Gudibande News: ಪೋಲಂಪಲ್ಲಿ ರಸ್ತೆಯಲ್ಲಿ ಟಿಪ್ಪರ್‌ಗಳಿಂದ ರಸ್ತೆ ಹಾಳು, ಕ್ರಮಕ್ಕೆ ಸ್ಥಳೀಯರ ಆಕ್ರೋಶ
ಗುಡಿಬಂಡೆ ಪಟ್ಟಣದಿಂದ ಪೋಲಂಪಲ್ಲಿ-ವರ್ಲಕೊಂಡ ಗ್ರಾಮದ ರಸ್ತೆ ತುಂಬಾನೆ ಹದೆಗಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಸ್ಥಳೀಯ ಜನತೆ ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಬರುವಂತಹ ಜನರಿಗೆ ಈ ರಸ್ತೆ ಪ್ರಮುಖವಾಗಿದೆ. ಆದರೆ ಈ ರಸ್ತೆ ಗುಂಡಿಗಳಿಂದ ಕೂಡಿದ ಹಿನ್ನೆಲೆಯಲ್ಲಿ ಎಲ್ಲರಿಗೂ ತೊಂದರೆಯಾಗಿದೆ.

ಗುಡಿಬಂಡೆ-ವರ್ಲಕೊAಡ ರಸ್ತೆಯಲ್ಲಿ ಟಿಪ್ಪರ್‌ಗಳ ಹಾವಳಿಯಿಂದ ರಸ್ತೆ ಹಾಳಾಗಿರುವುದು. -

ಗುಡಿಬಂಡೆ: ತಾಲೂಕಿನ ಪೋಲಂಪಲ್ಲಿ ಮಾರ್ಗದ ರಸ್ತೆ ತುಂಬಾನೆ ಹದೆಗಟ್ಟಿದೆ, ಅದರಲ್ಲೂ ಈ ರಸ್ತೆಯಲ್ಲಿ ಟಿಪ್ಪರ್‌ಗಳು ಹೆಚ್ಚು ಸಂಚರಿಸುತ್ತಿರುವುದರಿAದ ಇರುವ ರಸ್ತೆ ಕೂಡ ಹಾಳಾಗುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಗುಡಿಬಂಡೆ ಪಟ್ಟಣದಿಂದ ಪೋಲಂಪಲ್ಲಿ-ವರ್ಲಕೊಂಡ ಗ್ರಾಮದ ರಸ್ತೆ ತುಂಬಾನೆ ಹದೆಗಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಸ್ಥಳೀಯ ಜನತೆ ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಬರುವಂತಹ ಜನರಿಗೆ ಈ ರಸ್ತೆ ಪ್ರಮುಖವಾಗಿದೆ. ಆದರೆ ಈ ರಸ್ತೆ ಗುಂಡಿಗಳಿಂದ ಕೂಡಿದ ಹಿನ್ನೆಲೆಯಲ್ಲಿ ಎಲ್ಲರಿಗೂ ತೊಂದರೆಯಾಗಿದೆ. ಇದು ಸಾಲದು ಎಂಬಂತೆ ಕೊಂಚ ಸರಿಯಾಗಿರುವ ರಸ್ತೆಯಲ್ಲಿ ಅತೀ ಭಾರದ ಲೋಡ್ ಗಳನ್ನು ಹಾಕಿಕೊಂಡ ಟಿಪ್ಪರ್‌ಗಳು ಸಂಚರಿಸುತ್ತಿರುವ ಕಾರಣ ರಸ್ತೆ ತುಂಬಾನೆ ಹಾಳಾಗುತ್ತಿದೆ.
ಇದನ್ನೂ ಓದಿ: Gudibande News: ಸರ್ಕಾರಿ ನೌಕರರಿಗೆ ನಿವೃತ್ತಿ ಸಹಜ, ಸೇವಾವಧಿಯಲ್ಲಿ ಉತ್ತಮ ಸೇವೆ ಮಾಡುವುದು ಅವಶ್ಯ: ಕೆ.ವಿ.ನಾರಾಯಣಸ್ವಾಮಿ
ಈ ಕುರಿತು ಮೇಡಿಮಾಕಲಹಳ್ಳಿ ಗ್ರಾಮದ ರೈತ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಸುಮಾರು ವರ್ಷಗಳಿಂದ ವರ್ಲಕೊಂಡ ಗ್ರಾಮದಿಂದ ಗುಡಿಬಂಡೆಗೆ ಹೋಗಲು ಇದೇ ರಸ್ತೆ ನಮಗೆ ಆಸರೆ ಯಾಗಿದೆ. ಬೆಳಗಿನ ಜಾವ ಶಾಲೆಗೆ ಹೋಗುವ ಮಕ್ಕಳು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಶಾಲೆಗಳಿಗೆ ಹೋಗುವ ದುಸ್ಥಿತಿ ಬಂದಿದೆ. ಜೊತೆಗೆ ರಾತ್ರಿ ಸಮಯದಲ್ಲಿ ಅತಿಭಾರ ಹೊತ್ತಿರುವ ಟಿಪ್ಪರ್‌ಗಳು ಅತಿ ವೇಗದಲ್ಲಿ ಹೋಗುತ್ತಾರೆ.
ರಾತ್ರಿ ಸಮಯದಲ್ಲಿ ರೈತರು ಹಾಗೂ ವಾಹನ ಸವಾರರು ಸಹ ಪ್ರಾಣವನ್ನು ಅಂಗೈಲ್ಲಿಟ್ಟುಕೊಂಡು ಓಡಾಡಬೇಕಾಗಿದೆ. ಇದೀಗ ಮಳೆಗಾಲ ಸಮಯದಲ್ಲಿ ರಸ್ತೆ ಕೊಚ್ಚೆಯಂತಾಗುತ್ತದೆ. ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಮಾಲೀಕರಿಂದ ಈ ಸಮಸ್ಯೆ ಉದ್ಬವಿಸಿದೆ. ರಸ್ತೆ ಸಮಸ್ಯೆಯ ಬಗ್ಗೆ ಹೇಳಿದರೇ ನಿಮಗೆ ಏನು ಬೇಕೋ ಅದು ಮಾಡಿಕೊಳ್ಳಿ, ನಾವು ಯಾರಿಗೂ ಹೆದರುವುದಿಲ್ಲ ಎಂದು ನಮ್ಮ ಮೇಲೆ ತಿರುಗಿ ಬೀಳುತ್ತಾರೆ. ಗಣಿಗಾರಿಕೆ ನಡೆಸಲು ಬಾಂಬ್ ಗಳನ್ನು ಸಿಡಿಸುತ್ತಾರೆ. ಇದರಿಂದ ನಮ್ಮ ಮನೆಗಳಲ್ಲಿ ಭೂಕಂಪನದ ಅನುಭವ ಆಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
ಇನ್ನೂ ಗಂಭೀರವಾದ ಈ ಸಮಸ್ಯೆಯ ಬಗ್ಗೆ ಈಗಾಗಲೇ ಮೌಖಿಕವಾಗಿ ಒಮ್ಮೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಸಹ ಸಮಸ್ಯೆ ಬಗೆಹರಿದಿಲ್ಲ. ಈ ಸಮಸ್ಯೆ ಕೂಡಲೆ ಬಗೆಹರಿಸದೇ ಇದ್ದರೇ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಉಗ್ರವಾದ ಹೋರಾಟ ಮಾಡುತ್ತೇವೆ. ಸಮಸ್ಯೆ ಹೆಚ್ಚಾಗುವು ದಕ್ಕೂ ಮುನ್ನಾ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.