1983 World Cup: ಕಪಿಲ್ ದೇವ್ ಸಾರಥ್ಯದ ವಿಶ್ವಕಪ್ ಗೆಲುವಿಗೆ 42ರ ಸಂಭ್ರಮ
ಕೋಚ್ ಇಲ್ಲದ ಭಾರತ ತಂಡ. ವೈದ್ಯ, ಫಿಸಿಯೋ ಕೂಡ ತಂಡದೊಂದಿಗೆ ಇರಲಿಲ್ಲ. ಆಗ ಮೊಹಿಂದರ್ ಅಮರನಾಥ್ ಅವರೇ ತಂಡದ ಕೋಚ್ ಆದರು. ಭಾರತವೊಂದು ಲೆಕ್ಕದ ಭರ್ತಿಯ ತಂಡ, ಅದು ಗೆದ್ದರೆ ನಾನು ಬರೆದುದನ್ನೇ ನುಂಗುತ್ತೇನೆ ಎಂದಿದ್ದ ವಿಸ್ಡನ್ ಸಂಪಾದಕ ಡೇವಿಡ್ ಫ್ರಿತ್‌ಕೊನೆಗೂ ತಮ್ಮ ಮಾತು ಉಳಿಸಿಕೊಂಡರು.


ಬೆಂಗಳೂರು: 1983ರ ಜೂನ್ 25(On this day (June 25) in 1983) ಭಾರತದ ಏಕದಿನ ಕ್ರಿಕೆಟಿನ ಪಾಲಿಗೆ ಐತಿಹಾಸಿಕ ದಿನ. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಆಘಾತಕಾರಿಯಾಗಿ ಸೋಲಿಸಿ ಚೊಚ್ಚಲ ಕ್ರಿಕೆಟ್ ವಿಶ್ವಕಪ್(1983 World Cup) ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಬುಧವಾರ ಈ ಸಂಭ್ರಮಕ್ಕೆ ಭರ್ತಿ 42 ವರ್ಷ ತುಂಬಿತು. ಕಪಿಲ್ ದೇವ್(Kapil Dev) ಲಂಡನ್‌ನ ಐಕಾನಿಕ್ ಲಾರ್ಡ್ಸ್ ಸ್ಟೇಡಿಯಂನಲ್ಲಿ ಟ್ರೋಫಿ ಸ್ವೀಕರಿಸುವ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಅಂದಿನ ಸ್ಮರಣೀಯ ದಿನದ ನೆನಪನ್ನು ಮತ್ತೆ ಮೆಲುಕು ಹಾಕಿದೆ.
ಕಪಿಲ್ ಪಡೆಯನ್ನು 183ಕ್ಕೆ ಹಿಡಿದು ನಿಲ್ಲಿಸಿದ ವಿಂಡೀಸ್ ಆಗಲೇ ಹ್ಯಾಟ್ರಿಕ್ ಸಾಧಿಸಿದ ಉತ್ಸಾಹದಲ್ಲಿತ್ತು. ಆದರೆ ಲಾರ್ಡ್ಸ್‌ನಲ್ಲಿ ಸಂಭವಿಸಿದ್ದೇ ಬೇರೆ.ಭಾರತ 43 ರನ್ ಜಯಭೇರಿ ಮೊಳಗಿಸಿತ್ತು. ಜಾಗತಿಕ ಕ್ರಿಕೆಟ್ ಭೂಪಟದಲ್ಲಿ ಭಾರತದ ಹೆಸರು ಸುವರ್ಣಾಕ್ಷರದಲ್ಲಿ ಹೊಳೆಯತೊಡಗಿತು.
🗓️ #OnThisDay in 1983
— BCCI (@BCCI) June 25, 2025
📍 Lord's
A historic day & a landmark moment for Indian cricket 🙌🏻#TeamIndia, led by the legendary @therealkapildev clinched the World Cup title 🏆🫡 pic.twitter.com/lATU8lrs2j
ಕೋಚ್ ಇಲ್ಲದ ಭಾರತ ತಂಡ. ವೈದ್ಯ, ಫಿಸಿಯೋ ಕೂಡ ತಂಡದೊಂದಿಗೆ ಇರಲಿಲ್ಲ. ಆಗ ಮೊಹಿಂದರ್ ಅಮರನಾಥ್ ಅವರೇ ತಂಡದ ಕೋಚ್ ಆದರು. ಭಾರತವೊಂದು ಲೆಕ್ಕದ ಭರ್ತಿಯ ತಂಡ, ಅದು ಗೆದ್ದರೆ ನಾನು ಬರೆದುದನ್ನೇ ನುಂಗುತ್ತೇನೆ ಎಂದಿದ್ದ ವಿಸ್ಡನ್ ಸಂಪಾದಕ ಡೇವಿಡ್ ಫ್ರಿತ್‌ಕೊನೆಗೂ ತಮ್ಮ ಮಾತು ಉಳಿಸಿಕೊಂಡರು.
ಸೆಮಿಫೈನಲ್‌ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ 5 ವಿಕೆಟ್ 17 ರನ್ನಿಗೆ ಬಿದ್ದಾಗ ಕಪಿಲ್ ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 175 ರನ್ ಬಾರಿಸಿದ್ದರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. 16 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ ಕಪಿಲ್ ಮಿಂಚಿದ್ದರು. ಈ ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ನೆವಿಲ್ ಕ್ರಿಕೆಟ್ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ ಬಿದ್ದಿತ್ತು. ಆ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಕಪಿಲ್ ಆಗಿದ್ದರು. ಕಪಿಲ್ ಆಡಿದ ಆಲ್‌ರೌಂಡ್ ಆಟದಿಂದಾಗಿ ಜಿಂಬಾಬ್ವೆ ತಂಡವನ್ನು 235 ರನ್ನಿಗೆ ಕಟ್ಟಿಹಾಕಲು ಸಾಧ್ಯವಾಗಿತ್ತು.
ಇದನ್ನೂ ಓದಿ IND vs ENG: ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳು ಹೀಗಿದೆ