ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

JK Tyre Racing Season: ರಾಯಲ್‌ ಎನ್‌ಫೀಲ್ಡ್‌ ಕಾಂಟಿನೆಂಟಲ್‌ ಜಿಟಿ ಕಪ್‌ನಲ್ಲಿ ಅನಿಶ್‌ ಶೆಟ್ಟಿಗೆ ನಿರಾಶೆ!

ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ ಹಾಗೂ ಭಾನುವಾರ ನಡೆದಿದ್ದ 2025ರ ಜೆಕೆ ಟೈಯರ್‌ ರೇಸಿಂಗ್‌ ಸೀಸನ್‌ನ ಎರಡನೇ ಸುತ್ತಿನಲ್ಲಿ ಯುವ ಹಾಗೂ ಅನುಭವಿ ರೇಸರ್‌ಗಳು ಮಿಂಚಿದರು. ರಾಯಲ್‌ ಎನ್‌ಫೀಲ್ಡ್‌ ಕಾಂಟಿನೆಂಟಲ್‌ ಜಿಟಿ ಕಪ್‌ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡರು. ಈ ವಿಭಾಗದಲ್ಲಿ ನವನೀತ್‌ ಕುಮಾರ್‌ ಚಾಂಪಿಯನ್‌ ಆದರು.

ಕೊಯಮತ್ತೂರಿನಲ್ಲಿ ಕನ್ನಡಿಗ ಅನಿಶ್‌ ಶೆಟ್ಟಿಗೆ ನಿರಾಶೆ!

ಜೆಕೆ ಟೈರ್ ರೇಸಿಂಗ್ ಸೀಸನ್ 2025 -

Profile Ramesh Kote Sep 28, 2025 8:43 PM

ಕೊಯಮತ್ತೂರು: ನಗರದ ಹೊರವಲಯದಲ್ಲಿರುವ ಕರಿ ಮೋಟಾರ್ ಸ್ಪೀಡ್‌ವೇನಲ್ಲಿ 2025ರ ಜೆಕೆ ಟೈಯರ್ ರೇಸಿಂಗ್ ಸೀಸನ್‌ (JK Tyre Racing Season 2025) ಎರಡನೇ ಸುತ್ತಿನ ರೇಸಿಂಗ್ ನಡೆಯಿತು. ಅನುಭವಿ ರೇಸರ್‌ಗಳು ಮತ್ತು ಹೊಸ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಿ ಮೋಟಾರ್ ಸ್ಪೋರ್ಟ್ಸ್‌ನ ಸಂಭ್ರಮವನ್ನು ಹೆಚ್ಚಿಸಿದರು. ಗುರುಗ್ರಾಮ್‌ನ 10ನೇ ತರಗತಿಯ ವಿದ್ಯಾರ್ಥಿ ನಿಹಾಲ್ ಸಿಂಗ್ (Nihal Singh) ತಮ್ಮ ವೇಗ ಮತ್ತು ಉತ್ಸಾಹದಿಂದ ಎಲ್ಲರ ಗಮನ ಸೆಳೆದರು. ಅನುಭವಿ ರೇಸರ್‌ಗಳೊಂದಿಗೆ ಸ್ಪರ್ಧೆ ನಡೆಸಿದ ನಿಹಾಲ್, ಶನಿವಾರದ ಮೊದಲ ರೇಸ್‌ನಲ್ಲಿ ವಿಜಯಶಾಲಿಯಾದರು. ಆದರೆ, ರಾಯಲ್‌ ಎನ್‌ಫೀಲ್ಡ್‌ ಕಾಂಟಿನೆಂಟಲ್‌ ಜಿಟಿ ಕಪ್‌ ರೇಸ್‌ನಲ್ಲಿ ಕನ್ನಡಿಗ ಅನಿಶ್‌ ಶೆಟ್ಟಿ (Anish Shetty) ವಿಫಲರಾದರು.

