Mumbai Marathon 2026: ಇಥಿಯೋಪಿಯಾದ ತಾಡು ಅಬಾಟೆ ಡೆಮೆ ಹಾಗೂ ಯೆಶಿ ಕಲಾಯು ಚೆಕೋಲೆ ಚಾಂಪಿಯನ್!
2026ರ ಮುಂಬೈ ಮ್ಯಾರಥಾನ್ ಅನ್ನು ಇಥಿಯೋಪಿಯಾದ ತಾಡು ಅಬಾಟಿ ಡೆಮೆ ಹಾಗೂ ಯೇಶಿ ಕಲಾಯ ಚೆಕೊಲೆ ಗೆದ್ದುಕೊಂಡಿದ್ದಾರೆ. ಅಗ್ರ ಮೂರು ಸ್ಥಾನ ಪಡೆದವರು ಕ್ರಮವಾಗಿ ಯುಎಸ್‌ಡಿ 50,000, 25,000 ಮತ್ತು 15,000 ನಗದು ಬಹುಮಾನವನ್ನು ಪಡೆದರು.
ಮುಂಬೈ ಮ್ಯಾರಥಾನ್ ಗೆದ್ದ ತಾಡು ಅಬಾಟೆ, ಯೆಶಿ ಚೆಕೋಲೆ. -
ಮುಂಬೈ: ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಆಗಿರುವ 21ನೇ ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ(Mumbai Marathon) ಇಥಿಯೋಪಿಯಾದ ತಾಡು ಅಬಾಟೆ ಡೆಮೆ (Tadu Abate) ಮತ್ತು ಯೇಶಿ ಕಲಾಯು ಚೆಕೊಲೆ (Yeshi Chekole) ಪ್ರಶಸ್ತಿಗೆ ಭಾಜನರಾದರು. ಅಗ್ರ ಮೂರು ಸ್ಥಾನ ಪಡೆದವರು ಕ್ರಮವಾಗಿ ಯುಎಸ್‌ಡಿ 50,000, ಯುಎಸ್‌ಡಿ 25,000 ಮತ್ತು ಯುಎಸ್‌ಡಿ 15,000 ಬಹುಮಾನ ಪಡೆದರು. ಯೇಶಿ ಚೆಕೊಲೆ ಅವರಿಗೆ ಇದು ಪ್ರಮುಖ ಮ್ಯಾರಥಾನ್‌ನಲ್ಲಿ ಮೊದಲ ಗೆಲುವಾಗಿದ್ದು, 2019ರಿಂದ ಈ ಮ್ಯಾರಥಾನ್‌ನಲ್ಲಿ ಸ್ಪರ್ಧಿಸುತ್ತಿದ್ದರು. 28 ವರ್ಷದ ಯೇಶಿ ಶಾಂತವಾಗಿ ಓಡಿ ಬಲವಾದ ಅಂತ್ಯ ಸಾಧಿಸಿದರು.
ಸ್ಪರ್ಧೆಯ ಆರಂಭದಲ್ಲಿ ಸುಮಾರು ಹನ್ನೆರಡು ಇಥಿಯೋಪಿಯನ್ ಮಹಿಳಾ ಅಥ್ಲೀಟ್‌ಗಳು ಒಟ್ಟಾಗಿ ಓಟ ಆರಂಭಿಸಿದರು. ಇವರಲ್ಲಿ ಕಳೆದ ವರ್ಷದ ಮೂರನೇ ಸ್ಥಾನ ಪಡೆದ ಮೆಡಿನಾ ಡೆಮೆ ಆರ್ಮಿನೊ ಹಾಗೂ 2:20:59 ವೈಯಕ್ತಿಕ ಶ್ರೇಷ್ಠ ಸಮಯ ಹೊಂದಿದ್ದ ಶೂರೆ ಡೆಮಿಸೆ ಪ್ರಮುಖರಾಗಿದ್ದರು. ಕಳೆದ ವರ್ಷದ ಮೊದಲ ಎರಡು ಸ್ಥಾನ ಪಡೆದ ಜಾಯ್ಸ್ ಚೆಪ್ಕೆಮೊಯ್ ಮತ್ತು ಶಿಟಾಯೆ ಎಶೇಟೆ ಸ್ಪರ್ಧಿಸದ ಹಿನ್ನೆಲೆ, ಆರ್ಮಿನೊ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದರು.
