ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೋಲುಗಳ ಸುರಿಮಳೆ; ಏಷ್ಯಾಕಪ್‌ ಹಾಕಿಯಲ್ಲಿ ಭಾರತಕ್ಕೆ ಹ್ಯಾಟ್ರಿಕ್‌ ಗೆಲುವು

Hockey Asia Cup 2025: ಅಭಿಷೇಕ್ (5ನೇ, 8ನೇ, 20ನೇ ಮತ್ತು 59ನೇ), ಸುಖ್‌ಜೀತ್ ಸಿಂಗ್ (15ನೇ, 32ನೇ, 38ನೇ), ಜುಗ್ರಾಜ್ ಸಿಂಗ್ (24ನೇ, 31ನೇ, 47ನೇ), ನಾಯಕ ಹರ್ಮನ್‌ಪ್ರೀತ್ ಸಿಂಗ್ (26ನೇ), ಅಮಿತ್ ರೋಹಿದಾಸ್ (29ನೇ), ರಾಜಿಂದರ್ ಸಿಂಗ್ (32ನೇ), ಸಂಜಯ್ ಸಿಂಗ್ (54ನೇ) ಮತ್ತು ದಿಲ್‌ಪ್ರೀತ್ ಸಿಂಗ್ (55ನೇ) ನಿಮಿಷದಲ್ಲಿ ಗೋಲು ಗಳಿಸಿದರು.

ಏಷ್ಯಾಕಪ್‌ ಹಾಕಿಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಭಾರತ

-

Abhilash BC Abhilash BC Sep 1, 2025 10:07 PM

ರಾಜಗೀರ್‌, (ಬಿಹಾರ): ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ(Hockey Asia Cup 2025) ಈಗಾಗಲೇ ಸೂಪರ್‌ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿರುವ ಆತಿಥೇಯ ಭಾರತ ತಂಡ ಮತ್ತೊಂದು ಗೆಲುವು ದಾಖಲಿಸಿದೆ. ಸೋಮವಾರ ನಡೆದ ಗುಂಪು ಹಂತದ ತನ್ನ ಅಂತಿಮ ಪಂದ್ಯದಲ್ಲಿ ಕಜಾಕಸ್ತಾನ(India vs Kazakhstan) ಎದುರು ಗೋಲುಗಳ ಸುರಿಮಳೆಗೈದು 15-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ಇದು ಭಾರತಕ್ಕೆ ಒಲಿದ ಹ್ಯಾಟ್ರಿಕ್‌ ಗೆಲುವು. ಭಾರತ 9 ಅಂಕಗಳೊಂದಿಗೆ ಎ ಗುಂಪಿನ ಅಗ್ರಸ್ಥಾನದಲ್ಲಿದೆ. 'ಬಿ' ಗುಂಪಿನಲ್ಲಿ ಮಲೇಷ್ಯಾ ಕೂಡ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.

ಭಾರತ ಪರ ಅಭಿಷೇಕ್ ನಾಲ್ಕು ಗೋಲು ಬಾರಿಸಿದರೆ, ಸುಖ್‌ಜೀತ್ ಸಿಂಗ್ ಹ್ಯಾಟ್ರಿಕ್ ಗಳಿಸಿದರು. ಅಭಿಷೇಕ್ (5ನೇ, 8ನೇ, 20ನೇ ಮತ್ತು 59ನೇ), ಸುಖ್‌ಜೀತ್ ಸಿಂಗ್ (15ನೇ, 32ನೇ, 38ನೇ), ಜುಗ್ರಾಜ್ ಸಿಂಗ್ (24ನೇ, 31ನೇ, 47ನೇ), ನಾಯಕ ಹರ್ಮನ್‌ಪ್ರೀತ್ ಸಿಂಗ್ (26ನೇ), ಅಮಿತ್ ರೋಹಿದಾಸ್ (29ನೇ), ರಾಜಿಂದರ್ ಸಿಂಗ್ (32ನೇ), ಸಂಜಯ್ ಸಿಂಗ್ (54ನೇ) ಮತ್ತು ದಿಲ್‌ಪ್ರೀತ್ ಸಿಂಗ್ (55ನೇ) ನಿಮಿಷದಲ್ಲಿ ಗೋಲು ಗಳಿಸಿದರು.

ಭಾರತ ತಂಡ ಎರಡನೇ ಕ್ವಾರ್ಟರ್‌ನಲ್ಲಿ ನಾಲ್ಕು ಬಾರಿ ಗೋಲು ಗಳಿಸಿ ಕಜಾಕಸ್ತಾನ ತಂಡವನ್ನು ಸಂಪೂರ್ಣ ಒತ್ತಡಕ್ಕೆ ಸಿಲಿಕಿಸಿತು. ಅರ್ಧಾವಧಿಯಲ್ಲಿ 7-0 ಮುನ್ನಡೆ ಸಾಧಿಸಿತು. ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿಯೂ ಗೋಲುಗಳ ಸುರಿಮಳೆಗೈದಿತು.

ಇದನ್ನೂ ಓದಿ Hockey Asia Cup 2025: ಜಪಾನ್‌ ವಿರುದ್ದ ಗೆದ್ದು ಸೂಪರ್‌ ಫೋರ್‌ಗೆ ಅರ್ಹತೆ ಪಡೆದ ಭಾರತ!