮೃತಿ 54.25 ರ ಸರಾಸರಿಯಲ್ಲಿ 434 ರನ್‌ಗಳೊಂದಿಗೆ ವಿಶ್ವಕಪ್ ಅನ್ನು ಮುಗಿಸಿದರು.

ಸ್ಪಿನ್‌ ಆಲ್‌ರೌಂಡರ್‌ ಆಗಿ ದೀಪ್ತಿ ಶರ್ಮಾ, ಆಸ್ಟ್ರೇಲಿಯಾದಿಂದ, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಅಲಾನಾ ಕಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ, ಆದರೆ ಪಾಕಿಸ್ತಾನದ ಸಿದ್ರಾ ನವಾಜ್ ಅವರನ್ನು ಭಾರತದ ರಿಚಾ ಘೋಷ್‌ಗಿಂತ ಮೊದಲು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಪಾಕಿಸ್ತಾನ ಮಹಿಳಾ ವಿಶ್ವಕಪ್ ಅಭಿಯಾನದಲ್ಲಿ ಗೆಲುವು ಸಾಧಿಸದಿದ್ದರೂ ಸಹ, ಸಿದ್ರಾ ಸ್ಟಂಪ್‌ಗಳ ಹಿಂದೆ ಮೂರು ಕ್ಯಾಚ್‌ಗಳು ಮತ್ತು ನಾಲ್ಕು ಸ್ಟಂಪಿಂಗ್‌ಗಳನ್ನು ದಾಖಲಿಸುವ ಮೂಲಕ ಪ್ರಭಾವಶಾಲಿ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ಅನುಭವಿ ಸ್ಪಿನರ್‌ ಸೋಫಿ ಎಕ್ಲೆಸ್ಟೋನ್ 12ನೇ ಆಟಗಾರ್ತಿಯಾಗಿದ್ದಾರೆ.

ಇದನ್ನೂ ಓದಿ ಚೊಚ್ಚಲ ಮಹಿಳಾ ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನದ ವಿವರ!

ಐಸಿಸಿ ತಂಡ

ಸ್ಮೃತಿ ಮಂಧಾನ (ಭಾರತ), ಲಾರಾ ವೋಲ್ವಾರ್ಡ್ (ದಕ್ಷಿಣ ಆಫ್ರಿಕಾ, ನಾಯಕಿ), ಜೆಮಿಮಾ ರೊಡ್ರಿಗಸ್ (ಭಾರತ), ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ), ಆಶ್ಲೀ ಗಾರ್ಡ್ನರ್ (ಆಸ್ಟ್ರೇಲಿಯಾ), ದೀಪ್ತಿ ಶರ್ಮಾ (ಭಾರತ), ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ನಾಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾ), ಸಿದ್ರಾ ನವಾಜ್ (ಪಾಕಿಸ್ತಾನ) (ವಿಕೆಟ್ ಕೀಪರ್), ಅಲಾನಾ ಕಿಂಗ್ (ಆಸ್ಟ್ರೇಲಿಯಾ).
12 ನೇ ಆಟಗಾರ್ತಿ: ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್).

ವಿಶ್ವಕಪ್‌ ಗೆದ್ದ ಭಾರತ

ಮುಂಬೈನ ದಿವೈ ಪಾಟೀಲ್‌ ಕ್ರಿಕೆಟ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಆ ಮೂಲಕ ಚೊಚ್ಚಲ ಏಕದಿನ ವಿಶ್ವಕಪ್‌ ಗೆಲ್ಲುವ ಮೂಲಕ ಹರ್ಮನ್‌ಪ್ರೀತ್‌ ಕೌರ್‌ ಪಡೆ ಇತಿಹಾಸವನ್ನು ಸೃಷ್ಟಿಸಿತ್ತು.