TATA Mumbai Marathon 2026: ಅಂತಾರಾಷ್ಟ್ರೀಯ, ಭಾರತೀಯ ಎಲೀಟ್ ಓಟಗಾರರು ಸಜ್ಜು!
ಮುಂಬೈ ಮಾರ್ಗದ ಅನುಭವದಿಂದ ಆರ್ಮಿನೊ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿದರೂ ನಂತರ ಲೀಡರ್ ಕಿಡ್ಸಾನ್ ಅಲೆಮಾ ಎದುರು ನಿಧಾನವಾಗಿ ಹಿಂದುಳಿದರು. ಯೇಶಿ ಕಿಡ್ಸಾನ್ ಜೊತೆಗೆ ಗೋಜ್ಜಾಮ್ ಟೆಸ್ಗಾಯೆ ಮತ್ತು ಬಿರ್ಕೆ ಡೆಬೆಲೆ ಅವರೊಂದಿಗೆ ಮೂರು-ನಾಲ್ಕು ಭಾಗದವರೆಗೆ ಸಾಗಿದರು. ಕೊನೆಯ ಕೆಲವು ಕಿಲೋಮೀಟರ್‌ಗಳಲ್ಲಿ ಯೇಶಿ ಮುನ್ನಡೆ ಪಡೆದು ಒಂಟಿಯಾಗಿ ಓಡಿ 2:25:13 ಸಮಯದಲ್ಲಿ ಗೆಲುವು ಸಾಧಿಸಿದರು. ಇದು ಮುಂಬೈ ಮ್ಯಾರಥಾನ್ ಇತಿಹಾಸದಲ್ಲಿನ ಐದನೇ ವೇಗವಾದ ಮಹಿಳಾ ಜಯ ಸಮಯವಾಗಿದೆ.
ಇಂದು ಚಾಂಪಿಯನ್ ಆಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಹವಾಮಾನದಿಂದ ಸ್ವಲ್ಪ ಅಸ್ಥಿರತೆ ಅನುಭವಿಸಿದೆ, ಆದರೂ ಫಲಿತಾಂಶದಿಂದ ತೃಪ್ತಿಯಾಗಿದ್ದೇನೆ. ಏರು ಮತ್ತು ಇಳಿಜಾರಿನ ಭಾಗಗಳಲ್ಲಿ ನಾನು ಉತ್ತಮವಾಗಿ ಓಡಿದೆ ಎಂದು ಯೇಶಿ ಹೇಳಿದರು.
ಪುರುಷರ ಎಲೈಟ್ ಮ್ಯಾರಥಾನ್‌ನಲ್ಲಿ ಕೆನ್ಯಾದ ಲಿಯೋನಾರ್ಡ್ ಲಾಂಗಟ್, ಎರಿಟ್ರಿಯಾದ ಮೆರ್ಹಾವಿ ಕೆಸೆಟೆ ಮತ್ತು ಇಥಿಯೋಪಿಯಾದ ತಾಡು ಅಬಾಟೆ ನಡುವಿನ ತೀವ್ರ ಪೈಪೋಟಿ ಆರಂಭದಿಂದಲೇ ಕಂಡುಬಂತು.
Mumbai: The 21st edition of the Tata Mumbai Marathon concluded at the historic Chhatrapati Shivaji Maharaj Terminus (CSMT) on Sunday. Ethiopian runners, Tadu Abate Deme and Yeshi Kalayu Chekole, emerged as notable winners at the World Athletics gold label event. pic.twitter.com/ljjMHhHY6z
— LEGEND NEWS (@LegendNewsin) January 18, 2026
40 ಕಿ.ಮೀ.ವರೆಗೆ ಅಬಾಟೆ ಮತ್ತು ಲಾಂಗಟ್ ಮುನ್ನಡೆ ಬದಲಾಯಿಸಿಕೊಂಡು ಓಡಿದರು. ಕೊನೆಯ ಕಿಲೋಮೀಟರ್‌ನಲ್ಲಿ ಅಬಾಟೆ ವೇಗ ಹೆಚ್ಚಿಸಿ 2:09:55 ಸಮಯದಲ್ಲಿ ಮೊದಲಿಗನಾಗಿ ಗುರಿ ತಲುಪಿದರು. ಲಾಂಗಟ್ 15 ಸೆಕೆಂಡುಗಳ ಬಳಿಕ ಎರಡನೇ ಸ್ಥಾನ ಪಡೆದರೆ, ಕೆಸೆಟೆ 2:10:22 ಸಮಯದಲ್ಲಿ ಮೂರನೇ ಸ್ಥಾನ ಪಡೆದರು. ಈ ಗೆಲುವಿನೊಂದಿಗೆ ಮುಂಬೈನಲ್ಲಿಏಳನೇ ಬಾರಿ ಇಥಿಯೋಪಿಯಾ ಪುರುಷ ಮತ್ತು ಮಹಿಳಾ ಶೀರ್ಷಿಕೆಗಳನ್ನು ಒಟ್ಟಾಗಿ ಗೆದ್ದರು.
🇮🇳 @TataMumMarathon results:
— Marathon News (@Marathon_N) January 18, 2026
🏃♂️
🥇 Tadu Abate Deme 🇪🇹 2:09:55
🥈 Leonard Langat 🇰🇪 2:10:10
🥉 Merhawi Kesete Weldemaryam 🇪🇷 2:10:22
🏃♀️
🥇 Yeshi Kalayu Chekole 🇪🇹 2:25:13
🥈 Kidsan Alema Gebremedhin 🇪🇹 2:27:35
🥉 Gojjam Tsegaye Enyew 🇪🇹 2:28:27 #Marathon https://t.co/LCVMsAdkkY
ಭಾರತೀಯ ಎಲೈಟ್ ವಿಭಾಗ
ಮಹಿಳಾ ವಿಭಾಗದಲ್ಲಿ ಸಂಜೀವನಿ ಜಾಧವ್ ತಮ್ಮ ಮೊದಲ ಮ್ಯಾರಥಾನ್‌ನಲ್ಲೇ 2:49:02 ಸಮಯದಲ್ಲಿ ಓಡಿ, ಒಟ್ಟಾರೆ 10ನೇ ಸ್ಥಾನ ಮತ್ತು ಭಾರತೀಯ ಮಹಿಳೆಯರಲ್ಲಿ ಮೊದಲ ಸ್ಥಾನ ಪಡೆದರು. ನಿರ್ಮಾಬೆನ್ ಠಾಕೂರ್ 2:49:13 ಸಮಯದಲ್ಲಿ ಎರಡನೇ ಸ್ಥಾನ ಪಡೆದರೆ, ಸೋನಂ 2:49:24 ಸಮಯದಲ್ಲಿ ಮೂರನೇ ಸ್ಥಾನ ಪಡೆದರು.
ಪುರುಷರ ವಿಭಾಗದಲ್ಲಿ ರಷ್ಯಾದಲ್ಲಿ ತರಬೇತಿ ಪಡೆಯುತ್ತಿರುವ ಕಾರ್ತಿಕ್ ಕಾರ್ಕೇರಾ 2:19:55 ಹೊಸ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಟಾಪ್ ಭಾರತೀಯ ಪುರುಷ ಓಟಗಾರನಾಗಿ ಹೊರಹೊಮ್ಮಿದರು. ಅನಿಶ್ ಠಾಪಾ 2:20:08 ಸಮಯದಲ್ಲಿ ಎರಡನೇ ಸ್ಥಾನ ಮತ್ತು ಪ್ರದೀಪ್ ಚೌಧರಿ 2:20:49 ಸಮಯದಲ್ಲಿ ಮೂರನೇ ಸ್ಥಾನ ಪಡೆದರು. ಭಾರತೀಯ ಎಲೈಟ್ ಪುರುಷ ಹಾಗೂ ಮಹಿಳಾ ವಿಭಾಗದ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹5 ಲಕ್ಷ, ₹4 ಲಕ್ಷ ಮತ್ತು ₹3 ಲಕ್ಷ ಬಹುಮಾನ ನೀಡಲಾಯಿತು.