HIL 2025 Auction: ಹರಾಜಿಗೂ ಮುನ್ನ ತನ್ನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ ಎಸ್‌ಜಿ ಪೈಪರ್ಸ್!
ಮುಂಬರುವ 2025ರ ಹಾಕಿ ಇಂಡಿಯಾ ಲೀಗ್ ಟೂರ್ನಿಯ ಆಟಗಾರರ ಹರಾಜಿಗೂ ಮುನ್ನ ಎಸ್‌ಜಿ ಪೈಪರ್ಸ್ ತಂಡ ತನ್ನ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶಿ ಹಾಗೂ ಅಂತಾರಾಷ್ಟ್ರೀಯ ಮಿಶ್ರಣದೊಂದಿಗೆ ಆಟಗಾರರನ್ನು ಎಸ್‌ಜಿ ಪೈಪರ್ಸ್ ಉಳಿಸಿಕೊಂಡಿದೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಹಾಕಿ ಇಂಡಿಯಾ ಲೀಗ್ ಹರಾಜಿಗೂ ಮುನ್ನ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿದ ಎಸ್‌ಜಿ ಪೈಪರ್ಸ್. -

ಬೆಂಗಳೂರು: 2025ರ ಹಾಕಿ ಇಂಡಿಯಾ ಲೀಗ್ (HIL) ಟೂರ್ನಿಯ ಆಟಗಾರರ ಹರಾಜಿಗೂ ಮುಂಚಿತವಾಗಿ ಎಸ್‌ಜಿ (SG) ಪೈಪರ್ಸ್ ತನ್ನ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿ ದೇಶಿ ಪ್ರತಿಭೆಗಳನ್ನು ಬೆಳೆಸುವ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಅನುಭವವಿರುವ ಆಟಗಾರರನ್ನು ಒಗ್ಗೂಡಿಸಲಿದೆ. ಎಸ್‌ಜಿ ಪೈಪರ್ಸ್ ಕೋಚಿಂಗ್ ತಂಡವು ಡೈರೆಕ್ಟರ್ ಆಫ್ ಹಾಕಿ ಶ್ರೀಜೀಶ್ ಪಿಆರ್ (sreejesh PR) ಜೊತೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪೈಪರ್ಸ್ ತಂಡವು ವೆಲ್ಷ್ ಇಂಟರ್ನ್ಯಾಷನಲ್ ಜಾಕೋಬ್ ಡ್ರೇಪರ್ ಅವರ ಸ್ವಾಧೀನವನ್ನು ಸಹ ಪೂರ್ಣಗೊಳಿಸಿದೆ. ಕಳೆದ ಸೀಸನ್‌ನಲ್ಲಿ ಜಾಕೋಬ್ ಡ್ರೇಪರ್ ಎಲ್ಲ 10 ಪಂದ್ಯಗಳಲ್ಲೂ ಆಡಿದ ಅನುಭವ ಹೊಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್‌ಜಿ ಪೈಪರ್ಸ್‌ನ ಹಾಕಿ ನಿರ್ದೇಶಕ ಶ್ರೀಜೇಶ್ ಪಿಆರ್ ಕೋರ್ ತಂಡವನ್ನು ಉಳಿಸುವುದು ಅತ್ಯಂತ ಮುಖ್ಯ. ಕಳೆದ ಬಾರಿ ಆರು ಪ್ರಮುಖ ಆಟಗಾರರ ಕೊರತೆಯಿಂದ ತೊಂದರೆಯಾಯಿತು. ಒಲಂಪಿಕ್ ಪದಕ ವಿಜೇತ ಶಂಶೇರ್, ಜರ್ಮನ್‌ಪ್ರೀತ್, ರಾಜ್‌ಕುಮಾರ್, ವರೂಣ್ ಮತ್ತು ಉತ್ಸಾಹಿ ಯುವ ಆಟಗಾರರ ಸಮತೋಲನದಿಂದ ನಾವು ಉತ್ತಮ ಸ್ಪರ್ಧೆಗೆ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
Hong Kong Open: ಸೆ,ಮಿಫೈನಲ್ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಸಾತ್ವಿಕ್-ಚಿರಾಗ್ ಜೋಡಿ!
