ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹುಟ್ಟುಹಬ್ಬದಂದು ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಸೇದಿಕುಲ್ಲಾ ಅಟಲ್

Sediqullah Atal: ವಿರಾಟ್ ಕೊಹ್ಲಿ ತಮ್ಮ 35 ನೇ ಹುಟ್ಟುಹಬ್ಬದಂದು ಭಾರತ ಪರ ಏಕದಿನ ಶತಕ ಗಳಿಸಿದರು. ನವೆಂಬರ್ 5, 2023 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 121 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ್ದರು.

ಹುಟ್ಟುಹಬ್ಬದಂದು ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಸೇದಿಕುಲ್ಲಾ ಅಟಲ್

Sediqullah Atal -

Abhilash BC
Abhilash BC Aug 13, 2026 11:51 AM

ಬೆಲ್‌ಫಾಸ್ಟ್‌, ಆ.13: ಅಫ್ಘಾನಿಸ್ತಾದ ಎಡಗೈ ಬ್ಯಾಟರ್ ಸೇದಿಕುಲ್ಲಾ ಅಟಲ್ ತಮ್ಮ 25ನೇ ಹುಟ್ಟುಹಬ್ಬದ ದಿನದಂದು ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಬುಧವಾರ ರಾತ್ರಿ ನಡೆದಿದ್ದ ಐರ್ಲೆಂಡ್‌ ವಿರುದ್ಧದ ನಾಲ್ಕನೇ ದಿನದ ಪಂದ್ಯದಲ್ಲಿ 143ರನ್‌ ಬಾರಿಸುವ ಮೂಲಕ ಜನ್ಮದಿನದಂದು ಅತ್ಯಧಿಕ ಏಕದಿನ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್‌ ಎನಿಸಿದರು.

ಇದಕ್ಕೂ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ಹುಟ್ಟುಹಬ್ಬದ ದಿನದಂದು ಅತ್ಯಧಿಕ ರನ್‌ ಬಾರಿಸಿದ ದಾಖಲೆ ನ್ಯೂಜಿಲ್ಯಾಂಡ್‌ನ ಟಾಮ್ ಲ್ಯಾಥಮ್ ಹೆಸರಿನಲ್ಲಿತ್ತು. ಲ್ಯಾಥಮ್ ತಮ್ಮ 30ನೇ ಹುಟ್ಟುಹಬ್ಬದಂದು (ಏಪ್ರಿಲ್ 2, 2022) ಹ್ಯಾಮಿಲ್ಟನ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 123 ಎಸೆತಗಳಲ್ಲಿ ಅಜೇಯ 140 ರನ್ ಗಳಿಸಿದ್ದರು.

ಟೀಮ್‌ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಈ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್‌ ತಮ್ಮ 25ನೇ ಹುಟ್ಟುಹಬ್ಬದಂದು 131 ಎಸೆತಗಳಲ್ಲಿ 134 ರನ್ ಗಳಿಸಿದ್ದರು. ಏಪ್ರಿಲ್ 24, 1998 ರಂದು ಶಾರ್ಜಾದಲ್ಲಿ ನಡೆದಿದ್ದ ಕೋಕಾ-ಕೋಲಾ ಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್‌ ಈ ಸಾಧನೆ ಮಾಡಿದ್ದರು.

ಜನ್ಮದಿನದಂದು ಏಕದಿನ ಪಂದ್ಯದಲ್ಲಿ ಹೆಚ್ಚು ರನ್‌

ಸೇದಿಕುಲ್ಲಾ ಅಟಲ್-143

ಟಾಮ್ ಲ್ಯಾಥಮ್-140*

ಸಚಿನ್‌ ತೆಂಡೂಲ್ಕರ್‌-134

ಹುಟ್ಟುಹಬ್ಬದಂದು ಏಕದಿನ ಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಮಾಜಿ ಭಾರತೀಯ ಆಟಗಾರ ವಿನೋದ್ ಕಾಂಬ್ಳಿ ಹೆಸರಿನಲ್ಲಿದೆ. ಕಾಂಬ್ಳಿ ತಮ್ಮ 21ನೇ ಹುಟ್ಟುಹಬ್ಬದಂದು (ಜನವರಿ 18, 1993) ಜೈಪುರದಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 100 ರನ್ ಗಳಿಸಿದ್ದರು.

ವಿರಾಟ್ ಕೊಹ್ಲಿ ತಮ್ಮ 35 ನೇ ಹುಟ್ಟುಹಬ್ಬದಂದು ಭಾರತ ಪರ ಏಕದಿನ ಶತಕ ಗಳಿಸಿದರು. ನವೆಂಬರ್ 5, 2023 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 121 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ್ದರು.

ಹಾಕಿ ವಿಶ್ವಕಪ್: ಭಾರತದ ವೇಳಾಪಟ್ಟಿ, ನೇರಪ್ರಸಾರದ ವಿವರ

ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಟಲ್,120 ಎಸೆತಗಳಲ್ಲಿ 17 ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿ ಶತಕ ಪೂರ್ತಿಗೊಳಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಇಬ್ರಾಹಿಂ ಜದ್ರಾನ್ ಅವರೊಂದಿಗೆ ಎರಡನೇ ವಿಕೆಟ್‌ಗೆ 231 ರನ್‌ಗಳನ್ನು ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಇಬ್ರಾಹಿಂ ಜದ್ರಾನ್ ಕೂಡ ಶತಕ ಬಾರಿಸಿ ಮಿಂಚಿದರು. ಅವರು 118 ಎಸೆತಗಳಿಂದ 107 ರನ್‌ ಬಾರಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ತಾನ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 343 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಐರ್ಲೆಂಡ್‌ 48 ಓವರ್‌ಗಳಲ್ಲಿ 301 ರನ್‌ಗೆ ಸರ್ವಪತನ ಕಂಡಿತು. ಚೇಸಿಂಗ್‌ ವೇಳೆ ಐರ್ಲೆಂಡ್‌ ಪರ ಆಂಡ್ರ್ಯೂ ಬಾಲ್ಬಿರ್ನಿ(109) ಶತಕ ಬಾರಿಸಿದರೆ, ಕರ್ಟಿಸ್ ಕ್ಯಾಂಪರ್(84) ಅರ್ಧಶತಕ ಗಳಿಸಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಆಟ ವ್ಯರ್ಥವಾಯಿತು.