ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Danish Kaneria: ಅಫ್ರಿದಿ ಮತಾಂತರಕ್ಕೆ ಯತ್ನಿಸಿದ್ದರು; ಪಾಕ್‌ ಆಟಗಾರನ ಗಂಭೀರ ಆರೋಪ

ಇಂಗ್ಲೆಂಡ್‌ ಪ್ರವಾಸದಲ್ಲಿ ನಡೆದ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದ ಸಲುವಾಗಿ ಕನೇರಿಯಾಗೆ ಆಜೀವ ನಿಷೇಧ ಹೇರಲಾಗಿತ್ತು. 2000ರಿಂದ 2010ರವರೆಗೆ ಪಾಕ್ ತಂಡವನ್ನು ಪ್ರತಿನಿಧಿಸಿದ್ದ ಕನೇರಿಯಾ 62 ಟೆಸ್ಟ್ ನಲ್ಲಿ 261 ವಿಕೆಟ್ ಪಡೆದು ಪಾಕ್ ಪರ ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ.

ಅಫ್ರಿದಿ ಮತಾಂತರಕ್ಕೆ ಯತ್ನಿಸಿದ್ದರು; ಪಾಕ್‌ ಆಟಗಾರನ ಗಂಭೀರ ಆರೋಪ

Profile Abhilash BC Mar 13, 2025 1:27 PM

ವಾಷಿಂಗ್ಟನ್: ಹಿಂದೂ ಧರ್ಮೀಯ ಎಂಬ ಕಾರಣಕ್ಕೆ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದೆ ಎಂದು ಪಾಕಿಸ್ಥಾನದ ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ(Danish Kaneria) ಮತ್ತೆ ಪುನರುಚ್ಚರಿಸಿದ್ದಾರೆ. ಜತೆಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಯಲು ಅಮೆರಿಕಾ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಅಮೆರಿಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ಪಾಕಿಸ್ತಾನದ ಅಲ್ಪಸಂಖ್ಯಾತರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಾನೂ ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದೆ. ನಾನು ಹಿಂದೂ ಎಂಬ ಕಾರಣಕ್ಕೆ ನನ್ನ ವೃತ್ತಿಬದುಕನ್ನೇ ಕೊನೆಗೊಳಿಸಿದರು ಎಂದರು.

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಪ್ರತಿದಿನ ಲೆಕ್ಕವಿಲ್ಲದಷ್ಟು ಮತಾಂತರ, ಅಪಹರಣ, ಅತ್ಯಾಚಾರ, ಹತ್ಯೆ ಸೇರಿದಂತೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಈ ಅನ್ಯಾಯದ ವಿರುದ್ಧ ವಿಶ್ವಾದ್ಯಂತ ಇರುವ ಹಿಂದೂಗಳು ದನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗನಾಗಿ ಇತರೆ ಕ್ರಿಕೆಟಿಗರಿಗೆ ಸಿಗುತ್ತಿದ್ದ ಸ್ಥಾನಮಾನ, ಗೌರವ ನನಗೆ ಸಿಗಲಿಲ್ಲ. ಇದೇ ಕಾರಣಕ್ಕೆ ನಾನಿಂದು ಅಮೆರಿಕಾದಲ್ಲಿದ್ದೇನೆ ಎಂದಿದ್ದಾರೆ.

'ನಾನು ಪಾಕಿಸ್ತಾನ ತಂಡದಲ್ಲಿ ಆಡುತ್ತಿದ್ದಾಗ ಶಾಹಿದ್‌ ಅಫ್ರಿದಿ(Shahid Afridi) ನನಗೆ ಬಹಳಾ ಕಾಟ ಕೊಟ್ಟಿದ್ದರು. ನನ್ನ ಧರ್ಮದ ಹಿನ್ನೆಲೆ ಗೊತ್ತಿದ್ದರೂ ಕೂಡ ನನ್ನನ್ನು ಬೆಳಗ್ಗೆ ನಮಾಝ್‌ ಮಾಡಲು ಬರಬೇಕು ಎಂದು ಒತ್ತಡ ಹೇರುತ್ತಿದ್ದರು. ಹಲವು ಬಾರಿ ಬಲವಂತವಾಗಿ ಮತಾಂತರ ಮಾಡಲು ಕೂಡ ಪ್ರತ್ನಿಸಿದ್ದರು' ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ Pak train Hijack: ಪಾಕ್‌ ರೈಲು ಹೈಜಾಕ್-‌ ಮತ್ತೊಂದು ಶಾಕಿಂಗ್‌ ವಿಡಿಯೊ ರಿಲೀಸ್‌ ಮಾಡಿದ ಬಂಡುಕೋರರು

'ಒಂದು ವೇಳೆ ನಾನು ಅಫ್ರಿದಿ ಒತ್ತಡಕ್ಕೆ ಮಣಿದು ನನ್ನ ಧರ್ಮ ಬದಲಾಯಿಸಿಕೊಂಡಿದ್ದರೆ, ಖಂಡಿತವಾಗಿ ಪಾಕಿಸ್ತಾನ ತಂಡದ ನಾಯಕನಾಗುವ ಅವಕಾಶ ಕೂಡ ನನಗೆ ಲಭಿಸುತ್ತಿತ್ತು. ಕ್ರಿಕೆಟ್‌ನಲ್ಲಿ ಮತ್ತಷ್ಟು ದಾಖಲೆಗಳನ್ನು ಬರೆಯುತ್ತಿದ್ದೆ' ಎಂದರು.



ಇಂಗ್ಲೆಂಡ್‌ ಪ್ರವಾಸದಲ್ಲಿ ನಡೆದ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದ ಸಲುವಾಗಿ ಕನೇರಿಯಾಗೆ ಆಜೀವ ನಿಷೇಧ ಹೇರಲಾಗಿತ್ತು. 2000ರಿಂದ 2010ರವರೆಗೆ ಪಾಕ್ ತಂಡವನ್ನು ಪ್ರತಿನಿಧಿಸಿದ್ದ ಕನೇರಿಯಾ 62 ಟೆಸ್ಟ್ ನಲ್ಲಿ 261 ವಿಕೆಟ್ ಪಡೆದು ಪಾಕ್ ಪರ ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ.