ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harmanpreet-Amanjot: ಹರ್ಮನ್‌ಪ್ರೀತ್, ಅಮನ್‌ಜೋತ್‌ಗೆ 11 ಲಕ್ಷ ರೂ. ಬಹುಮಾನ ಘೋಷಿಸಿದ ಪಂಜಾಬ್ ಕ್ರಿಕೆಟ್ ಮಂಡಳಿ

ಭಾನುವಾರ ನಡೆದಿದ್ದ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ತಮ್ಮ ಬಹುಕಾಲದ ಕಾಯುವಿಕೆಗೆ ಅಂತ್ಯ ಹಾಡಿ ಇತಿಹಾಸ ಪುಸ್ತಕದಲ್ಲಿ ಹೊಸ ಅಧ್ಯಾಯವನ್ನು ಬರೆಯಿತು. ಹಲವಾರು ಏರಿಳಿತಗಳನ್ನು ಕಂಡ ಈ ಅಭಿಯಾನವು, ಟ್ರೋಫಿಯನ್ನು ಮೇಲಕ್ಕೆತ್ತುವುದರೊಂದಿಗೆ ಕೊನೆಗೊಂಡಿತು.

ವಿಶ್ವಕಪ್‌ ಟ್ರೋಫಿಯೊಂದಿಗೆ ಹರ್ಮನ್‌ಪ್ರೀತ್‌ ಮತ್ತು ಅಮನ್‌ಜೋತ್‌

ಚಂಡೀಗಢ: ಚೊಚ್ಚಲ ಏಕದಿನ ವಿಶ್ವಕಪ್‌ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur), ಆಲ್‌ರೌಂಡರ್ ಅಮನ್‌ಜೋತ್ ಕೌರ್(Amanjot Kaur) ಮತ್ತು ಫೀಲ್ಡಿಂಗ್ ಕೋಚ್ ಮುನೀಶ್ ಬಾಲಿ(Munish Bali) ಅವರಿಗೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​(ಪಿಸಿಎ) ನಗದು ಬಹುಮಾನಗಳನ್ನು ಘೋಷಿಸಿದೆ. ಹರ್ಮನ್‌ಪ್ರೀತ್ ಮತ್ತು ಅಮನ್‌ಜೋತ್‌ಗೆ ತಲಾ 11 ಲಕ್ಷ ರೂ. ಮತ್ತು ತಂಡದ ಯಶಸ್ಸಿಗೆ ನೀಡಿದ ಕೊಡುಗೆಗಾಗಿ ಮುನೀಶ್ ಬಾಲಿಗೆ 5 ಲಕ್ಷ ರೂ. ನೀಡಲಾಗುವುದು ಎಂದು ಪಿಸಿಎ ದೃಢಪಡಿಸಿದೆ. ಮಾತ್ರವಲ್ಲದೆ ಈ ಮೂವರಿಗೆ ಶೀಘ್ರದಲ್ಲೇ ವಿಶೇಷ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗುವುದು ಪಿಸಿಎ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ಬಿಸಿಸಿಐ 51 ಕೋಟಿ ರು. ನಗದು ಬಹುಮಾನ ನೀಡಲಿದೆ. ಇದು ಎಲ್ಲಾ ಆಟಗಾರ್ತಿಯರು, ಸಹಾಯಕ ಸಿಬ್ಬಂದಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಿಗೂ ಸಿಗಲಿದೆ. ಕಳೆದ ವರ್ಷ ಭಾರತ ಪುರುಷರ ತಂಡ ಟಿ20 ವಿಶ್ವಕಪ್‌ ಗೆದ್ದಾಗ ಆಟಗಾರರಿಗೆ ಬಿಸಿಸಿಐ ₹125 ಕೋಟಿ ಹಣ ಬಹುಮಾನವಾಗಿ ನೀಡಿತ್ತು. ವನಿತೆಯರಿಗೂ ಅಷ್ಟೇ ಪ್ರಮಾಣದಲ್ಲಿ ನೀಡಬಹುದು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಬಿಸಿಸಿಐ 51 ಕೋಟಿ ರು.ಗಷ್ಟೇ ಸೀಮಿತಗೊಳಿಸಿದೆ.

