ಆಸ್ಟ್ರೇಲಿಯನ್ ಓಪನ್: ಸೆಮಿಫೈನಲ್‌ನಲ್ಲಿ ಸೋತ ಪಿ.ವಿ ಸಿಂಧು
PV Sindhu: ಸಿಂಧು ಅವರ ಸೋಲಿನೊಂದಿಗೆ, ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ಸವಾಲು ಕೂಡ ಕೊನೆಗೊಂಡಿತು. ಇತರ ಯಾವುದೇ ಭಾರತೀಯ ಶಟ್ಲರ್‌ಗಳು ಕೊನೆಯ ನಾಲ್ಕು ಹಂತವನ್ನು ತಲುಪಲು ಸಾಧ್ಯವಾಗಲಿಲ್ಲ. ಸಿಂಧು ಅವರ ವರ್ಷದ ಎರಡನೇ ಸೆಮಿಫೈನಲ್ ಇದಾಗಿತ್ತು. ಪ್ರಶಸ್ತಿ ಗೆಲ್ಲದಿದ್ದರೂ ಹೈದರಾಬಾದ್ ಶಟ್ಲರ್ ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಮತ್ತೆ ಅಗ್ರ 10 ರೊಳಗೆ ಬಂದಿದ್ದಾರೆ.
PV Sindhu -
ಸಿಡ್ನಿ, ಜೂ.13: ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್(Australian Open) ಟೂರ್ನಿಯಲ್ಲಿ ಭಾರತದ ಪಿ.ವಿ. ಸಿಂಧು(PV Sindhu) ಅವರ ಅಭಿಯಾನ ಕೊನೆಗೊಂಡಿದೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅಕಾನೆ ಯಮಗುಚಿ ವಿರುದ್ಧ ಸೋತು ಹೊರಬಿದ್ದರು. ಈ ಸ್ಪರ್ಧೆಯು ನೇರ ಗೇಮ್‌ಗಳಲ್ಲಿ ಕೊನೆಗೊಂಡಿತು. ಯಮಗುಚಿ 22-20, 21-12 ಅಂತರದಲ್ಲಿ ಜಯಗಳಿಸಿ ಪ್ರಶಸ್ತಿ ಸುತ್ತಿಗೇರಿದರು. ಯಮಗುಚಿ ವಿರುದ್ಧ ಸಿಂಧು ತಮ್ಮ ಕೊನೆಯ ಆರು ಮುಖಾಮುಖಿಗಳಲ್ಲಿ ಐದರಲ್ಲಿ ಸೋತಿದ್ದಾರೆ.
ಆರಂಭಿಕ ಗೇಮ್‌ನ ಬಹುಪಾಲು ಸಮಯ ಸಿಂಧು ಮುನ್ನಡೆ ಸಾಧಿಸಿದರು. ಆದರೆ ಆಟದ ಕೊನೆಯ ಹಂತದಲ್ಲಿ ಯಮಗುಚಿ ತನ್ನ ಲಯಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಪಂದ್ಯದ ಸ್ವರೂಪ ಬದಲಾಗತೊಡಗಿತು. ಬಲಿಷ್ಠ ಹೊಡೆತಗಳ ಮೂಲಕ 2 ಅಂಕದ ಅಂತರದಿಂದ ಮೇಲುಗೈ ಸಾಧಿಸಿದರು.
IND vs AFG 1st ODI: ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ
ದ್ವಿತೀಯ ಗೇಮ್‌ನಲ್ಲಿ ಸಿಂಧು ಸಂಪೂರ್ಣ ಲಯ ಕಳೆದುಕೊಂಡರು. ಎದುರಾಳಿಯ ಆಕ್ರಮಣಕಾರಿ ಆಟದ ಮುಂದೆ ಸಂಪೂರ್ಣ ಶರಣಾದರು. ಕೇವಲ 12 ಅಂಕ ಮಾತ್ರ ಗಳಿಸಿದರು. ಇದು ಯಮಗುಚಿ ಅವರ ಈ ಪ್ರವಾಸದ ನಾಲ್ಕನೇ ಸತತ ಫೈನಲ್ ಆಗಿದೆ. ಮೇ ತಿಂಗಳಲ್ಲಿ ಥೈಲ್ಯಾಂಡ್ ಓಪನ್ ಗೆದ್ದ ಅವರು, ನಂತರ ಸಿಂಗಾಪುರ ಓಪನ್ ಮತ್ತು ಇಂಡೋನೇಷ್ಯಾ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಅವರು ಥೈಲ್ಯಾಂಡ್‌ನ ಪೋರ್ನ್‌ಪಾವೀ ಚೊಚುವಾಂಗ್ ಅವರನ್ನು ಎದುರಿಸಲಿದ್ದಾರೆ.
ಸಿಂಧು ಅವರ ಸೋಲಿನೊಂದಿಗೆ, ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ಸವಾಲು ಕೂಡ ಕೊನೆಗೊಂಡಿತು. ಇತರ ಯಾವುದೇ ಭಾರತೀಯ ಶಟ್ಲರ್‌ಗಳು ಕೊನೆಯ ನಾಲ್ಕು ಹಂತವನ್ನು ತಲುಪಲು ಸಾಧ್ಯವಾಗಲಿಲ್ಲ. ಸಿಂಧು ಅವರ ವರ್ಷದ ಎರಡನೇ ಸೆಮಿಫೈನಲ್ ಇದಾಗಿತ್ತು. ಪ್ರಶಸ್ತಿ ಗೆಲ್ಲದಿದ್ದರೂ ಹೈದರಾಬಾದ್ ಶಟ್ಲರ್ ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಮತ್ತೆ ಅಗ್ರ 10 ರೊಳಗೆ ಬಂದಿದ್ದಾರೆ.