ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಪ್ರಧಾನಿ ಮೋದಿ ವಿಶ್ವ ಚಾಂಪಿಯನ್‌ ಭಾರತೀಯ ಮಹಿಳಾ ತಂಡದ ಭೇಟಿ ಸಾಧ್ಯತೆ

ವಿಶ್ವಕಪ್‌ ಗೆದ್ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ(BCCI) (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಗದು ಬಹುಮಾನವನ್ನು ಘೋಷಿಸಿದೆ. ಭಾರತೀಯ ತಂಡ, ಸಹಾಯಕ ಸಿಬ್ಬಂದಿ ಮತ್ತು ತರಬೇತುದಾರರಿಗೆ 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ನಗದು ಬಹುಮಾನವನ್ನು ಘೋಷಿಸಿದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನವದೆಹಲಿಯಲ್ಲಿ ವಿಶ್ವಕಪ್ ಚಾಂಪಿಯನ್ ಭಾರತೀಯ ಮಹಿಳಾ ಕ್ರಿಕೆಟ್(Indian women's team) ತಂಡವನ್ನು ಭೇಟಿಯಾಗುವ ಸಾಧ್ಯತೆಯಿದೆ. ಹರ್ಮನ್‌ಪ್ರೀತ್‌ ಕೌರ್(Harmanpreet Kaur) ನೇತೃತ್ವದ ತಂಡವು ನವೆಂಬರ್ 5 ರಂದು ಬುಧವಾರ ಪ್ರಧಾನಿಯವರೊಂದಿಗಿನ ಸಭೆಗಾಗಿ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಲಿದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 2 ರ ಭಾನುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್‌ ಟ್ರೋಫಿ ಮುಡಿಗೇರಿಸಿಕೊಂಡಿತು. ತಂಡ ಗೆಲ್ಲುತ್ತಿದ್ದಂತೆ ಮೋದಿ ಅವರು ಎಕ್ಸ್ ಖಾತೆಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು. ಈ ವಿಜಯವನ್ನು ಭಾರತದಲ್ಲಿ ಮಹಿಳಾ ಕ್ರೀಡೆಗಳಿಗೆ ಒಂದು ಹೆಗ್ಗುರುತು ಕ್ಷಣ ಎಂದು ಹೇಳಿದ್ದರು.

"ಫೈನಲ್‌ ಪಂದ್ಯದಲ್ಲಿ ಭಾರತೀಯ ತಂಡದ ಆಟವು ಅತ್ಯದ್ಭುತ ಕೌಶಲ ಹಾಗೂ ಆತ್ಮವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ತಂಡವಾಗಿ ತೋರಿದ ಸಾಹಸ ಮತ್ತು ವರ್ಲ್ಡ್‌ಕಪ್‌ ಉದ್ದಕ್ಕೂ ತೋರಿದ ದೃಢತೆಗೆ ಅವರಿಗೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು, ಭವಿಷ್ಯದಲ್ಲಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇನ್ನಷ್ಟು ಸ್ಫೂರ್ತಿಯನ್ನು ತರಲಿದೆ’ ಎಂದು ಮೋದು ಟ್ವೀಟ್‌ ಮಾಡಿದ್ದಾರೆ.



5‌1 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

ವಿಶ್ವಕಪ್‌ ಗೆದ್ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ(BCCI) (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಗದು ಬಹುಮಾನವನ್ನು ಘೋಷಿಸಿದೆ. ಭಾರತೀಯ ತಂಡ, ಸಹಾಯಕ ಸಿಬ್ಬಂದಿ ಮತ್ತು ತರಬೇತುದಾರರಿಗೆ 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ನಗದು ಬಹುಮಾನವನ್ನು ಘೋಷಿಸಿದರು.

52 ರನ್‌ ಗೆಲುವು

ಭಾರತ, ಶಫಾಲಿ ವರ್ಮಾ (87) ಮತ್ತು ದೀಪ್ತಿ ಶರ್ಮಾ (58) ಅವರ ಅರ್ಧಶತಕಗಳ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 298 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ಗಳಿಸಿ 52 ರನ್‌ ಅಂತರದ ಸೋಲು ಕಂಡಿತು.