ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup final: ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ನೀತಾ ಅಂಬಾನಿ ಅಭಿನಂದನೆ

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟ್‌ಗೆ 298 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ ಗಳಿಶಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಭಾರತ ಪರ ಶಿಸ್ತು ಬದ್ದ ದಾಳಿ ನಡೆಸಿದ ಆಲ್ರೌಂಡರ್ ದೀಪ್ತಿ ಶರ್ಮಾ 39 ರನ್ ನೀಡಿ 5 ವಿಕೆಟ್ ಪಡೆದರು. ಬ್ಯಾಟಂಗ್‌ನಲ್ಲಿಯೂ ಮಿಂಚಿದ ಅವರು ಅರ್ಧಶತಕ ಸಿಡಿಸಿದರು.

ನಮ್ಮ ಹುಡುಗಿಯರು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ; ನೀತಾ ಅಂಬಾನಿ

ಮಹಿಳಾ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದಾಗ ನೀತಾ ಅಂಬಾನಿ ಸಂಭ್ರಮಿಸಿದ ಕ್ಷಣ -

Abhilash BC Abhilash BC Nov 3, 2025 5:01 PM

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ಭಾನುವಾರ ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಪ್‌ ಫೈನಲ್‌(Women's World Cup final) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(INDW vs SAW) ತಂಡವನ್ನು 52 ರನ್‌ ಅಂತರದಿಂದ ಮಣಿಸುವ ಮೂಲಕ ಚೊಚ್ಚಲ ವಿಶ್ವಕಪ್ ಗೆದ್ದ ಐತಿಹಾಸಿಕ ಸಾಧನೆ ಮಾಡಿತು. ಈ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ನೀತಾ ಎಂ. ಅಂಬಾನಿ(Nita Ambani) ಮತ್ತು ಆಕಾಶ್ ಅಂಬಾನಿ(Nita Ambani) ಅವರು, ಹರ್ಮನ್‌ಪ್ರೀತ್‌ ಕೌರ್ ಬಳಗವನ್ನು ಅಭಿನಂದಿಸಿದರು ಮತ್ತು ದೇಶಕ್ಕೆ ಅಪಾರ ಸಂತೋಷ, ಸಂಭ್ರಮ ತಂದಿದ್ದಕ್ಕಾಗಿ ತಂಡಕ್ಕೆ ಧನ್ಯವಾದ ತಿಳಿಸಿದರು.

'ಮಧ್ಯರಾತ್ರಿಯ ಸಮಯದಲ್ಲಿ ನಮ್ಮ ಹುಡುಗಿಯರು ಮೊದಲ ಐಸಿಸಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ನೀವು ಧೈರ್ಯ, ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಆಡಿದ ರೀತಿ ಇಡೀ ರಾಷ್ಟ್ರವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ನಾವೆಲ್ಲರೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ನಾನು ಧನ್ಯವಾದ ಮತ್ತು ಜೈ ಹಿಂದ್ ಎಂದು ಹೇಳಲು ಬಯಸುತ್ತೇನೆ' ಎಂದು ನೀತಾ ಎಂ. ಅಂಬಾನಿ ಪಂದ್ಯದ ಬಳಿಕ ಜಿಯೋ ಹಾಟ್‌ಸ್ಟಾರ್‌ ಸಂದರ್ಶನದಲ್ಲಿ ಹೇಳಿದರು.

ಮುಂಬೈಯಲ್ಲಿ ನೆಲೆಸಿರುವ ಪಂಜಾಬಿನ ಸುಪುತ್ರಿ

ಸಿಖ್ಖರ ನಾಡಿನ ಸುಪುತ್ರಿ ಹರ್ಮನ್ ಪ್ರೀತ್ ಕೌರ್ ಅವರು ಭಾರತ ಕ್ರಿಕೆಟ್ ತಂಡವನ್ನು ಈ ಸಲದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಮುನ್ನಡೆಸಿದ್ದಾರೆ. ಪಂಜಾಬ್‌ನ ಮೋಗಾ ನಗರವು ಹರ್ಮನ್‌ಪ್ರೀತ್ ಕೌರ್ ಅವರ ಹುಟ್ಟೂರು. ಹರ್ಮನ್‌ಪ್ರೀತ್ ಕೌರ್ ಮೊಗಾದ ಸರಕಾರಿ ಬಾಲಕಿಯರ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು, ಬಳಿಕ ಜ್ಞಾನ ಜ್ಯೋತಿ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತಿ ಪಡೆದು, ಬಳಿಕ ಅದರಲ್ಲಿಯೇ ಮುಂದುವರೆ ಯುವ ದಿಟ್ಟ ನಿರ್ಧಾರ ಕೈಗೊಂಡರು.

