ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

Pakistan Fan Sings Indian National Anthem: ಸದ್ಯ ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಇಬ್ಬರು ಪುರುಷರು ಮತ್ತು ಸಣ್ಣ ಬಾಲಕಿಯೊಬ್ಬಳು ಪಾಕ್‌ ಜೆರ್ಸಿತೊಟ್ಟು ಟಿವಿ ಮುಂದೆ ನಿಂತು ಭಾರತದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ಕಾಣಬಹುದು. ಬಳಿಕ ಹರ್ಮನ್‌ಪ್ರೀತ್‌ ಕೌರ್‌ ವಿಶ್ವಕಪ್‌ ಟ್ರೋಫಿ ಸ್ವೀಕರಿಸುವಾಗ ಸಂಭ್ರಮಿಸುವುದನ್ನು ಕಾಣಬಹುದು.

ವಿಶ್ವಕಪ್ ಫೈನಲ್ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

ಭಾರತೀಯ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿಗಳು -

Abhilash BC Abhilash BC Nov 4, 2025 11:37 AM

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದರ ವಿರುದ್ಧ ಶತ್ರು ದೇಶದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮೇ.7 ರಂದು ಆಪರೇಷನ್‌ ಸಿಂಧೂರ ಎನ್ನುವ ಕಾರ್ಯಾಚರಣೆ ನಡೆಸಿ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳನ್ನು ಸಂಪೂರ್ಣ ನಾಶಗೊಳಿಸಿತ್ತು. ಈ ಘಟನೆ ಬಳಿಕ ಉಭಯ ದೇಶಗಳ ನಡುವೆ ವಿಷಮ ಸ್ಥಿತಿ ಇದೆ. ಹೀಗಿರುವಾಗಲೂ ಪಾಕಿಸ್ತಾನದ ಕುಟಂಬವೊಂದು(Pakistan Fan) ಭಾರತೀಯ ರಾಷ್ಟ್ರಗೀತೆ ಹಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗಿದೆ.

ಭಾನುವಾರ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌(Women's World Cup Final)ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿತ್ತು. ಭಾರತ ತಂಡದ ಅಭಿಮಾನಿಯಾಗಿರುವ ಪಾಕಿಸ್ತಾನ ಕುಟುಂಬವೊಂದು ಪಾಕಿಸ್ತಾನದ ಜೆರ್ಸಿ ತೊಟ್ಟು ಭಾರತೀಯ ರಾಷ್ಟ್ರಗೀತೆ ಹಾಡುವ ಮೂಲಕ ತಂಡಕ್ಕೆ ಬೆಂಬಲಿಸಿದ್ದಾರೆ. ಅಲ್ಲದೆ ಭಾರತ ವಿಶ್ವಕಪ್‌ ಗೆದ್ದ ಬಳಿಕ ಸಂಭ್ರಮಿಸಿದ್ದಾರೆ.

ಸದ್ಯ ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಇಬ್ಬರು ಪುರುಷರು ಮತ್ತು ಸಣ್ಣ ಬಾಲಕಿಯೊಬ್ಬಳು ಪಾಕ್‌ ಜೆರ್ಸಿತೊಟ್ಟು ಟಿವಿ ಮುಂದೆ ನಿಂತು ಭಾರತದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ಕಾಣಬಹುದು. ಬಳಿಕ ಹರ್ಮನ್‌ಪ್ರೀತ್‌ ಕೌರ್‌ ವಿಶ್ವಕಪ್‌ ಟ್ರೋಫಿ ಸ್ವೀಕರಿಸುವಾಗ ಸಂಭ್ರಮಿಸುವುದನ್ನು ಕಾಣಬಹುದು.

ಇದನ್ನೂ ಓದಿ Asia Cup 2025: ʻಭಾರತ ತಂಡದ ಎದುರು ಹ್ಯಾರಿಸ್‌ ರೌಫ್‌ ರನ್‌ ಮಷೀನ್‌ʼ-ವಸೀಮ್‌ ಅಕ್ರಮ್‌ ಟೀಕೆ!

ಅರ್ಷದ್‌ ಮುಹಮ್ಮದ್‌ ಅನೀಫ್ ಎನ್ನುವ ವ್ಯಕ್ತಿ ಈ ವಿಡಿಯೊವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ 'ಮಹಿಳಾ ಏಕದಿನ ವಿಶ್ವಕಪ್ ಚಾಂಪಿಯನ್ ಆದ ಭಾರತ ತಂಡಕ್ಕೆ ಅಭಿನಂದನೆಗಳು. ಪಾಕಿಸ್ತಾನದಿಂದ ಶುಭಾಶಯಗಳು ಮತ್ತು ಪ್ರೀತಿಯನ್ನು ಕಳುಹಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾನೆ.

ವೈರಲ್‌ ವಿಡಿಯೊ ಇಲ್ಲಿದೆ

ವಜ್ರದ ಉಡುಗೊರೆ ಘೋಷಿಸಿದ ಸೂರತ್‌ ಉದ್ಯಮಿ

ವಿಶ್ವಕಪ್‌ ವಿಜೇತ ಭಾರತ ತಂಡದ ಆಟಗಾರ್ತಿಯರಿಗೆ ವಜ್ರದ ಆಭರಣ ಹಾಗೂ ಸೋಲರ್‌ ಪ್ಯಾನೆಲ್‌ ಅನ್ನು ಉಡುಗೊರೆ ನೀಡುವುದಾಗಿ ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಗೋವಿಂದ ಧೋಲಾಕಿಯಾ ಅವರು ಘೋಷಿಸಿದ್ದಾರೆ.

'ವಿಶ್ವಕಪ್‌ ವಿಜೇತ ತಂಡದ ಭಾಗವಾಗಿರುವ ಆಟಗಾರ್ತಿಯರಿಗೆ ವಜ್ರದ ಆಭರಣ ಹಾಗೂ ಅವರ ಮನೆಗಳಿಗೆ ಸೋಲರ್‌ ಅಳವಡಿಸಲು ಬಯಸಿದ್ದು, ದೇಶಕ್ಕೆ ಬೆಳಕು ನೀಡಿದವರ ಬದುಕುಗಳು ಕೂಡ ಬೆಳಕಿನಿಂದ ಕೂಡಿರಲಿ' ಎಂದು ಗೋವಿಂದ ಧೋಲಾಕಿಯಾ ತಿಳಿಸಿದ್ದಾರೆ. ನವಿ ಮುಂಬೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 52 ರನ್‌ಗಳ ಗೆಲುವು ಸಾಧಿಸುವ ಮೂಲಕ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

ಸೋಲು ಕಂಡ ದಕ್ಷಿಣ ಆಫ್ರಿಕಾ ತಂಡ ಮತ್ತೆ ಚೋಕರ್ಸ್‌ ಎಂದು ಸಾಬೀತಾಯಿತು. ಪುರುಷರ ವಿಶ್ವಕಪ್‌ಗಳಲ್ಲಿ ಹಲವು ಬಾರಿ ನಾಕೌಟ್‌ನಲ್ಲಿ ಎಡವಿ ಟ್ರೋಫಿ ತಪ್ಪಿಸಿಕೊಂಡಿದ್ದ ದ.ಆಫ್ರಿಕಾ ತಂಡ, ಮಹಿಳೆಯರ ವಿಶ್ವಕಪ್‌ನಲ್ಲೂ ಟ್ರೋಫಿ ಬರ ಮುಂದುವರಿಸಿದೆ. ದ.ಆಫ್ರಿಕಾ ಮಹಿಳಾ ತಂಡ 2023, 2024ರ ಟಿ20 ವಿಶ್ವಕಪ್‌ ಫೈನಲ್‌ನಲ್ಲೂ ಸೋತಿತ್ತು.