ಯುವ ವೇಗಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರ 1 ಕೋಟಿ ರು. ನಗದನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದೆ. ಹಿಮಾಚಲ ಪ್ರದೇಶ ಸರ್ಕಾರ ವೇಗಿ ರೇಣುಕಾ ಸಿಂಗ್‌ಗೆ ₹1 ಕೋಟಿ ನಗದು ಬಹುಮಾನ ಪ್ರಕಟಿಸಿದೆ.

ಧೋನಿಯಂತೆ ಫೋಟೋಶೂಟ್

2011 ರ ಪುರುಷರ ಏಕದಿನ ವಿಶ್ವಕಪ್ ಗೆದ್ದ ನಂತರ ಎಂಎಸ್ ಧೋನಿ ಅವರು ಗೇಟ್‌ವೇ ಆಫ್ ಇಂಡಿಯಾ ಮುಂದೆ ನಿಂತು ವಿಶ್ವ ಟ್ರೋಫಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದೇ ರೀತಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಕೂಡ ಗೇಟ್‌ವೇ ಆಫ್ ಇಂಡಿಯಾ ಮುಂದೆ ಚೊಚ್ಚಲ ವಿಶ್ವಕಪ್‌ನೊಂದಿಗೆ ಫೋಟೋಶೂಟ್‌ ಮಾಡಿದ್ದಾರೆ.

ಇದನ್ನೂ ಓದಿ ICC Women's World Cup Team: ಟ್ರೋಫಿ ಗೆದ್ದರೂ ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ಹರ್ಮನ್‌ಪ್ರೀತ್‌ ಕೌರ್‌!

ಭಾನುವಾರ ನಡೆದಿದ್ದ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ತಮ್ಮ ಬಹುಕಾಲದ ಕಾಯುವಿಕೆಗೆ ಅಂತ್ಯ ಹಾಡಿ ಇತಿಹಾಸ ಪುಸ್ತಕದಲ್ಲಿ ಹೊಸ ಅಧ್ಯಾಯವನ್ನು ಬರೆಯಿತು. ಹಲವಾರು ಏರಿಳಿತಗಳನ್ನು ಕಂಡ ಈ ಅಭಿಯಾನವು, ಟ್ರೋಫಿಯನ್ನು ಮೇಲಕ್ಕೆತ್ತುವುದರೊಂದಿಗೆ ಕೊನೆಗೊಂಡಿತು.

2025ರ ವಿಶ್ವಕಪ್ ವಿಜಯವನ್ನು ಭಾರತೀಯ ಮಹಿಳಾ ಕ್ರೀಡಾ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವೆಂದು ಪ್ರಶಂಸಿಸಲಾಗುತ್ತಿದೆ. ಇತರ ಮಹಿಳಾ ಕ್ರೀಡೆಗಳು ಸಹ ಹೊಸ ಪ್ರತಿಭೆಗಳನ್ನು ಪೋಷಿಸಲು ಇದು ನೆರವಾಗಲಿದೆ.

ಇದನ್ನೂ ಓದಿ Viral Video: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

ಫೈನಲ್ ಪಂದ್ಯದ ನಂತರ ಮಾತನಾಡಿದ್ದ ಹರ್ಮನ್‌ಪ್ರೀತ್ ಕೌರ್, ಅಭಿಮಾನಿಗಳು, ಬಿಸಿಸಿಐ ಮತ್ತು ಆಯ್ಕೆದಾರರಿಗೆ ಧನ್ಯವಾದ ಅರ್ಪಿಸಿದರು. "ಈ ಜನಸಮೂಹಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವರು ತುಂಬಾ ಅದ್ಭುತವಾಗಿದ್ದಾರೆ. ನಮ್ಮ ಎಲ್ಲಾ ಏರಿಳಿತಗಳಲ್ಲಿ ನಮಗಾಗಿ ಇದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದ್ದರು.