PBKS vs RCB Qualifier 1: ಕ್ವಾಲಿಫೈಯರ್ ಪಂದ್ಯಕ್ಕೆ 2,500 ಪೊಲೀಸರಿಂದ ಬಿಗಿ ಭದ್ರತೆ!
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಒಂದು ವಾರ ಸ್ಥಗಿತಗೊಂಡಿತ್ತು. ಪಾಕ್ ಇತ್ತೀಚೆಗೆ ಐಪಿಎಲ್ ವೇಳೆ ಬಾಂಬ್ ದಾಳಿಯ ಬೆದರಿಕೆ ಕೂಡ ಹಾಕಿತ್ತು. ಕ್ವಾಲಿಫೈಯರ್ ಪಂದ್ಯ ಪಾಕ್ ಗಡಿ ಸಮೀಪ ನಡೆಯುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಸ್ಟೇಡಿಯಂ ಸುತ್ತಮುತ್ತ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಜಾರಿಯಲ್ಲಿದೆ.


ಮುಲ್ಲಾನ್‌ಪುರ(ಚಂಡೀಗಢ): ಇಂದು ನಡೆಯುವ ಐಪಿಎಲ್ ಮೊದಲ ಕ್ವಾಲಿಫೈಯರ್(PBKS vs RCB Qualifier 1) ಮತ್ತು ನಾಳೆ(ಶುಕ್ರವಾರ) ನಡೆಯುವ ಎಲಿಮಿನೇಟರ್ ಪಂದ್ಯಕ್ಕೆ ಪಂಜಾಬ್ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಭಾರೀ ಭದ್ರತೆ ಒದಗಿಸಲಾಗಿದೆ.
"64 ಗೆಜೆಟೆಡ್ ಅಧಿಕಾರಿಗಳು ಮತ್ತು ಸುಮಾರು 2500 ಪೊಲೀಸ್ ಅಧಿಕಾರಿಗಳನ್ನು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ನಿಯೋಜಿಸಲಾಗುವುದು," ಎಂದು ಪಂಜಾಬ್‌ನ ವಿಶೇಷ ಡಿಜಿಪಿ ಅರ್ಪಿತ್ ಶುಕ್ಲಾ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಒಂದು ವಾರ ಸ್ಥಗಿತಗೊಂಡಿತ್ತು. ಪಾಕ್ ಇತ್ತೀಚೆಗೆ ಐಪಿಎಲ್ ವೇಳೆ ಬಾಂಬ್ ದಾಳಿಯ ಬೆದರಿಕೆ ಕೂಡ ಹಾಕಿತ್ತು. ಕ್ವಾಲಿಫೈಯರ್ ಪಂದ್ಯ ಪಾಕ್ ಗಡಿ ಸಮೀಪ ನಡೆಯುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಸ್ಟೇಡಿಯಂ ಸುತ್ತಮುತ್ತ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಜಾರಿಯಲ್ಲಿದೆ.
ಇಂದು ಆರ್‌ಸಿಬಿ-ಪಂಜಾಬ್ ಫೈಟ್
11 ವರ್ಷಗಳ ಬಳಿಕ ಕ್ವಾಲಿಫೈಯರ್ ಪ್ರವೇಶಿಸಿದ ಪಂಜಾಬ್ ಕಿಂಗ್ಸ್(PBKS vs RCB) ಮತ್ತು 2016ರ ನಂತರ ಕ್ವಾಲಿಫೈಯರ್ ಆಡುತ್ತಿರುವ ಆರ್‌ಸಿಬಿ, ಗುರುವಾರ ನಡೆಯುವ ಐಪಿಎಲ್ 2025ರ(IPL 2025) ಕ್ವಾಲಿಫೈಯರ್-1(PBKS vs RCB Qualifier 1) ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ.
ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಈ ಬಾರಿ ವಿಭಿನ್ನವಾಗಿ ಕಂಡುಬಂದಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ 200 ರನ್ ಗಡಿ ದಾಟಿತ್ತು. ಆ ಬಳಿಕ ನಡೆದ ಪಂದ್ಯದಲ್ಲಿ 150 ರನ್ ಗಳಿಸಲು ಪರದಾಟ ನಡೆಸುವಂತೆ ವರ್ತಿಸಿತ್ತು. ಹೀಗಾಗಿ ಈ ಪಿಚ್ ಬ್ಯಾಟಿಂಗ್ ಅಥವಾ ಬೌಲಿಂಗ್‌ಗೆ ನೆರವು ನೀಡಲಿದೆ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಪಂದ್ಯದ ವೇಳೆಯೇ ಈ ಪಿಚ್ ಹೇಗೆ ವರ್ತಿಸಲಿದೆ ಎಂಬುದು ತಿಳಿಯಬೇಕಿದೆ.
ಇದನ್ನೂ ಓದಿ IPL 2025: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸೂರ್ಯಕುಮಾರ್
ಸದ್ಯ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಹೀಗಾಗಿ ಸಂಪೂರ್ಣವಾಗಿ ಪಂದ್ಯ ನಡೆಯುವುದು ಖಚಿತ. ಒಂದೊಮ್ಮೆ ಅನಿರೀಕ್ಷಿತ ಮಳೆಯಿಂದ ಅಥವಾ ಇತರ ಕಾರಣದಿಂದ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಪಂಜಾಬ್ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಆಗ ಆರ್‌ಸಿಬಿ ಎರಡನೇ ಕ್ವಾಲಿಫೈಯರ್ ಆಡಬೇಕು.