ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೂರ್ಯವಂಶಿಗೆ ಸಿನಿಮಾದಲ್ಲಿ ಅವಕಾಶ ನೀಡಲು ಮುಂದಾದ ಖ್ಯಾತ ಬಾಲಿವುಡ್‌ ನಿರ್ದೇಶಕ

Vaibhav Suryavanshi: ಟೂರ್ನಿಯುದ್ಧಕ್ಕೂ ಸೂರ್ಯಂಶಿ ಅಮೋಘ ಪ್ರದರ್ಶನ ನೀಡಿದ್ದರು. ಅವರು ನೀಡಿದ ಅದ್ಭುತ ಪ್ರದರ್ಶನಕ್ಕಾಗಿ, ಅವರಿಗೆ ‘ಸರಣಿಶ್ರೇಷ್ಠ ಆಟಗಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಡಿದ 16 ಇನಿಂಗ್ಸ್‌ಗಳಿಂದ 1 ಶತಕ ಮತ್ತು 5 ಅರ್ಧಶತಕ ಸಹಿತ, 49.50 ಸರಾಸರಿಯಲ್ಲಿ 776 ರನ್ ಗಳಿಸಿದ್ದಾರೆ. ಆ ಮೂಲಕ, ಐಪಿಎಲ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರನಿಗೆ ನೀಡುವ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು.

ಸೂರ್ಯವಂಶಿಗೆ ಸಿನಿಮಾ ಆಫರ್‌; ಬಾಲಿವುಡ್‌ ನಿರ್ದೇಶಕನ ಟ್ವೀಟ್‌ ವೈರಲ್‌

Shekhar Kapur -

Abhilash BC
Abhilash BC Jun 1, 2026 2:26 PM

ಮುಂಬಯಿ, ಜೂ.1: ತನ್ನ ಸ್ಫೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್‌ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸುದು ಮಾಡುತ್ತಿರುವ 15ರ ಪೋರ ವೈಭವ್‌ ಸೂರ್ಯವಂಶಿ(Vaibhav Suryavanshi)ಗೆ ಬಾಲಿವುಡ್‌ನಿಂದ ಸಿನೆಮಾ ಆಫರ್‌ ಒಂದು ಬಂದಿದೆ. ಬಾಲಿವುಡ್ ಖ್ಯಾತ ನಿರ್ದೇಶಕ ಶೇಖರ್ ಕಪೂರ್(Shekhar Kapur) ಟ್ವೀಟ್ ಮಾಡಿ ಈ ಆಫರ್‌ ನೀಡಿದ್ದಾರೆ.

'ಮಿ. ಇಂಡಿಯಾ', 'ಬಂಡಿತ್ ಕ್ವೀನ್' ರೀತಿಯ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟ ಶೇಖರ್ ಸದ್ಯ ವೈಭವ್ ಬಗ್ಗೆ ಕಾಮೆಂಟ್ ಮಾಡಿರುವುದು ಗಮನ ಸೆಳೆದಿದೆ. 'ಸೂರ್ಯವಂಶಿ ಅಷ್ಟೊಂದು ಸೆನ್ಸೇಷನಲ್ ಕ್ರಿಕೆಟಿಗನಲ್ಲದಿದ್ದರೆ.. ನಾನು ಅವನನ್ನು ಮಾಸೂಮ್ ಚಿತ್ರದಲ್ಲಿ ನಟಿಸುತ್ತಿದ್ದೆ" ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಭಾರೀ ವೈರಲ್‌ ಆಗಿದ್ದು ನೆಟ್ಟಿಗರು ಹೌದು, ವೈಭವ್ ಬಹಳ ಕ್ಯೂಟ್, ಅಮಾಯಕ. ನೀವು ಅವನನ್ನು ಸಿನಿಮಾ ಚಿತ್ರಕ್ಕೆ ಆಯ್ಕೆ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.

