ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈಷ್ಣವಿ ಮುಡಿಗೇರಿದ ಐಟಿಎಫ್ ಕಿರೀಟ

ಭಾನುವಾರ ಇಲ್ಲಿ ನಡೆದ ಐಟಿಎ-ಡಬ್ಲ್ಯೂ 35 ಕಲಬುರಗಿ ಓಪನ್ ಸಿಂಗಲ್ಸ್ ಫೈನಲ್‌ನಲ್ಲಿ ಮಹಾರಾಷ್ಟ್ರದ ಉದಯೋನ್ಮುಖ ತಾರೆ ವೈಷ್ಣವಿ ಅಡ್ಕರ್, ಭಾರತದ ಅಗ್ರಮಾನ್ಯ ಆಟಗಾರ್ತಿ ಅಂಕಿತಾ ರೈನಾ ಅವರನ್ನು ಮಣಿಸಿ ತನ್ನ ವೃತ್ತಿಜೀವನದ 2ನೇ ಐಟಿಎಫ್ ಕಿರೀಟ ಮುಡಿಗೇರಿಸಿ ಕೊಂಡರು.

ದೇವೇಂದ್ರ ಜಾಡಿ ಕಲಬುರಗಿ‌

ಕಲಬುರಗಿ ಐಟಿಎಫ್ ಟೆನಿಸ್‌ನಲ್ಲಿ ಅಡ್ಕರ್ ಆರ್ಭಟ ‌

ಅಂಕಿತಾ ರೈನಾಗೆ ಸೋಲುಣಿಸಿದ ಉದಯೋನ್ಮುಖ ತಾರೆ

ಭಾನುವಾರ ಇಲ್ಲಿ ನಡೆದ ಐಟಿಎ-ಡಬ್ಲ್ಯೂ 35 ಕಲಬುರಗಿ ಓಪನ್ ಸಿಂಗಲ್ಸ್ ಫೈನಲ್‌ನಲ್ಲಿ ಮಹಾರಾಷ್ಟ್ರದ ಉದಯೋನ್ಮುಖ ತಾರೆ ವೈಷ್ಣವಿ ಅಡ್ಕರ್, ಭಾರತದ ಅಗ್ರಮಾನ್ಯ ಆಟಗಾರ್ತಿ ಅಂಕಿತಾ ರೈನಾ ಅವರನ್ನು ಮಣಿಸಿ ತನ್ನ ವೃತ್ತಿಜೀವನದ 2ನೇ ಐಟಿಎಫ್ ಕಿರೀಟ ಮುಡಿಗೇರಿಸಿಕೊಂಡರು.

ಇಲ್ಲಿನ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ ಆರಂಭದಿಂದಲೇ ಅಂಕಿತಾ ರೈನಾ ಅವರ ಅನುಭವಕ್ಕೆ ಸಡ್ಡು ಹೊಡೆದ 21 ವರ್ಷದ ವೈಷ್ಣವಿ, 2 ಗಂಟೆ 14 ನಿಮಿಷಗಳ ಕಾಲ ನಡೆದ ಸುದೀರ್ಘ ಕಾದಾಟದಲ್ಲಿ 7-6(3), 6-4 ಅಂತರದಿಂದ ಜಯಭೇರಿ ಬಾರಿಸಿದರು. ಮೊದಲ ಸೆಟ್‌ನಲ್ಲಿ 6-6 ಸಮಬಲದ ನಂತರ ನಡೆದ ಟೈಬ್ರೇಕರ್‌ನಲ್ಲಿ ವೈಷ್ಣವಿ ತೋರಿದ ಸಂಯಮ ಪಂದ್ಯದ ದಿಕ್ಕನ್ನೇ ಬದಲಿಸಿತು.

ಇದನ್ನೂ ಓದಿ: Womens Singles Tennis: ಅಂಕಿತಾ ರೈನಾ, ವೈಷ್ಣವಿ ಅಡ್ಕರ್‌ ಕ್ವಾ.ಫೈನಲಿಗೆ

ದ್ವಿತೀಯ ಸೆಟ್‌ನಲ್ಲಿ 4-2 ಮುನ್ನಡೆ ಕಾಯ್ದುಕೊಂಡ ಅವರು, ಅಂಕಿತಾ ನೀಡಿದ ತೀವ್ರ ಪ್ರತಿರೋಧವನ್ನು ಮೆಟ್ಟಿ ನಿಂತು ಗೆಲುವಿನ ನಗೆ ಬೀರಿದರು. ಅವರು ಇತ್ತೀಚೆಗೆ ಬೆಂಗಳೂರಿ ನಲ್ಲಿ ನಡೆದ ಐಟಿಎಫ್ ಟೂರ್ನಿಯಲ್ಲೂ ಅವರು ರನ್ನರ್ ಅಪ್ ಆಗಿದ್ದರು. ‌

ಕಲಬುರಗಿ ನೆಕ್ಸ್ಟ್ ಫೌಂಡೇಶನ್, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಈ ಟೂರ್ನಿಯಲ್ಲಿ ರಷ್ಯಾ, ನೆದರ್ಲೆಂಡ್, ಇಸ್ರೇಲ್, ಥಾಯ್ಲೆಂಡ್ ಸೇರಿದಂತೆ 11 ದೇಶಗಳ 62 ಆಟಗಾರ್ತಿಯರು ಭಾಗವಹಿಸಿದ್ದರು.

ವಿಜೇತರಿಗೆ 4860 ಅಮೆರಿಕನ್ ಡಾಲರ್ ಹಾಗೂ 35 ಐಟಿಎಫ್ ಪಾಯಿಂಟ್ಗಳು, ರನ್ನರ್ ಅಪ್‌ಗೆ ೨2637 ಅಮೆರಿಕನ್ ಡಾಲರ್ ಹಾಗೂ 23 ಐಟಿಎಫ್ ಪಾಯಿಂಟ್‌ಗಳನ್ನು ನೀಡಲಾಯಿತು.

image

ಬೆಂಗಳೂರಿನ ಅನುಭವ ಕಲಬುರಗಿಯಲ್ಲಿ ಗೆಲ್ಲಲು ನನಗೆ ನೆರವಾಯಿತು. ಅಂಕಿತಾ ರೈನಾ ಕಠಿಣ ಪ್ರತಿಸ್ಪರ್ಧಿಯಾಗಿದ್ದ ಕಾರಣ ಪ್ರತೀ ಪಾಯಿಂಟ್‌ಗೂ ಹೋರಾಡಬೇಕಾಯಿತು. ತಾಪಮಾನ ಸವಾಲಾಗಿದ್ದರೂ ಸಿಂಗಲ್ಸ್ ಹಾಗೂ ಡಬಲ್ಸ್ ಎರಡರಲ್ಲೂ ಗೆದ್ದಿದ್ದು ಖುಷಿ ತಂದಿದೆ. ಮುಂದಿನ ಗುರಿ ಬಿಲ್ಲಿ ಜೀನ್‌ಕಿಂಗ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವು ದಾಗಿದೆ.

ವೈಷ್ಣವಿ ಅಡ್ಕರ್, ಐಟಿಎಫ್ ಚಾಂಪಿಯನ್