ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಚೆನ್ನೈ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ

CSK vs RCB: ಕೊಹ್ಲಿಗೆ ಆರಂಭಿಕನಾಗಿ 5,000 ಟಿ20 ರನ್‌ಗಳನ್ನು ಪೂರ್ಣಗೊಳಿಸಲು ಇನ್ನೂ 38 ರನ್‌ಗಳ ಅಗತ್ಯವಿದೆ. ಈ ಮೈಲಿಗಲ್ಲು ಸಾಧಿಸುವುದರಿಂದ ಅವರು ಟಿ20 ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಚೆನ್ನೈ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್‌ ಕೊಹ್ಲಿ

Profile Abhilash BC Mar 28, 2025 9:53 AM

ಚೆನ್ನೈ: ಇಂದು(ಶುಕ್ರವಾರ) ನಡೆಯುವ ಚೆನ್ನೈ ಸೂಪರ್‌ ಕಿಂಗ್ಸ್‌(CSK vs RCB) ವಿರುದ್ಧದ ಐಪಿಎಲ್‌(IPL 2025) ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಸಿಎಸ್‌ಕೆ ಎದುರು ಭರ್ಜರಿ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ(Virat Kohli) ಇಂದು 55 ರನ್‌ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 13 ಸಾವಿರ ರನ್ ಪೂರೈಸಲಿದ್ದು, ಈ ಸಾಧನೆ ಮಾಡಿದ ವಿಶ್ವದ 5ನೇ ಬ್ಯಾಟರ್ ಎನಿಸಲಿದ್ದಾರೆ. ಕ್ರಿಸ್‌ ಗೇಲ್‌(14,562) ಮೊದಲಿಗ.

ಸಿಎಸ್‌ಕೆ ಎದುರು ವಿರಾಟ್‌ ಕೊಹ್ಲಿ 32 ಇನಿಂಗ್ಸ್‌ಗಳಲ್ಲಿ 1,053 ರನ್ ಕಲೆಹಾಕಿದ್ದು, 9 ಅರ್ಧಶತಕ ಸಿಡಿಸಿದ್ದಾರೆ. ಇಂದಿನ ಪಂದ್ಯದಲ್ಲಿ 5 ರನ್‌ ಬಾರಿಸಿದರೆ ಚೆನ್ನೈ ವಿರುದ್ಧ ಅತ್ಯಧಿಕ ರನ್‌ ಕಲೆ ಹಾಕಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ಶಿಖರ್‌ ಧವನ್‌(1,057) ಹೆಸರಿನಲ್ಲಿದೆ.

ಕೊಹ್ಲಿಗೆ ಆರಂಭಿಕನಾಗಿ 5,000 ಟಿ20 ರನ್‌ಗಳನ್ನು ಪೂರ್ಣಗೊಳಿಸಲು ಇನ್ನೂ 38 ರನ್‌ಗಳ ಅಗತ್ಯವಿದೆ. ಈ ಮೈಲಿಗಲ್ಲು ಸಾಧಿಸುವುದರಿಂದ ಅವರು ಟಿ20 ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.



ಕೊಹ್ಲಿ 9 ಬೌಂಡರಿ ಬಾರಿಸಿದರೆ ಏಷ್ಯಾದಲ್ಲಿ ಆಡಿದ ಟಿ20ಗಳಲ್ಲಿ 1,000 ಬೌಂಡರಿಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಲಿದ್ದಾರೆ. ಕೆಕೆಆರ್ ವಿರುದ್ಧ ಆರ್‌ಸಿಬಿಯ ಆರಂಭಿಕ ಪಂದ್ಯದಲ್ಲಿ, ಅವರು ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು. ಸದ್ಯ ಕೊಹ್ಲಿ 991* ಬೌಂಡರಿ ಬಾರಿಸಿದ್ದಾರೆ.

ಇದನ್ನೂ ಓದಿ CSK vs RCB head-to-head: ಚೆನ್ನೈ ವಿರುದ್ಧ ಆರ್‌ಸಿಬಿ ದಾಖಲೆ ಹೇಗಿದೆ?

ಏಷ್ಯಾದಲ್ಲಿ ಆಡುವ ಟಿ20ಗಳಲ್ಲಿ 150 ಕ್ಯಾಚ್‌ಗಳ ಮೈಲುಗಲ್ಲು ತಲುಪಲು ಕೊಹ್ಲಿಗೆ ಪ್ರಸ್ತುತ ನಾಲ್ಕು ಕ್ಯಾಚ್‌ಗಳ ಅಗತ್ಯವಿದೆ. ಒಂದೇ ಪಂದ್ಯದಲ್ಲಿ ಈ ದಾಖಲೆಯನ್ನು ಸಾಧಿಸುವುದು ಕಷ್ಟವಾದರೂ, ಮುಂಬರುವ ಪಂದ್ಯಗಳಲ್ಲಿ ಕೊಹ್ಲಿಗೆ ಈ ಸಾಧನೆ ಮಾಡಬಹುದಾಗಿದೆ.