ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಭಿಷೇಕ್‌ ಶರ್ಮಾ ದಾಖಲೆ ಮುರಿದ ಪಾಕ್‌ ನಾಯಕ ಫರ್ಹಾನ್

Sahibzada Farhan: ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಫರ್ಹಾನ್ ಗಳಿಸಿದ ಮೂರು ಅರ್ಧಶತಕಗಳು, ದ್ವಿಪಕ್ಷೀಯ ಟಿ20 ಅಂತರರಾಷ್ಟ್ರೀಯ (T20I) ಸರಣಿಯ ಮೂರೂ ಪಂದ್ಯಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಪಾಕಿಸ್ತಾನಿ ಹಾಗೂ ಒಟ್ಟಾರೆಯಾಗಿ ಎಂಟನೇ ಆಟಗಾರ ಎಂಬ ಹೆಗ್ಗಳಿಕೆಗೆ ಈ ಬಲಗೈ ಬ್ಯಾಟರ್ ಪಾತ್ರರಾದರು.

ಅಭಿಷೇಕ್‌ ಶರ್ಮಾ ದಾಖಲೆ ಮುರಿದ ಪಾಕ್‌ ನಾಯಕ ಫರ್ಹಾನ್

Sahibzada Farhan and Abishek Sharma -

Abhilash BC
Abhilash BC Oct 14, 2026 12:56 PM

ರಾವಲ್ಪಿಂಡಿ, ಅ.14: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ (T20I) ಸರಣಿಯಲ್ಲಿ ಸಾಹಿಬ್‌ಜಾದಾ ಫರ್ಹಾನ್ ಪಾಕಿಸ್ತಾನ ತಂಡವನ್ನು ಮುನ್ನಡೆಸಿದರು ಮತ್ತು ತಂಡವು 2-1 ಅಂತರದಲ್ಲಿ ಸರಣಿ ಗೆಲ್ಲುವಲ್ಲಿ ನೆರವಾದರು. ಸರಣಿಯಲ್ಲಿ ಅದ್ಬುತ ಬ್ಯಾಟಿಂಗ್‌ ನಡೆಸಿದ ಅವರು ಭಾರತ ಅಭಿಷೇಕ್‌ ಶರ್ಮಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ.

ಸರಣಿಯ ಆರಂಭಿಕ ಪಂದ್ಯದಲ್ಲಿ 53 ಎಸೆತಗಳಲ್ಲಿ 89 ರನ್ ಗಳಿಸಿದ ಫರ್ಹಾನ್, ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 73 ಹಾಗೂ 76 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಪಾಕಿಸ್ತಾನದ ಪೂರ್ಣಕಾಲಿಕ ಟಿ20ಐ (T20I) ನಾಯಕರಾಗಿ ತಮ್ಮ ಚೊಚ್ಚಲ ಸರಣಿಯನ್ನು ಒಟ್ಟು 238 ರನ್‌ಗಳೊಂದಿಗೆ ಪೂರ್ಣಗೊಳಿಸಿದ ಫರ್ಹಾನ್, ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಪೂರ್ಣ-ಸದಸ್ಯ ರಾಷ್ಟ್ರವೊಂದರ ಆಟಗಾರನೊಬ್ಬ ಗಳಿಸಿದ ಗರಿಷ್ಠ ರನ್‌ಗಳ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಮುರಿಯಲು ಇದು ನೆರವಾಯಿತು.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಮೊದಲ ಆಯ್ಕೆಯ ಆರಂಭಿಕ ಬ್ಯಾಟರ್ ಆಗಿರುವ ಅಭಿಷೇಕ್, ಕಳೆದ ತಿಂಗಳು ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಮೂರು ಪಂದ್ಯಗಳನ್ನು ಆಡಿ ಒಟ್ಟು 229 ರನ್ ಗಳಿಸಿದ್ದರು.

ಭಾರತ-ವೆಸ್ಟ್ ಇಂಡೀಸ್ ಟಿ20ಐ ಪಂದ್ಯದ ಉಚಿತ ಪಾಸ್‌ಗಳು 6 ಸಾವಿರ ರೂ.ಗೆ ಮಾರಾಟ; ನಾಲ್ವರ ಬಂಧನ

ಮೂರು ಪಂದ್ಯಗಳ T20I ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮೊಹಮ್ಮದ್ ಇಹ್ಸಾನ್ ಅವರ ಹೆಸರಿನಲ್ಲಿದೆ. ಇಹ್ಸಾನ್ 2025ರ ಡಿಸೆಂಬರ್‌ನಲ್ಲಿ ಕ್ರೊಯೇಷಿಯಾ ವಿರುದ್ಧ ಮೂರು ಪಂದ್ಯಗಳನ್ನು ಆಡಿ 283 ರನ್ ಗಳಿಸಿದ್ದರು. ಇವರ ನಂತರದ ಸ್ಥಾನದಲ್ಲಿ ಆಸ್ಟ್ರಿಯಾದ ಕರಣ್‌ಬೀರ್ ಸಿಂಗ್ ಇದ್ದಾರೆ. ಇವರು ಈ ವರ್ಷದ ಆರಂಭದಲ್ಲಿ ಹಂಗೇರಿ ವಿರುದ್ಧದ ಮೂರು T20I ಪಂದ್ಯಗಳಲ್ಲಿ 260 ರನ್ ಗಳಿಸಿದ್ದರು.

ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಫರ್ಹಾನ್ ಗಳಿಸಿದ ಮೂರು ಅರ್ಧಶತಕಗಳು, ದ್ವಿಪಕ್ಷೀಯ ಟಿ20 ಅಂತರರಾಷ್ಟ್ರೀಯ (T20I) ಸರಣಿಯ ಮೂರೂ ಪಂದ್ಯಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಪಾಕಿಸ್ತಾನಿ ಹಾಗೂ ಒಟ್ಟಾರೆಯಾಗಿ ಎಂಟನೇ ಆಟಗಾರ ಎಂಬ ಹೆಗ್ಗಳಿಕೆಗೆ ಈ ಬಲಗೈ ಬ್ಯಾಟರ್ ಪಾತ್ರರಾದರು.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಟಿ20 ಅಂತರರಾಷ್ಟ್ರೀಯ ಸರಣಿಯ ಮೂರೂ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರರಾಗಿದ್ದಾರೆ. ಅವರು 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರು. ಕೋಹ್ಲಿ ನಂತರ, ಕಾಲಿನ್ ಮನ್ರೋ, ಡೇವಿಡ್ ವಾರ್ನರ್, ನಿಕೋಲಸ್ ಪೂರನ್, ಶ್ರೇಯಸ್ ಅಯ್ಯರ್, ರೀಜಾ ಹೆಂಡ್ರಿಕ್ಸ್ ಮತ್ತು ಇಬ್ರಾಹಿಂ ಜದ್ರಾನ್ ಈ ಸಾಧನೆಯನ್ನು ಮಾಡಿದರು.