RCB vs RR: ಆರ್‌ಸಿಬಿ-ರಾಜಸ್ಥಾನ್ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ
IPL 2025: ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದ ಪಿಚ್ ಅಷ್ಟಾಗಿ ಬ್ಯಾಟರ್‌ಗಳಿಗೆ ನೆರವು ನೀಡುವುದಿಲ್ಲ. ಇದುವರೆಗೆ ಇಲ್ಲಿ ನಡೆದ 57 ಐಪಿಎಲ್ ಪಂದ್ಯಗಳಲ್ಲಿ ಕೇವಲ ಮೂರು ಬಾರಿ ಮಾತ್ರ 200ರ ಗಡಿ ದಾಟಿದೆ. ಈ ಪಿಚ್ ಮುಖ್ಯವಾಗಿ ವೇಗಿಗಳಿಗೆ ಹೆಚ್ಚಿನ ನೆರೆವು ನೀಡಲಿದೆ. ಹಗಲು ನಡೆಯುವ ಪಂದ್ಯವಾದ ಕಾರಣ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ.


ಜೈಪುರ: ತವರಿನಲ್ಲಿ ಸತತ ಎರಡು ಸೋಲು ಕಂಡಿರುವ ಆರ್‌ಸಿಬಿ(RCB) ಭಾನುವಾರ ನಡೆಯುವ ಐಪಿಎಲ್(IPL 2025) ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(RR vs RCB) ವಿರುದ್ಧ ಆಡಲಿದೆ. ತವರಿನಾಚೆ ಆಡಿದ ಮೂರು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಇದೀಗ ಜೈಪುರದಲ್ಲಿಯೂ ಗೆಲುವಿನ ಹಂಬಲದಲ್ಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಬಲಾಬಲ ಮತ್ತು ಹವಾಮಾನ ವರದಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದ ಪಿಚ್(Sawai Mansingh Stadium Pitch Report) ಅಷ್ಟಾಗಿ ಬ್ಯಾಟರ್‌ಗಳಿಗೆ ನೆರವು ನೀಡುವುದಿಲ್ಲ. ಇಲ್ಲಿ ಬ್ಯಾಟರ್‌ಗಳು ಸಾಮಾನ್ಯವಾಗಿ ದೊಡ್ಡ ಇನಿಂಗ್ಸ್ ಆಡಲು ಹೆಣಗಾಡುತ್ತಾರೆ. ಇದುವರೆಗೆ ಇಲ್ಲಿ ನಡೆದ 57 ಐಪಿಎಲ್ ಪಂದ್ಯಗಳಲ್ಲಿ ಕೇವಲ ಮೂರು ಬಾರಿ ಮಾತ್ರ 200ರ ಗಡಿ ದಾಟಿದೆ. ತೆರೆದ ಮೈದಾನ ಇದಾಗಿರುವ ಕಾರಣ ಗಾಳಿ ಜೋರಾಗಿ ಬೀಸಲಿದೆ. ಹೀಗಾಗಿ ಮುಖ್ಯವಾಗಿ ವೇಗಿಗಳಿಗೆ ಹೆಚ್ಚಿನ ನೆರೆವು ನೀಡಲಿದೆ. ಅದರಲ್ಲೂ ಸ್ವಿಂಗ್ ಬೌಲರ್‌ಗಳಿಗೆ ವಿಕೆಟ್ ಪಡೆಯಲು ಹೆಚ್ಚಿನ ಅವಕಾಶವಿದೆ.
ಮುಖಾಮುಖಿ
ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ಐಪಿಎಲ್‌ನಲ್ಲಿ ಇದುವರೆಗೆ 32 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಆರ್‌ಸಿಬಿ 15 ಪಂದ್ಯ ಗೆದ್ದಿದೆ. ರಾಜಸ್ಥಾನ್ 14 ಪಂದ್ಯ ಜಯಿಸಿದೆ. ಮೂರು ಪಂದ್ಯ ಫಲಿತಾಂಶ ಕಂಡಿಲ್ಲ.
ಹವಾಮಾನ ವರದಿ
ಹಗಲು ನಡೆಯುವ ಪಂದ್ಯವಾದ ಕಾರಣ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಬಿಸಿಲಿನ ವಾತಾವರಣ ಇದ್ದು ಸಂಜೆಯ ವೇಳೆ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ IPL 2025 Points Table: ಕೆಕೆಆರ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ) ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಯುಧ್ವಿರ್ ಸಿಂಗ್ ಚರಕ್, ಸಂದೀಪ್ ಶರ್ಮಾ.
ಆರ್‌ಸಿಬಿ: ಫಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.