ಭಾನುವಾರ ನಡೆದ ರೇಸ್‌ನ ಪ್ರಮುಖ ಅಂಶವೆಂದರೆ ಜೈ ಪ್ರಶಾಂತ್ ಮತ್ತು ಮೀರಾ ಎರ್ಡಾ ನಡುವಿನ ನಾಲ್ಕನೇ ರೇಸ್‌ನಲ್ಲಿ ಅತಿಥಿ ಚಾಲಕಿಯಾಗಿ ಸ್ಪರ್ಧಿಸಿದ್ದರು. 15 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಮೀರಾ ಎಲ್ಲಾ ನಾಲ್ಕು ರೇಸ್‌ಗಳಲ್ಲಿ ಪೋಡಿಯಂ ಸ್ಥಾನ ಪಡೆದು ತಮ್ಮ ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಿದರು. ಎರಡು ದಿನಗಳ ಕಾಲ ನಡೆದಿದ್ದ ಸಿಂಗಲ್-ಮೇಕ್ ಲೆವಿಟಾಸ್ ಕಪ್ ರೇಸ್‌ಗಳು, ಯುವ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಯಂತ್ರದ ಸಾಮರ್ಥ್ಯವನ್ನು ತೋರಿಸಿದವು. ಜೈ ಪ್ರಶಾಂತ್ ನಾಲ್ಕನೇ ರೇಸ್‌ನಲ್ಲಿ 1:26.100ಕ್ಕೆ ತಮ್ಮ ಅತ್ಯುತ್ತಮ ಲ್ಯಾಪ್ ಅನ್ನು ತಲುಪುವ ಮೂಲಕ ಉತ್ತುಂಗಕ್ಕೇರಿದರು.

ಸೆ. 27 ರಂದು 2025ರ ಜೆ.ಕೆ ರೇಸಿಂಗ್‌ ಎರಡನೇ ಸುತ್ತು ಆರಂಭ: ಬೆಂಗಳೂರಿನ ಅನೀಶ್‌ ಶೆಟ್ಟಿ ಪ್ರಮುಖ ಆಕರ್ಷಣೆ!

ಕನ್ನಡಿಗ ಅನಿಶ್‌ ಶೆಟ್ಟಿಗೆ ನಿರಾಶೆ

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ವಿಭಾಗದಲ್ಲಿ ನವನೀತ್ ಕುಮಾರ್ ಮತ್ತು ಅನಿಶ್ ಡಿ ಶೆಟ್ಟಿ ತೀವ್ರ ಪೈಪೋಟಿ ನಡೆಸಿದರು. ಮೂರನೇ ರೇಸ್‌ನ ಅಂತಿಮ ಸುತ್ತಿನಲ್ಲಿ ನವನೀತ್ ಕೇವಲ 0.002 ಸೆಕೆಂಡಿನ ಅಂತರದಿಂದ ಅನಿಶ್ ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸಿದರು. ನವನೀತ್ ಒಟ್ಟು ಸಮಯ 13:21.934 ದಾಖಲಿಸಿದರೆ, ಅನಿಶ್ ಅತ್ಯುತ್ತಮ ಲ್ಯಾಪ್ ಸಮಯ 1:16.898 ದಾಖಲಿಸಿದರು.



‘ಸ್ಟ್ರೀಟ್ ಟು ಸರ್ಕ್ಯೂಟ್’ ಎಂಬ ಥೀಮ್‌ನಡಿ ದೇಶದ ವಿವಿಧ ಭಾಗಗಳಿಂದ ಹೊಸ ಬೈಕ್ ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಜೆಕೆ ಟೈಯರ್ ನೊವೀಸ್ ಕಪ್ ವಾರಾಂತ್ಯಕ್ಕೆ ಮತ್ತೊಂದು ಮನರಂಜನೆ ನೀಡಿತು. ಉದಯೋನ್ಮುಖ ರೇಸರ್‌ಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಸ್ಪರ್ಧಾತ್ಮಕ ಅನುಭವವನ್ನು ಪಡೆಯಲು ನಿರ್ಣಾಯಕ ವೇದಿಕೆಯನ್ನು ನೀಡಿತು. ಮೂರು ಕಠಿಣ ಪೈಪೋಟಿಯ ರೇಸ್‌ಗಳಲ್ಲಿ MSPORT‌ನ ಭುವನ್ ಬೋನು ರೇಸ್ 1 (16:06.951) ಮತ್ತು ರೇಸ್ 3 (16:26.624) ನಲ್ಲಿ ಜಯಶಾಲಿಯಾದರೆ, ಮೊಮೆಂಟಮ್ ಮೋಟಾರ್‌ಸ್ಪೋರ್ಟ್ಸ್‌ನ ಅಭಿಜೀತ್ ವದವಳ್ಳಿ ರೇಸ್ 2ರಲ್ಲಿ 14:23.860 ಸಮಯದೊಂದಿಗೆ ಗೆದ್ದರು.