ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತವರಿನಲ್ಲಿ ಟೆಸ್ಟ್‌ ಸೋತು ಗ್ರೆಗ್ ಚಾಪೆಲ್ ಬಳಿಕ ಅನಗತ್ಯ ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌

Pat Cummins: ಬಾಂಗ್ಲಾದೇಶದ ಪರ, ವೇಗಿ ಹಸನ್ ಮಹಮೂದ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಡಾರ್ವಿನ್ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಆರು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೂ ಮೂವರನ್ನು ಔಟ್ ಮಾಡಿದರು.

ಬಾಂಗ್ಲಾದೇಶ ವಿರುದ್ಧ ಸೋತು ಅನಗತ್ಯ ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌

Pat Cummins -

Abhilash BC
Abhilash BC Aug 16, 2026 2:51 PM

ಡಾರ್ವಿನ್‌, ಆ.16: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ ಅಂತರದ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ನಾಲ್ಕು ದಿನಗಳಲ್ಲಿ ಕೊನೆಗೊಂಡ ಟೆಸ್ಟ್ ಪಂದ್ಯದಲ್ಲಿ, ಆಸ್ಟ್ರೇಲಿಯಾ 9 ವಿಕೆಟ್ ಅಂತರದ ಸೋಲು ಕಂಡಿತು.

2021-22ರ ಆಶಸ್‌ನಿಂದ ಆಸ್ಟ್ರೇಲಿಯಾವನ್ನು ಟೆಸ್ಟ್‌ನಲ್ಲಿ ಮುನ್ನಡೆಸುತ್ತಿರುವ ಸ್ಟಾರ್ ವೇಗದ ಬೌಲರ್ ಕಮಿನ್ಸ್‌, ಗ್ರೆಗ್ ಚಾಪೆಲ್ ನಂತರ ಎರಡು ವಿಭಿನ್ನ ಏಷ್ಯನ್ ತಂಡಗಳ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಸೋತ ಎರಡನೇ ಆಸ್ಟ್ರೇಲಿಯಾ ನಾಯಕ ಎಂಬ ಅನಗತ್ಯ ದಾಖಲೆ ಹೆಗಲೇರಿಸಿಕೊಂಡರು.

ಆಸ್ಟ್ರೇಲಿಯಾದ ಟೆಸ್ಟ್ ನಾಯಕನಾಗಿದ್ದ ಅವಧಿಯಲ್ಲಿ, ಗ್ರೆಗ್ ಚಾಪೆಲ್ ಪಾಕಿಸ್ತಾನದ ವಿರುದ್ಧ ಎರಡು ಸ್ವದೇಶಿ ಟೆಸ್ಟ್ ಪಂದ್ಯಗಳನ್ನು ಸೋತರು. ಜನವರಿ 1977 ರಲ್ಲಿ ಸಿಡ್ನಿಯಲ್ಲಿ ಮತ್ತು ಡಿಸೆಂಬರ್ 1981 ರಲ್ಲಿ ಮೆಲ್ಬೋರ್ನ್‌ನಲ್ಲಿ ಭಾರತದ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಸೋತರು.

ಕಮ್ಮಿನ್ಸ್ ಈಗ ನವೆಂಬರ್ 2024 ರಲ್ಲಿ ಪರ್ತ್‌ನಲ್ಲಿ ಭಾರತದ ವಿರುದ್ಧ ಮತ್ತು ಇದೀಗ ಡಾರ್ವಿನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಒಂದು ಟೆಸ್ಟ್‌ನಲ್ಲಿ ಸೋತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಗೆಲುವು ದಾಖಲಿಸಲು ಬಾಂಗ್ಲಾದೇಶಕ್ಕೆ ಕೇವಲ ಮೂರು ಟೆಸ್ಟ್ ಪಂದ್ಯಗಳು ಬೇಕಾಗಿದ್ದವು. ಅವರು ಈಗ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಗೆದ್ದ ಏಷ್ಯಾದ ಅತ್ಯಂತ ವೇಗದ ತಂಡ ಮತ್ತು ಒಟ್ಟಾರೆಯಾಗಿ ಎರಡನೇ ಅತಿ ವೇಗದ ತಂಡವಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 228 ರನ್‌ ಹಿನ್ನಡೆ ಅನುಭವಿಸಿದ ಆಸ್ಟ್ರೇಲಿಯಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶಕ್ಕೆ ಕೇವಲ 57 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಪ್ರವಾಸಿ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು 14.2 ಓವರ್‌ಗಳಲ್ಲಿ ಸಾಧಾರಣ ಗುರಿಯನ್ನು ತಲುಪಿತು. ಆ ಮೂಲಕ ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾದಲ್ಲಿ 23 ವರ್ಷದ ಬಳಿಕ ಮೊದಲ ಗೆಲುವು ದಾಖಲಿಸಿತು.

ಆಸೀಸ್‌ ಮಣಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಬಾಂಗ್ಲಾದೇಶ

ಬಾಂಗ್ಲಾದೇಶದ ಪರ, ವೇಗಿ ಹಸನ್ ಮಹಮೂದ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಡಾರ್ವಿನ್ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಆರು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೂ ಮೂವರನ್ನು ಔಟ್ ಮಾಡಿದರು.

ಹಸನ್ ಹೊರತುಪಡಿಸಿ, ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಜ್ ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಅಮೂಲ್ಯವಾದ ಕೊಡುಗೆಗಳನ್ನು ನೀಡಿದರು, ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ನಾಯಕ ನಜ್ಮುಲ್ ಹೊಸೈನ್ ಶಾಂಟೊ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 84 ರನ್‌ಗಳ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶಿಸಿದರೆ, ಆರಂಭಿಕ ತಂಜಿದ್ ಹಸನ್ ತಮೀಮ್ 197 ಎಸೆತಗಳಲ್ಲಿ 101 ರನ್ ಗಳಿಸಿದರು.