IND vs ENG: ಧೋನಿಯ ದಾಖಲೆ ಮುರಿದ ರಿಷಭ್ ಪಂತ್
ಸದ್ಯ 65 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿರುವ ಪಂತ್, ದ್ವಿತೀಯ ದಿನದಾಟದಲ್ಲಿ ಶತಕ ಪೂರ್ತಿಗೊಳಿಸಿದರೆ ಧೋನಿಯ ಮತ್ತೊಂದು ದಾಖಲೆ ಕೂಡ ಪತನಗೊಳ್ಳಲಿದೆ. ಸದ್ಯ ಪಂತ್ ಮತ್ತು ಧೋನಿ ತಲಾ 6 ಶತಕ ಬಾರಿಸಿದಾರೆ. ಪಂತ್ ಇಂದು ಶತಕ ಬಾರಿಸಿದರೆ ರೆಡ್-ಬಾಲ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಕೀಪರ್ ಆಗಬಹುದು.


ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್(IND vs ENG) ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್(Rishabh Pant) ಅರ್ಧಶತಕ ಬಾರಿಸುವ ಮೂಲಕ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ದಾಖಲೆಯೊಂದನ್ನು ಮುರಿದ್ದಾರೆ. ಪಂತ್ ಅರ್ಧಶತಕ ಪೂರ್ತಿಗೊಳಿಸುತ್ತಿದ್ದಂತೆ ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ವಿಕೆಟ್ ಕೀಪರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಧೋನಿ(1,732) ಹೆಸರಿನಲ್ಲಿತ್ತು. ಇದೀಗ ಪಂತ್(1746) ಈ ದಾಖಲೆ ಹಿಂದಿಕ್ಕಿದ್ದಾರೆ.
ಸದ್ಯ 65 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿರುವ ಪಂತ್, ದ್ವಿತೀಯ ದಿನದಾಟದಲ್ಲಿ ಶತಕ ಪೂರ್ತಿಗೊಳಿಸಿದರೆ ಧೋನಿಯ ಮತ್ತೊಂದು ದಾಖಲೆ ಕೂಡ ಪತನಗೊಳ್ಳಲಿದೆ. ಸದ್ಯ ಪಂತ್ ಮತ್ತು ಧೋನಿ ತಲಾ 6 ಶತಕ ಬಾರಿಸಿದಾರೆ. ಪಂತ್ ಇಂದು ಶತಕ ಬಾರಿಸಿದರೆ ರೆಡ್-ಬಾಲ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಕೀಪರ್ ಆಗಬಹುದು.
ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 85 ಓವರ್ಗಳಿಗೆ 3 ವಿಕೆಟ್ಗಳ ನಷ್ಟಕ್ಕೆ 359 ರನ್ಗಳನ್ನು ಕಲೆ ಹಾಕಿದೆ. ಆ ಮೂಲಕ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಜೋಡಿ ಹೊಸ ಚೆಂಡಿನ ಸವಾಲನ್ನು ಸಮರ್ಥವಾಗಿ ಎದುರಿಸಿತು ಹಾಗೂ ಮುರಿಯದ ಮೊದಲನೇ ವಿಕೆಟ್ಗೆ 91 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತಕ್ಕೆ ಭರ್ಜರಿ ಆರಂಭವನ್ನು ನೀಡಿತ್ತು. ಆದರೆ, 78 ಎಸೆತಗಳಲ್ಲಿ 42 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಕೆಎಲ್ ರಾಹುಲ್, 25ನೇ ಓವರ್ನಲ್ಲಿ ಬ್ರೈಡನ್ ಕಾರ್ಸ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ಕೊಟ್ಟಿದ್ದರು. ಆ ಮೂಲಕ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು.
ಇದನ್ನೂ ಓದಿ IND vs ENG: ಮೊದಲನೇ ಟೆಸ್ಟ್ನಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಯಶಸ್ವಿ ಜೈಸ್ವಾಲ್!
ಜೈಸ್ವಾಲ್ ವಿಕೆಟ್ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿಯನ್ನು ಹೊತ್ತ ನಾಯಕ ಶುಭಮನ್ ಗಿಲ್ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಇಲ್ಲಿನ ಕಂಡೀಷನ್ಸ್ ಅನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡ ಗಿಲ್, ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರು ಮೊದಲನೇ ದಿನದಾಟದ ಅಂತ್ಯಕ್ಕೆ 175 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 127 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಅವರು ಟೆಸ್ಟ್ ತಂಡದ ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು