ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs RCB head-to-head: ಚೆನ್ನೈ ವಿರುದ್ಧ ಆರ್‌ಸಿಬಿ ದಾಖಲೆ ಹೇಗಿದೆ?

CSK vs RCB: ಚೆನ್ನೈ ತಂಡದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ, ನೂರ್ ಅಹ್ಮದ್, ಕರ್ನಾಟಕದ ಶ್ರೇಯಸ್ ಗೋಪಾಲ್ ಸೇರಿ ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಸ್ಪಿನ್ನರ್‌ಗಳನ್ನು ಎದುರಿಸುವುದು ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲಾಗಬಹುದು.

ಚೆನ್ನೈ ವಿರುದ್ಧ ಆರ್‌ಸಿಬಿ ದಾಖಲೆ ಹೇಗಿದೆ?

Profile Abhilash BC Mar 27, 2025 3:59 PM

ಚೆನ್ನೈ: ಈ ಬಾರಿಯ ಐಪಿಎಲ್‌(IPL 2025)ನ ಬಲಿಷ್ಠ ತಂಡಗಳಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bengaluru) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ನಡುವಿನ ಬಿಗ್‌ ಫೈಟ್‌ ಒಂದಕ್ಕೆ ಶುಕ್ರವಾರ ರಾತ್ರಿ ಚೆಪಾಕ್‌ ಮೈದಾನ ಸಾಕ್ಷಿಯಾಗಲಿದೆ. ಕಳೆದ ಬಾರಿಯ ಆವೃತ್ತಿಯಲ್ಲಿ ಚೆನ್ನೈ ತಂಡದ ಪ್ಲೇ ಆಫ್‌ ಹಾದಿಗೆ ಆರ್‌ಸಿಬಿ ಕೊಳ್ಳಿ ಇಟ್ಟಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಭವಿಸಿದ ಸೋಲಿಗೆ ತವರಿನ ಚೆಪಾಕ್‌ ಸ್ಟೇಡಿಯಂನಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಇತ್ತಂಡಗಳ ಐಪಿಎಲ್‌ ದಾಖಲೆ(CSK vs RCB head-to-head) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಚೆಪಾಕ್‌ನಲ್ಲಿ ಆರ್‌ಸಿಬಿ ದುರ್ಬಲ

ಆರ್‌ಸಿಬಿ ತಂಡ ಬಲಿಷ್ಠವಾಗಿದ್ದರೂ ಕೂಡ ಚೆನ್ನೈಯ ಚೆಪಾಕ್‌ ಸ್ಟೇಡಿಯಂನಲ್ಲಿ ಉತ್ತಮ ದಾಖಲೆ ಹೊಂದಿಲ್ಲ 2008 ರಿಂದ 2024ರ ತನಕ 9 ಪಂದ್ಯಗಳನ್ನಾಡಿ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. 8 ಪಂದ್ಯಗಳಲ್ಲಿ ಸೋಲು ಕಂಡಿದೆ. ಸ್ಪಿನ್‌ ಟ್ರ್ಯಾಕ್‌ ಆಗಿರುವ ಕಾರಣ ಆರ್‌ಸಿಬಿಗೆ ಈ ಬಾರಿಯೂ ಗೆಲುವು ಕಷ್ಟ ಎನ್ನಲಡ್ಡಿಯಿಲ್ಲ. ಏಕೆಂದರೆ ತಂಡದಲ್ಲಿ ಕನಿಷ್ಠ ಒಬ್ಬ ಅನುಭವಿ ಸ್ಪಿನ್ನರ್‌ ಕೂಡ ಇಲ್ಲ. ಗೆದ್ದರೆ ಪವಾಡವೇ ಸರಿ.

ಒಟ್ಟಾರೆ ಐಪಿಎಲ್​ ದಾಖಲೆ ಉತ್ತಮವಾಗಿಲ್ಲ

ಒಟ್ಟಾರೆ ಐಪಿಎಲ್​ ದಾಖಲೆ ಕೂಡ ಸಿಎಸ್​ಕೆ ಪರವಾಗಿದೆ. ಇದುವರೆಗೆ ಉಭಯ ತಂಡಗಳು 33 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಚೆನ್ನೈ 21 ಪಂದ್ಯ ಗೆದ್ದಿದೆ. ಆರ್‌ಸಿಬಿ 11 ಪಂದ್ಯ ಜಯಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಮೊದಲ ಪಂದ್ಯವನ್ನು ತವರಿನಲ್ಲೇ ಗೆದ್ದಿರುವ ಚೆನ್ನೈಗೆ ಇದು ಎರಡನೇ ತವರು ಪಂದ್ಯ. ತವರಿನ ಲಾಭವನ್ನೂ ಹೊಂದಿದೆ. ಒಟ್ಟಾರೆ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಚೆನ್ನೈ ತಂಡದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ, ನೂರ್ ಅಹ್ಮದ್, ಕರ್ನಾಟಕದ ಶ್ರೇಯಸ್ ಗೋಪಾಲ್ ಸೇರಿ ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಸ್ಪಿನ್ನರ್‌ಗಳನ್ನು ಎದುರಿಸುವುದು ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲಾಗಬಹುದು. ಅದರಲ್ಲೂ ಸ್ಪಿನ್‌ಗೆ ಪರದಾಡುವ ಕೊಹ್ಲಿಗೆ ಇದೊಂದು ಕಠಿಣ ಪರೀಕ್ಷೆ ಎಂದರೂ ತಪ್ಪಗಲಾರದು.

ಇದನ್ನೂ ಓದಿ CSK vs RCB: ಆರ್‌ಸಿಬಿ-ಚೆನ್ನೈ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೀಗಿದೆ

ಸಂಭಾವ್ಯ ತಂಡಗಳು

ಚೆನ್ನೈ ಸೂಪರ್‌ ಕಿಂಗ್ಸ್‌: ಋತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್‌, ಎಂಎಸ್ ಧೋನಿ(ವಿ.ಕೀ), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಪ್ ಸಾಲ್ಟ್ (ವಿ.ಕೀ.), ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ,ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್‌ ಕುಮಾರ್‌.