ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಟಿ20 ವಿಶ್ವಕಪ್ ದಾಖಲೆ ಮುರಿದ ಪಾಕಿಸ್ತಾನದ ಫರ್ಹಾನ್

T20 World Cup 2026: ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ ಐದು ಅಗ್ರ ಬ್ಯಾಟ್ಸ್‌ಮನ್‌ಗಳು ಏಷ್ಯ ಖಂಡದವರಾಗಿದ್ದಾರೆ. 2022ರ ಟಿ20 ವಿಶ್ವಕಪ್‌ನಲ್ಲಿ ಆರು ಪಂದ್ಯಗಳಲ್ಲಿ ಬಾಬರ್ ಅಜಮ್ 303 ರನ್ ಗಳಿಸಿದ್ದರು.

ಕೊಹ್ಲಿಯ ಸಾರ್ವಕಾಲಿಕ ಟಿ20 ವಿಶ್ವಕಪ್ ದಾಖಲೆ ಮುರಿದ ಫರ್ಹಾನ್

Sahibzada Farhan brought up a rapid half-century -

Abhilash BC
Abhilash BC Feb 28, 2026 8:36 PM

ಕೊಲಂಬೊ, ಫೆ. 28: ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಶನಿವಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 12 ವರ್ಷಗಳ ಹಳೆಯ ಟಿ20 ವಿಶ್ವಕಪ್ ದಾಖಲೆಯನ್ನು ಮುರಿದರು. ಪಲ್ಲೆಕೆಲೆಯಲ್ಲಿ ಶ್ರೀಲಂಕಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 38 ರನ್‌ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಕೊಹ್ಲಿ ಅವರ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಿದರು.

ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ ಆರಂಭಿಸಿದ ಪಾಕ್‌ಗೆ ಬಲಗೈ ಓಪನರ್ ಫರ್ಹಾನ್ ಉತ್ತಮ ಆರಂಭ ಒದಗಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 38 ರನ್‌ಗಳನ್ನು ದಾಟಿದಾಗ ಕೊಹ್ಲಿಯ ದಾಖಲೆ ಮುರಿದರು. 2014 ರ ಟೂರ್ನಿಯ ಆವೃತ್ತಿಯಲ್ಲಿ ಕೊಹ್ಲಿ 6 ಪಂದ್ಯಗಳಿಂದ 319 ರನ್‌ ಬಾರಿಸಿದ್ದರು. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಇದೀಗ ಫರ್ಹಾನ್ 320*ರನ್‌ ಬಾರಿಸಿ ದಾಖಲೆ ತಮ್ಮದಾಗಿಸಿಕೊಂಡರು.

ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ ಐದು ಅಗ್ರ ಬ್ಯಾಟ್ಸ್‌ಮನ್‌ಗಳು ಏಷ್ಯ ಖಂಡದವರಾಗಿದ್ದಾರೆ. 2022ರ ಟಿ20 ವಿಶ್ವಕಪ್‌ನಲ್ಲಿ ಆರು ಪಂದ್ಯಗಳಲ್ಲಿ ಬಾಬರ್ ಅಜಮ್ 303 ರನ್ ಗಳಿಸಿದ್ದರು.

ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳು

ಸಾಹಿಬ್‌ಜಾದಾ ಫರ್ಹಾನ್- 320*

ವಿರಾಟ್ ಕೊಹ್ಲಿ-319 ರನ್‌

ತಿಲಕರತ್ನೆ ದಿಲ್ಶಾನ್- 317 ರನ್

ಬಾಬರ್ ಅಜಮ್-303‌ ರನ್

ಮಹೇಲ ಜಯವರ್ಧನೆ- 302 ರನ್

ಉಭಯ ತಂಡಗಳು

ಪಾಕಿಸ್ತಾನ: ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸಲ್ಮಾನ್ ಅಘಾ (ನಾಯಕ), ಖವಾಜಾ ನಫೇ, ಉಸ್ಮಾನ್ ಖಾನ್ (ವಿ.ಕೀ.), ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹಮದ್, ಉಸ್ಮಾನ್ ತಾರಿಕ್.

ಶ್ರೀಲಂಕಾ: ಪಾತು ನಿಸ್ಸಾಂಕ, ಕಮಿಲ್ ಮಿಶ್ರಾ (ವಿ.ಕೀ.), ಚರಿತ್ ಅಸಲಂಕಾ, ಪವನ್ ರಥನಾಯಕ, ಕಾಮಿಂದು ಮೆಂಡಿಸ್, ದಾಸುನ್ ಶನಕ (ನಾಯಕ), ಜನಿತ್ ಲಿಯಾನಗೆ, ದುನಿತ್ ವೆಲ್ಲಲಗೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ,ದಿಲ್ಶನ್ ಮಧುಶಂಕ.