ಅವರ ಕುಟುಂಬವು ಕೂಡ ಮಗಳಿಗೆ ಸದಾ ಬೆನ್ನೆಲುಬಾಗಿ ನಿಂತಿತು. ಹರ್ಮನ್‌ಪ್ರೀತ್ ಅವರ ಬಾಲ್ಯದ ತರಬೇತುದಾರ ಪ್ರದೀಪ್ ಶರ್ಮಾ, ಮಾತನಾಡಿದ್ದು, ‘ಸಣ್ಣ ಪಟ್ಟಣವೊಂದರಿಂದ ಬಂದಿರುವ ಹರ್ಮನ್‌ಪ್ರೀತ್ ಕೌರ್ ಇಂದು ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಿರುವುದು ಇಡೀ ದೇಶ ಮತ್ತು ಮೋಗಾ ನಗರಕ್ಕೆ ಬಹಳ ಹೆಮ್ಮೆಯ ಸಂಗತಿ. ಹರ್ಮನ್ ಅವರು ಹುಡುಗ ರಿಗಿಂತಲೂ ಹೆಚ್ಚು ಶ್ರಮ ವಹಿಸುತ್ತಿದ್ದರು. ಯಾವಾಗಲೂ ಏಕಾಗ್ರತೆಯಿಂದ ಇರುತ್ತಿದ್ದ ಹರ್ಮನ್, ಯಾವುದೇ ಸವಾಲಿಗೂ ಹಿಂದೇಟು ಹಾಕುತ್ತಿರಲಿಲ್ಲ’ ಎಂದಿದ್ದಾರೆ.

ಹರ್ಮನ್ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಪ್ರಾರಂಭಿಸಿದವರು. ಬಡ ಕುಟುಂಬದಿಂದ ಬಂದಿರುವ ಅವರು ಆರನೇ ವಯಸ್ಸಿನಲ್ಲಿಯೇ ತನ್ನ ತಂದೆಯೊಂದಿಗೆ ಮೈದಾನದಲ್ಲಿ ಆಟವಾಡಲು ಪ್ರಾರಂಭಿಸಿದರು. ಮೊದಲಿಗೆ ಫುಟ್ಬಾಲ್, ನಂತರ ಹಾಕಿ ಮತ್ತು ಬಳಿಕ ಕ್ರಿಕೆಟ್ ಆಡಲು ಆರಂಭಿಸಿದರು.

ಇದನ್ನೂ ಓದಿ Harmanpreet Kaur: ವಿಶ್ವಕಪ್ ಗೆಲುವಿನ ನಂತರ ಕೋಚ್ ಮುಜುಂದಾರ್ ಕಾಲಿಗೆ ಬಿದ್ದ ಕೌರ್‌

30 ರಿಂದ 35 ಹುಡುಗರಲ್ಲಿ ಹರ್ಮನ್ ಒಬ್ಬಳೇ ಹುಡುಗಿಯಾಗಿದ್ದ ಕಾರಣ ಹರ್ಮನ್ ತಂದೆಯೂ ಕೂಡ ಆರಂಭದಲ್ಲಿ ಅವರನ್ನು ಆಡಲು ಕಳಿಸಲು ಹಿಂಜರಿದರು. ಆದರೆ ಹರ್ಮನ್ ಮಾತ್ರ ಯಾವಾಗಲೂ ಆಟವಾಡಲು ಉತ್ಸುಕರಾಗಿರುತ್ತಿದ್ದರು. ಟೀಕೆಗಳು ಅವರನ್ನು ಆಟದಿಂದ ದೂರವಿಡಲು ಅವರು ಎಂದಿಗೂ ಬಿಡಲಿಲ್ಲ. ಅವರ ಅದೇ ದೃಢಸಂಕಲ್ಪವು ಅವರನ್ನು ಯಶಸ್ಸಿನ ಮೆಟ್ಟಿಲೇರಿಸಿದೆ.

ಇದನ್ನೂ ಓದಿ Women’s World Cup 2025: ಚೊಚ್ಚಲ ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ₹51 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

1989 ಮಾರ್ಚ್ 8ರಂದು ಮೋಗಾದಲ್ಲಿ ಜನಿಸಿದ ಹರ್ಮನ್ ಪ್ರೀತ್ ಕೌರ್ ಅವರು ದಿಟ್ಟ ಹೋರಾಟ, ಸಮರ್ಪಣೆಯ ಇಂದು ಯಶಸ್ಸಿನ ಶಿಖರವೇರಿದ್ದಾರೆ. ಅವರ ತಂದೆ ಹಮಿಂದರ್ ಸಿಂಗ್ ಭುಲ್ಲರ್, ವಾಲಿಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದರು. 2014ರಲ್ಲಿ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ಮುಂಬೈಗೆ ತೆರಳಿದರು. ಅವರ ಪೋಷಕರೂ ಪ್ರಸ್ತುತ ಮುಂಬೈನಲ್ಲಿದ್ದು, ಮಗಳ ಯಶಸ್ಸಿಗಾಗಿ ಅವರು ಸದಾ ಹುರಿದುಂಬಿಸುತ್ತಿದ್ದಾರೆ.