T20 WC Winner Ring: ಸಿರಾಜ್‌ಗೆ ವಜ್ರದುಂಗುರ ನೀಡಿದ ರೋಹಿತ್!
ವಿಶೇಷ ವಜ್ರದುಂಗುರವನ್ನು ಶುದ್ಧ ಚಿನ್ನ, ವಜ್ರದ ಮೂಲಕ ಸಿದ್ಧಪಡಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಉಂಗುರದ ಮಧ್ಯಭಾಗದಲ್ಲಿ ಅಶೋಕ ಚಕ್ರದ ಚಿತ್ರವಿದೆ. ಇದರ ಸುತ್ತ 'ಇಂಡಿಯಾ ಟಿ20 ವರ್ಲ್ಡ್ ಚಾಂಪಿಯನ್ಸ್ 2024' ಎಂದು ಇಂಗ್ಲಿಷ್‌ನಲ್ಲಿ ಕೆತ್ತಲಾಗಿದೆ.


ಮುಂಬಯಿ: 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ(Team India) ಸದಸ್ಯರಿಗೆ ಬಿಸಿಸಿಐ ಘೋಷಿಸಿದ್ದ ವಿಶೇಷ ವಜ್ರದುಂಗುರವನ್ನು(T20 WC Winner Ring) ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಅವರಿಗೆ ರೋಹಿತ್ ಶರ್ಮ(Rohit Sharma) ಹಸ್ತಾಂತರಿಸಿದ್ದಾರೆ. ಇಂದು(ಮಂಗಳವಾರ) ವಾಂಖೆಡೆತಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಉಂಗುರವನ್ನು ಸಿರಾಜ್‌ಗೆ ನೀಡಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಇತ್ತೀಚೆಗೆ ಬಿಸಿಸಿಐನ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ವಿಶೇಷ ವಜ್ರದುಂಗುರವನ್ನೂ ನೀಡಿತ್ತು. ಆದರೆ ಕಾರಣಾಂತರಗಳಿಂದ ಮೊಹಮ್ಮದ್ ಸಿರಾಜ್‌ಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇದೀಗ ಸಿರಾಜ್‌ಗೆ ರೋಹಿತ್ ವಜ್ರದುಂಗುರವನ್ನು ಹಸ್ತಾಂತರಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸಿರಾಜ್ ಕೇವಲ ಮೂರು ಪಂದ್ಯಗಳಲ್ಲಿ ಆಡಿ ಒಂದು ವಿಕೆಟ್ ಪಡೆದಿದ್ದರು.
ಈ ಉಂಗುರವನ್ನು ಶುದ್ಧ ಚಿನ್ನ, ವಜ್ರದ ಮೂಲಕ ಸಿದ್ಧಪಡಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಉಂಗುರದ ಮಧ್ಯಭಾಗದಲ್ಲಿ ಅಶೋಕ ಚಕ್ರದ ಚಿತ್ರವಿದೆ. ಇದರ ಸುತ್ತ 'ಇಂಡಿಯಾ ಟಿ20 ವರ್ಲ್ಡ್ ಚಾಂಪಿಯನ್ಸ್ 2024' ಎಂದು ಇಂಗ್ಲಿಷ್‌ನಲ್ಲಿ ಕೆತ್ತಲಾಗಿದೆ.
𝙈𝙤𝙢𝙚𝙣𝙩 𝙩𝙤 𝘾𝙝𝙚𝙧𝙞𝙨𝙝 👏@mdsirajofficial receives a special ring from #TeamIndia Captain @ImRo45 for his impactful contributions in the team's victorious ICC Men's T20 World Cup 2024 campaign 💍@Dream11 pic.twitter.com/dHSnS4mwu1
— BCCI (@BCCI) May 5, 2025
ಕಳೆದ ವರ್ಷ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ,13 ವರ್ಷಗಳ ಬಳಿಕ ಟ್ರೋಫಿ ಎತ್ತಿ ಹಿಡಿದಿತ್ತು. ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ಗಳನ್ನು ಕಲೆಹಾಕುವ ಮೂಲಕ 7 ರನ್ಗಳ ಅಂತರದ ಸೋಲು ಕಂಡಿತ್ತು. ಭಾರತ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು.
ಇದನ್ನೂ ಓದಿ IPL 2025: ಮಾದಕದ್ರವ್ಯ ಸೇವನೆ ಶಿಕ್ಷೆ ಮುಗಿಸಿ ಐಪಿಎಲ್ ಆಡಲು ಸಜ್ಜಾದ ರಬಾಡ