ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Womens Singles Tennis: ಅಂಕಿತಾ ರೈನಾ, ವೈಷ್ಣವಿ ಅಡ್ಕರ್‌ ಕ್ವಾ.ಫೈನಲಿಗೆ

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ವೈಷ್ಣವಿ, 6-2, 6-0 ಅಂತರದಲ್ಲಿ ಜಯ ಸಾಧಿಸಿದರು. ವಿಶೇಷವಾಗಿ 2ನೇ ಸೆಟ್‌ನಲ್ಲಿ ಎದುರಾಳಿಗೆ ಒಂದೂ ಅಂಕ ಬಿಟ್ಟು ಕೊಡದೆ ವೈಷ್ಣವಿ ಅನ್ನಾ ಸೆಡಿಶೇವಾ ವಿರುದ್ಧ ಕೇವಲ 55 ನಿಮಿಷಗಳಲ್ಲಿ ಪಂದ್ಯ ಮುಗಿಸಿ ಭಾರತದ ಟ್ರೋಫಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

ಅಂಕಿತಾ ರೈನಾ, ವೈಷ್ಣವಿ ಅಡ್ಕರ್‌ ಕ್ವಾ.ಫೈನಲಿಗೆ

-

Ashok Nayak
Ashok Nayak Mar 6, 2026 11:26 AM

ದೇವೇಂದ್ರ ಜಾಡಿ ಕಲಬುರಗಿ

ಐಟಿಎ-ಡಬ್ಲ್ಯೂ 35 ಕಲಬುರಗಿ | ಭಾರತದ ಪ್ರಶಸ್ತಿ ಆಸೆ ಜೀವಂತ | ಹೋರಾಡಿ ಸೋತ ಜೀಲ್ ದೇಸಾಯಿ

ಇಲ್ಲಿನ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿ ಎಫ್‌ʼಡಬ್ಲ್ಯೂ35 ಕಲಬುರಗಿ ಮಹಿಳಾ ಸಿಂಗಲ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಆಟಗಾರ್ತಿಯರು ಗುರುವಾರ ಅಮೋಘ ಪ್ರದರ್ಶನ ನೀಡಿದ್ದು, ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅಂಕಿತ ರೈನಾ ಹಾಗೂ ಉದಯೋನ್ಮುಖ ತಾರೆ ವೈಷ್ಣವಿ ಅಡ್ಕರ್ ಎದುರಾಳಿಗಳನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ವೈಷ್ಣವಿ, 6-2, 6-0 ಅಂತರದಲ್ಲಿ ಜಯ ಸಾಧಿಸಿದರು. ವಿಶೇಷವಾಗಿ 2ನೇ ಸೆಟ್‌ನಲ್ಲಿ ಎದುರಾಳಿಗೆ ಒಂದೂ ಅಂಕ ಬಿಟ್ಟು ಕೊಡದೆ ವೈಷ್ಣವಿ ಅನ್ನಾ ಸೆಡಿಶೇವಾ ವಿರುದ್ಧ ಕೇವಲ 55 ನಿಮಿಷಗಳಲ್ಲಿ ಪಂದ್ಯ ಮುಗಿಸಿ ಭಾರತದ ಟ್ರೋಫಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

ಇದನ್ನೂ ಓದಿ: Karnataka Budget 2026 Size: 4.48 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಸಿಎಂ; ಯಾವ ಇಲಾಖೆಗೆ ಎಷ್ಟು ಅನುದಾನ?

ಅಂಕಿತ ಪಾರಮ್ಯ: ಟೂರ್ನಿಯ 8ನೇ ಶ್ರೇಯಾಂಕಿತೆ ಅಂಕಿತ ರೈನಾ, ಉಜ್ಬೇಕಿಸ್ತಾನದ ಮಿಲಾನಾ ಮಸ್ಲೆಂಕೋವಾ ವಿರುದ್ಧ ಸುಮಾರು 1 ಗಂಟೆ 21 ನಿಮಿಷಗಳ ಕಾಲ ಬೆವರು ಹರಿಸಿ 6-2, 6-1 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿದರು. ಶಿಸ್ತಿನ ಸರ್ವ್ ಹಾಗೂ ಚಾಣಾಕ್ಷ ರಿಟರ್ನ್ಸ್ ಗಳ ಮೂಲಕ ಅಂಕಿತ ಎದುರಾಳಿಗೆ ಯಾವುದೇ ಹಂತದಲ್ಲೂ ತಿರುಗಿ ಬೀಳಲು ಅವಕಾಶ ನೀಡಲಿಲ್ಲ.



