ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿಯ ‘One8’ ಶೂ ಧರಿಸಿ ಮಿಂಚಿದ ಪಾಕಿಸ್ತಾನ ಮಹಿಳಾ ಆಟಗಾರ್ತಿಯರು

Virat Kohli-branded shoes: ಕೊಹ್ಲಿ ಅವರ ಜರ್ಸಿ ನಂಬರ್ 18 ಅನ್ನು ಆಧರಿಸಿ 'One8' ಬ್ರಾಂಡ್ ಹುಟ್ಟಿಕೊಂಡಿತು. ಕೇವಲ ಲೈಫ್‌ಸ್ಟೈಲ್ ಮತ್ತು ಉಡುಪುಗಳಿಗೆ ಸೀಮಿತವಾಗಿದ್ದ ಈ ಬ್ರಾಂಡ್, ಇದೀಗ ಅಥ್ಲೆಟಿಕ್ ಹಾಗೂ ಅತ್ಯಾಧುನಿಕ ಸ್ಪೋರ್ಟ್ಸ್ ಶೂಗಳ ವಿಭಾಗದಲ್ಲೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಕೊಹ್ಲಿಯ ‘One8’ ಶೂ ಧರಿಸಿ ಮಿಂಚಿದ ಪಾಕಿಸ್ತಾನ ಮಹಿಳಾ ಆಟಗಾರ್ತಿಯರು

Kohli-branded shoes -

Abhilash BC
Abhilash BC Sep 9, 2026 11:19 AM

ದುಬೈ, ಸೆ. 9: ಕಳೆದ ಶನಿವಾರ(ಸೆ.5) ಭಾರತ ಹಾಗೂ ಪಾಕಿಸ್ತಾನ ತಂಡಗಳು ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಮುಖಾಮುಖಿಯಾಗಿತ್ತು. ಪಂದ್ಯದಲ್ಲಿ ಭಾರತ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು. ಭಾರತದ ಗೆಲುವಿಗಿಂತ ಪಾಕಿಸ್ತಾನ ಮಹಿಳಾ ಕ್ರಿಕೆಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಅವರ ಪ್ರದರ್ಶನ ಅದಕ್ಕೆ ಕಾರಣವಲ್ಲ. ಬದಲಾಗಿ ವಿರಾಟ್ ಕೊಹ್ಲಿ ಅವರ ಸಹ-ಮಾಲೀಕತ್ವದ ಜನಪ್ರಿಯ ಕ್ರೀಡಾ ಬ್ರಾಂಡ್ ಆದ 'One8' (ಒನ್8) ಶೂಗಳನ್ನು ಪಾಕ್‌ ಆಟಗಾರ್ತಿಯರು ಧರಿಸಿ ಕಣಕ್ಕಿಳಿದದ್ದು.

ಹೌದು, ಹಾಂಗ್ ಕಾಂಗ್ ವಿರುದ್ಧದ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಹಲವು ಆಟಗಾರ್ತಿಯರು ಕೊಹ್ಲಿಯ ಸಹ ಮಾಲಿಕತ್ವದ ಬ್ರಾಂಡ್ ಒನ್8 ಶೂ ಧರಿಸಿ ಕಣಕ್ಕಿಳಿದರು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋನಿಕ್ ಬ್ಲೂ, ಜೆರ್ಸಿ ವೈಟ್ ಮತ್ತು ಟ್ರೋಫಿ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುವ ಈ ಶೂಗಳ ಬೆಲೆ ಸುಮಾರು 13,999 ರೂಪಾಯಿಗಳಷ್ಟಿದೆ.



ಪಂದ್ಯದಲ್ಲಿ ಪಾಕಿಸ್ತಾನದ ಎಡಗೈ ಸ್ಪಿನ್ನರ್ ನಶ್ರಾ ಸಂಧು ಇತಿಹಾಸ ನಿರ್ಮಿಸಿದರು. ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 7 ರನ್ ನೀಡಿ ಬರೋಬ್ಬರಿ 6 ವಿಕೆಟ್ ಕಬಳಿಸಿ ಎದುರಾಳಿ ತಂಡದ ಬೆನ್ನೆಲುಬು ಮುರಿದರು. ಇದು ಅವರ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನವಾಗಿದೆ. ಸಂಧು ಅವರ ಈ ಮಾರಕ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡವು 72 ರನ್‌ಗಳ ಭರ್ಜರಿ ಜಯ ಸಾಧಿಸಿ, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಅವರ ಈ ಪ್ರದರ್ಶನಕ್ಕೆ ಒನ್8 ಶೂ ಕಾರಣ ಎಂದು ಕೆಲವು ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಕೊಹ್ಲಿ ಅವರ ಜರ್ಸಿ ನಂಬರ್ 18 ಅನ್ನು ಆಧರಿಸಿ 'One8' ಬ್ರಾಂಡ್ ಹುಟ್ಟಿಕೊಂಡಿತು. ಕೇವಲ ಲೈಫ್‌ಸ್ಟೈಲ್ ಮತ್ತು ಉಡುಪುಗಳಿಗೆ ಸೀಮಿತವಾಗಿದ್ದ ಈ ಬ್ರಾಂಡ್, ಇದೀಗ ಅಥ್ಲೆಟಿಕ್ ಹಾಗೂ ಅತ್ಯಾಧುನಿಕ ಸ್ಪೋರ್ಟ್ಸ್ ಶೂಗಳ ವಿಭಾಗದಲ್ಲೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರಸ್ತುತ 'ಅಜಿಲಿಟಾಸ್ ಸ್ಪೋರ್ಟ್ಸ್' ಸಹಯೋಗದಲ್ಲಿ ಈ ಬ್ರಾಂಡ್ ಕ್ರಿಕೆಟ್‌ಗೆ ಹೇಳಿಮಾಡಿಸಿದ ಸೀಮ್ ಮತ್ತು ಕವರ್ ಡ್ರೈವ್ ಸೇರಿದಂತೆ ಅತ್ಯುತ್ತಮ ಗುಣಮಟ್ಟದ ಶೂಗಳನ್ನು ಮಾರುಕಟ್ಟೆಗೆ ತರುತ್ತಿದೆ.