R Ashwin: ಐಪಿಎಲ್ ನಿವೃತ್ತಿ ಬೆನ್ನಲ್ಲೇ ವಿದೇಶಿ ಲೀಗ್ ಆಡಲು ಮುಂದಾದ ಅಶ್ವಿನ್
2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದ ಅಶ್ವಿನ್ ಒಂದು ದಶಕ ಕಾಲ ತಂಡದ ಪರ ಆಡಿದ್ದಾರೆ. 2024ರಲ್ಲಿ ರಾಜಸ್ಥಾನ ರಾಯಲ್ಸ ತಂಡದ ಪರ ಆಡಿದ್ದ ಅಶ್ವಿನ್ ಅವರನ್ನು ಕಳೆದ ವರ್ಷ ನಡೆದಿದ್ದ ಐಪಿಎಲ್ 2025ರ ಹರಾಜಿನಲ್ಲಿ ಸಿಎಸ್ಕೆ ₹9.75 ಕೋಟಿ ರೂ.ಗೆ ಮರಳಿ ತಂಡಕ್ಕೆ ಕರೆ ತಂದಿತ್ತು 2025 ರ ಐಪಿಎಲ್‌ನಲ್ಲಿ ಅವರು ಹಳದಿ ಜೆರ್ಸಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.

-

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಐಪಿಎಲ್‌ಗೆ ವಿದಾಯ ಹೇಳಿದ್ದ ಆರ್. ಅಶ್ವಿನ್(R Ashwin) ಅವರು ವಿದೇಶಿ ಕ್ರಿಕೆಟ್ ಲೀಗ್ ಆಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಯುಎಇ ಇಂಟರ್‌ನ್ಯಾಷನಲ್ ಲೀಗ್ ಟಿ20(ಐಎಲ್‌ಟಿ20) ಆಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಇದೇ ಸೆಪ್ಟೆಂಬರ್ 30ರಂದು ಆಟಗಾರರ ಹರಾಜು ನಡೆಯಲಿದ್ದು, ಅಶ್ವಿನ್ ಹರಾಜಿಗೆ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಅಶ್ವಿನ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಆಯೋಜಕರ ಜೊತೆ ಮಾತನಾಡುತ್ತಿದ್ದೇನೆ. ನಾನು ಈಗಾಗಲೇ ಐಎಲ್‌ಟಿ20 ಟೂರ್ನಿಯ ಆಟಗಾರರ ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದೇನೆ, ನನ್ನನ್ನು ಯಾರಾದರೂ ಖರೀದಿಸುವ ವಿಶ್ವಾಸವಿದೆ’ ಎಂದಿದ್ದಾರೆ.
ಐಎಲ್‌ಟಿ20 ಟೂರ್ನಿಯಲ್ಲಿ ಈಗಾಗಲೇ ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್ ಹಾಗೂ ಅಂಬಟಿ ರಾಯುಡು ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಸಾಲಿಗೆ ಸೇರಲು ರವಿಚಂದ್ರನ್ ಅಶ್ವಿನ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಕೇರಂ ಬಾಲ್ ತಜ್ಞ ಎಂದೇ ಕರೆಯಲಾಗುವ ಅಶ್ವಿನ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ಈ ಹಠಾತ್ ಘೋಷಣೆ ಹಲವರಲ್ಲಿ ಆಘಾತ, ಇನ್ನೂ ಕೆಲವರಲ್ಲಿ ಅಚ್ಚರಿ ಮೂಡಿಸಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ 2ನೇ ಅತೀ ಹೆಚ್ಚು ವಿಕೆಟ್ ಉರುಳಿಸಿದ ಸಾಧನೆ ಅಶ್ವಿನ್ (537) ಹೆಸರಿನಲ್ಲಿದೆ. ದಾಖಲೆ ಅನಿಲ್ ಕುಂಬ್ಳೆ ಹೆಸರಲ್ಲಿದೆ (619). ವಿಶ್ವದ ಬೌಲಿಂಗ್ ಸಾಧಕರ ಯಾದಿಯಲ್ಲಿ ಅಶ್ವಿನ್‌ಗೆ 7ನೇ ಸ್ಥಾನ.
2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದ ಅಶ್ವಿನ್ ಒಂದು ದಶಕ ಕಾಲ ತಂಡದ ಪರ ಆಡಿದ್ದಾರೆ. 2024ರಲ್ಲಿ ರಾಜಸ್ಥಾನ ರಾಯಲ್ಸ ತಂಡದ ಪರ ಆಡಿದ್ದ ಅಶ್ವಿನ್ ಅವರನ್ನು ಕಳೆದ ವರ್ಷ ನಡೆದಿದ್ದ ಐಪಿಎಲ್ 2025ರ ಹರಾಜಿನಲ್ಲಿ ಸಿಎಸ್ಕೆ ₹9.75 ಕೋಟಿ ರೂ.ಗೆ ಮರಳಿ ತಂಡಕ್ಕೆ ಕರೆ ತಂದಿತ್ತು 2025 ರ ಐಪಿಎಲ್‌ನಲ್ಲಿ ಅವರು ಹಳದಿ ಜೆರ್ಸಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.
ಒಟ್ಟಾರೆಯಾಗಿ, ಅವರು 220 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ, 30.22 ರ ಸರಾಸರಿಯಲ್ಲಿ 187 ವಿಕೆಟ್‌ಗಳನ್ನು ಪಡೆದಿದ್ದಾರೆ, ಅವರ ಅತ್ಯುತ್ತಮ 4/34. ಬ್ಯಾಟಿಂಗ್‌ನಲ್ಲಿ, ಅವರು 833 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಗರಿಷ್ಠ 50 ರನ್‌ಗಳು ಮತ್ತು 13.02 ಸರಾಸರಿಯಿದೆ.
ಇದನ್ನೂ ಓದಿ ʻಪಿಚ್ ಮೇಲೆ ಪ್ರಪೋಸ್ ಮಾಡಿದ್ದೆʼ: ತಮ್ಮ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ ಆರ್ ಅಶ್ವಿನ್!