ಜೀಲ್ ದೇಸಾಯಿಗೆ ನಿರಾಸೆ: ಇದೇ ವೇಳೆ ನಡೆದ ಮತ್ತೊಂದು ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತದ ಜೀಲ್ ದೇಸಾಯಿ ಅವರು ಎಲಿನಾ ನೆಪ್ಲಿ ವಿರುದ್ಧ ತೀವ್ರ ಹೋರಾಟ ನೀಡಿ ಸೋಲೊಪ್ಪಿಕೊಂಡರು. ಸುಮಾರು 1 ಗಂಟೆ 49 ನಿಮಿಷ ನಡೆದ ಈ ಪಂದ್ಯದಲ್ಲಿ, ಒಂದು ಪಾಯಿಂಟ್‌ಗಾಗಿ ಇಬ್ಬರೂ ಆಟಗಾರ್ತಿಯರು 15 ನಿಮಿಷಗಳ ಕಾಲ ಸೆಣಸಾಡಿದ್ದು ಟೂರ್ನಿಯ ಕಾವನ್ನು ಹೆಚ್ಚಿಸಿತ್ತು.

image

ಐಟಿಎಫ್ ಟೂರ್ನಿಯಲ್ಲಿ ಫೈನಲ್ ಬಗ್ಗೆ ಈಗಲೇ ಯೋಚಿಸದೆ, ಒಂದೊಂದು ಪಂದ್ಯವನ್ನೇ ಸವಾಲಾಗಿ ಸ್ವೀಕರಿಸುತ್ತಿರುವುದು ಯಶಸ್ಸು ತಂದಿದೆ. ಕಲಬುರಗಿಯ ತಾಪಮಾನಕ್ಕೆ ಭಾರತೀಯಳಾಗಿ ನಾನು ಹೊಂದಿಕೊಂಡಿದ್ದೇನೆ, ಹೈಡ್ರೇಟ್ ಆಗಿರುವುದು ಇಲ್ಲಿ ಮುಖ್ಯ. ಎದುರಾಳಿಯ ಶಕ್ತಿ ಅರಿತು ಆಡುತ್ತಿದ್ದು, ಬೆಂಬಲಿಗರು ಮತ್ತು ಪೋಷಕರನ್ನು ಖುಷಿ ಪಡಿಸಲು ಉತ್ತಮ ಪ್ರದರ್ಶನ ನೀಡುವತ್ತ ನನ್ನ ಗಮನವಿದೆ.

-ವೈಷ್ಣವಿ ಅಡ್ಕರ್, ಭಾರತೀಯ ಟೆನಿಸ್ ಆಟಗಾರ್ತಿ
image

ಕಲಬುರಗಿಯಂತಹ ಸಣ್ಣ ನಗರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಟೂರ್ನಿ ಆಯೋಜಿಸುತ್ತಿರುವುದು ಮಹಿಳಾ ಕ್ರೀಡೆಗೆ ನೀಡುತ್ತಿರುವ ದೊಡ್ಡ ಪ್ರೋತ್ಸಾಹ. ಇದು ಅತ್ಯಂತ ಉತ್ತಮ ಬೆಳವಣಿಗೆಯಾಗಿದ್ದು, ಸ್ಥಳೀಯ ಪ್ರತಿಭೆಗಳಿಗೆ ಸ್ಪೂರ್ತಿ ನೀಡಲಿದೆ. ಪಂದ್ಯದ ವೇಳೆ ಬಿಸಿಲಿದ್ದರೂ ಪ್ಲಾನ್ ’ಎ’ ಮತ್ತು ’ಬಿ’ ಸಿದ್ಧವಿದ್ದ ಕಾರಣ ಗೆಲುವು ಸುಲಭವಾಯಿತು.

-ಅಂಕಿತಾ ರೈನಾ, ಭಾರತೀಯ ಟೆನಿಸ್ ಆಟಗಾರ್ತಿ