ಆಟಗಾರರ ಪೂರ್ಣ ವಿವರ
ಟೋಮಾಸ್ ಸ್ಯಾಂಟಿಯಾಗೋ – ಗೋಲ್ಕೀಪರ್, ಅರ್ಜೆಂಟೀನಾ
ಪವನ – ಗೋಲ್ಕೀಪರ್, ಭಾರತ
ಜರ್ಮನ್‌ಪ್ರೀತ್ ಸಿಂಗ್ – ಡಿಫೆಂಡರ್, ಭಾರತ
ವರೂಣ್ ಕುಮಾರ್ – ಡಿಫೆಂಡರ್, ಭಾರತ
ರೋಹಿತ್ – ಡಿಫೆಂಡರ್, ಭಾರತ
ಮಂಜೀತ್ – ಡಿಫೆಂಡರ್, ಭಾರತ
ಗ್ಯಾರೆತ್ ಫರ್ಡ್ಲಾಂಗ್ – ಡಿಫೆಂಡರ್, ವೆಲ್ಸ್
ಶಂಶೇರ್ ಸಿಂಗ್ – ಮಿಡ್‌ಫೀಲ್ಡರ್, ಭಾರತ
ಜೆಕಬ್ ಡ್ರೇಪರ್ – ಮಿಡ್‌ಫೀಲ್ಡರ್, ವೆಲ್ಸ್ (ಟ್ರೇಡ್)
ರಾಜ್‌ಕುಮಾರ್ ಪಾಲ್ – ಮಿಡ್‌ಫೀಲ್ಡರ್, ಭಾರತ
ಅಂಕಿತ್ ಪಾಲ್ – ಮಿಡ್‌ಫೀಲ್ಡರ್, ಭಾರತ
ಕಿಂಗ್ಸನ್ ಸಿಂಗ್ – ಮಿಡ್‌ಫೀಲ್ಡರ್, ಭಾರತ
ಕೆ. ವೈಲಾಟ್ – ಮಿಡ್‌ಫೀಲ್ಡರ್, ಆಸ್ಟ್ರೇಲಿಯಾ
ಟೋಮಾಸ್ ಡೊಮೆನೆ – ಫಾರ್ವರ್ಡ್, ಅರ್ಜೆಂಟೀನಾ
ಆದಿತ್ಯ ಲಳಾಜೆ – ಫಾರ್ವರ್ಡ್, ಭಾರತ
ಸೌರಭ್ ಆನಂದ್ ಖುಷ್ವಾಹಾ – ಫಾರ್ವರ್ಡ್, ಭಾರತ
ದಿಲರಾಜ್ ಸಿಂಗ್ – ಫಾರ್ವರ್ಡ್, ಭಾರತ
Presenting the SG Pipers' player retentions ahead of the Hockey India League 2026 auction! 🏑#SGPipers #StrongerTogether #DankaBaja #HockeyIndiaLeague pic.twitter.com/ktHhjGSmnc
— SG Pipers Official (@SGPipers) September 13, 2025
ಈ ಎಲ್ಲಾಆಟಗಾರರು ಕಳೆದ ಸೀಸನ್‌ನಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಭಿಮಾನಿಗಳನ್ನು ಮೆಚ್ಚಿಸಿದ ಆಟ ಪ್ರದರ್ಶಿಸಿದ್ದರು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಶಂಶೇರ್ ಸಿಂಗ್ ಆಟಕ್ಕೆ ಮರಳಿದ್ದಾರೆ. ಜರ್ಮನ್‌ಪ್ರೀತ್ ಸಿಂಗ್ ಭಾರತದ 2025ರ ಏಷ್ಯಾ ಕಪ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವರುಣ್ ಕುಮಾರ್ ತಮ್ಮ ವೇಗ ಮತ್ತು ಆಕ್ರಮಣಕಾರಿ ಟ್ಯಾಕ್ಲಿಂಗ್ ಮೂಲಕ ಬ್ಯಾಕ್‌ಲೈನ್ ಅನ್ನು ಮತ್ತಷ್ಟು ಬಲಪಡಿಸಲಿದ್ದಾರೆ.