ಸತತ ಎರಡನೇ ಬಾರಿ ಕಬಡ್ಡಿ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ಮಹಿಳಾ ತಂಡ!
2025ರ ಮಹಿಳಾ ಕಬಡ್ಡಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಚೈನೀಸ್ ತೈಪೆ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಫೈನಲ್‌ನಲ್ಲಿ ಕಠಿಣ ಹೋರಾಟ ನಡೆಸಿದ ಭಾರತ ಮಹಿಳಾ ತಂಡ, ಎದುರಾಳಿ ಚೈನೀಸ್ ತೈಪೆ ವಿರುದ್ಧ 35-28 ಅಂತರದಲ್ಲಿ ಗೆದ್ದಿದೆ. ಆ ಮೂಲಕ ಭಾರತ ಮಹಿಳಾ ತಂಡ, ಎರಡನೇ ಬಾರಿ ಕಬಡ್ಡಿ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ.
ಭಾರತ ಮಹಿಳಾ ತಂಡಕ್ಕೆ ಎರಡನೇ ಕಬಡ್ಡಿ ವಿಶ್ವಕಪ್ ಕಿರೀಟ. -
ನವದೆಹಲಿ: ಭಾರತ ಮಹಿಳಾ ಕಬಡ್ಡಿ (India women team) ತಂಡ, 2025ರ ಮಹಿಳಾ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು (Women's Kabaddi World Cup) ಮುಡಿಗೇರಿಸಿಕೊಂಡಿತು. ಆ ಮೂಲಕ ಸತತ ಎರಡನೇ ಬಾರಿ ಕಬಡ್ಡಿ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಸೋಮವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ( Chinese Taipei) ವಿರುದ್ಧ ಭಾರತ ಮಹಿಳಾ ತಂಡ 35-28 ಅಂತರದಲ್ಲಿ ಗೆದ್ದು ಬೀಗಿತು. ಚೈನೀಸ್ ತೈಪೆ ಕೂಡ ಭಾರತದ ಎದುರು ಕಠಿಣ ಪೈಪೋಟಿ ನೀಡಿತ್ತಾದರೂ ಅದನ್ನು ಭಾರತ ವನಿತೆಯರು ಫೈನಲ್ ಪಂದ್ಯದ ಒತ್ತಡವನ್ನು ಮೆಟ್ಟಿ ನಿಂತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದ್ದ ಫೈನಲ್‌ವರೆಗೂ ಭಾರತ ಅಜೇಯ ಓಟ ಮುಂದುವರಿಸಿತ್ತು. ಗುಂಪು ಹಂತದ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಅಂತಿಮ ನಾಲ್ಕರ ಪಂದ್ಯದಲ್ಲಿ ಇರಾನ್ ವಿರುದ್ಧ ಭಾರತ ಮಹಿಳಾ ತಂಡ, ಇರಾನ್ ವಿರುದ್ಧ 33-21 ಅಂತರಲ್ಲಿ ಗೆದ್ದು ಬೀಗಿತ್ತು. ಆ ಮೂಲಕ ಭಾರತ ಮಹಿಳಾ ತಂಡ ಫೈನಲ್‌ಗೆ ಪ್ರವೇಶ ಮಾಡಿತ್ತು. ಭಾರತ ತಂಡದ ಪರ ಚೈನೀಸ್ ತೈಪೆ ಕೂಡ ಅಜೇಯವಾಗಿ ಫೈನಲ್‌ಗೆ ಬಂದಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ಚೈನೀಸ್ ತೈಪೆ ತಂಡ 25-18ರ ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಬಂದಿತ್ತು.
ಬೆಂಗಳೂರಿನ ಪಿಇಎಸ್ ವಿದ್ಯಾರ್ಥಿ ನವೀನ್‌ಗೆ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ!
ಭಾರತ ಹಾಗೂ ಚೈನೀಸ್ ತೈಪೆ ತಂಡಗಳ ನಡುವಣ ಫೈನಲ್ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು, ಆರಂಭಿಕ ಹಂತಗಳಲ್ಲಿ ಚೈನೀಸ್ ತೈಪೆ ಭಾರತದ ರಕ್ಷಣೆಗೆ ಸವಾಲು ಹಾಕಿತು. ಆದಾಗ್ಯೂ, ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಹಿಡಿತವನ್ನು ಕಾಯ್ದುಕೊಂಡು ಶಿಸ್ತುಬದ್ಧ ಟ್ಯಾಕಲ್‌ಗಳು ಮತ್ತು ಸಮಯೋಚಿತ ದಾಳಿಗಳ ಮೂಲಕ ಭಾರತ ಕ್ರಮೇಣ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿತು.
💥💥💥💥💥
— SPORTS ARENA🇮🇳 (@SportsArena1234) November 24, 2025
TEAM INDIA ARE WORLD CUP CHAMPIONS 🏆🇮🇳
India Women Kabaddi Team beat Chinese Taipei 🇹🇼 35-28 in the WC final to clinch & defend the Kabaddi World Cup Title 🏆
Superlative tournament for our girls - unbeaten
Watch👇👇
Video courtesy: T Sports YT
💥💥💥💥💥 pic.twitter.com/oPdeAWOLiH
ಎರಡೂ ವಿಭಾಗಗಳಲ್ಲಿನ ಅವರ ಸಮತೋಲಿತ ವಿಧಾನ ಮತ್ತು ಆಳವು ಅಂತಿಮ ಹಂತಗಳಲ್ಲಿ ನಿರ್ಣಾಯಕವೆಂದು ಸಾಬೀತಾಯಿತು. ಈ ಬಾರಿಯ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 11 ದೇಶಗಳು ಭಾಗವಹಿಸಿದ್ದು, ಕ್ರೀಡೆಯ ತ್ವರಿತ ಅಂತಾರಾಷ್ಟ್ರೀಯ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
Dominance of Indian Women's Kabaddi Team 💪
— The Khel India (@TheKhelIndia) November 24, 2025
- 2/2 times World Champion 🏆🏆
- 3/4 times Asian Games Gold Medalist 🥇🥇🥇🥈
- 5/5 times Asian Champion 🏆🏆🏆🏆🏆
THE GIRLS HAS MADE WHOLE INDIA PROUD 🇮🇳 pic.twitter.com/41jUklwryi
ಪ್ರಸ್ತುತ ಭಾರತದ ಹೆಣ್ಣುಮಕ್ಕಳು ಇಡೀ ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ಕಳೆದ 30 ದಿನಗಳಲ್ಲಿ ಭಾರತ 3 ವಿಶ್ವಕಪ್ ಗೆದ್ದಿದೆ. ಮೊದಲನೆಯದಾಗಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡ, ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮಹಿಳಾ ವಿಶ್ವಕಪ್ ಗೆದ್ದಿದೆ. ಇದರ ನಂತರ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಅಂಧ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿತು. ಅವರು ಕೊಲಂಬೊದಲ್ಲಿ ನಡೆದ ಫೈನಲ್‌ನಲ್ಲಿ ನೇಪಾಳವನ್ನು 7 ವಿಕೆಟ್‌ಗಳಿಂದ ಸೋಲಿಸಿ ಅಂಧ ಮಹಿಳಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದರು. ಅಂಧ ಮಹಿಳಾ ಟಿ20 ವಿಶ್ವಕಪ್ ನಡೆದಿದ್ದು ಇದೇ ಮೊದಲು. ಇದರ ನಂತರ, ಭಾರತೀಯ ಮಹಿಳಾ ಕಬಡ್ಡಿ ತಂಡವು ವಿಶ್ವಕಪ್ ಗೆದ್ದಿತು.