"ಈಗಲೂ ಕೂಡ ನೀವು ಅವನನ್ನು ಸಿನಿಮಾ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಬಹುದು, ಆದರೆ ಸಿನೆಮಾದಲ್ಲಿ ಕೊಂಚ ಕ್ರಿಕೆಟ್ ಅಂಶಗಳನ್ನು ಚಿತ್ರಕ್ಕೆ ಸೇರಿಸಿದರೆ ಇನ್ನು ಚೆನ್ನಾಗಿರುತ್ತೆ" ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಟಾಟಾ ಸಫಾರಿ ಗೆದ್ದ ಸೂರ್ಯವಂಶಿ; ಕಾರು ಚಲಾಯಿಸಲು ಇನ್ನೂ ಮೂರು ವರ್ಷ ಕಾಯಬೇಕು

ಜಸ್‌ಪ್ರೀತ್‌ ಬುಮ್ರಾ, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಜಲ್‌ವುಡ್‌ ಮುಂದೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಜಾಸ್‌ ಬಟ್ಲರ್‌, ಟ್ರಾವಿಸ್‌ ಹೆಡ್‌ ಸೇರಿ ವಿಶ್ವದ ಅನೇಕ ಅಗ್ರ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಾರೆ. ಆದರೆ 15ರ ಪೋರ ಸೂರ್ಯವಂಶಿ ಈ ಬೌಲರ್‌ಗಳಿಗೆ ಮೊದಲ ಎಸೆತದಲ್ಲೇ ಸಿಕ್ಸರ್‌ಗಳ ರುಚಿ ತೋರಿಸಿದ್ದಾರೆ. ಮಾತ್ರವಲ್ಲದೆ ಹಾಲಿ ಆವೃತ್ತಿಯಲ್ಲಿ ಈ ದಿಗ್ಗಜ ಬೌಲರ್‌ಗಳು ಹೆಚ್ಚಾಗಿ ದಂಡಿಸಿಕೊಂಡದ್ದು ಕೂಡ ಸೂರ್ಯವಂಶಿಯ ಕೈಯಲ್ಲೇ.



ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫೈಯರ್‌–2ರಲ್ಲಿ ಹೊರನಡೆದರೂ ಟೂರ್ನಿಯುದ್ಧಕ್ಕೂ ಸೂರ್ಯಂಶಿ ಅಮೋಘ ಪ್ರದರ್ಶನ ನೀಡಿದ್ದರು. ಅವರು ನೀಡಿದ ಅದ್ಭುತ ಪ್ರದರ್ಶನಕ್ಕಾಗಿ, ಅವರಿಗೆ ‘ಸರಣಿಶ್ರೇಷ್ಠ ಆಟಗಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಡಿದ 16 ಇನಿಂಗ್ಸ್‌ಗಳಿಂದ 1 ಶತಕ ಮತ್ತು 5 ಅರ್ಧಶತಕ ಸಹಿತ, 49.50 ಸರಾಸರಿಯಲ್ಲಿ 776 ರನ್ ಗಳಿಸಿದ್ದಾರೆ. ಆ ಮೂಲಕ, ಐಪಿಎಲ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರನಿಗೆ ನೀಡುವ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು.

ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರನಿಗೆ ನೀಡುವ ‘ಏಂಜಲ್ ಒನ್ ಸೂಪರ್ ಸಿಕ್ಸರ್ ಆಫ್ ದ ಸೀಸನ್’ ಪ್ರಶಸ್ತಿಯನ್ನು ಸೂರ್ಯವಂಶಿ ಅವರು ತಮ್ಮದಾಗಿಸಿಕೊಂಡಿದ್ದಾರೆ. ಅವರು, 16 ಇನಿಂಗ್ಸ್‌ಗಳಲ್ಲಿ 72 ಸಿಕ್ಸರ್ ಸಿಡಿಸಿದ್ದಾರೆ. ಫೈನಲ್‌ ಪಂದ್ಯಕ್ಕೂ ಹಾಜರಾಗಿದ್ದ ಸೂರ್ಯವಂಶಿ ಪಂದ್ಯದ ಪ್ರಮುಖ ಹೈಲೆಟ್ಸ್‌ಗಳಲ್ಲಿ ಒಂದಾಗಿದ್ದರು. ಐಸಿಸಿ ಅಧ್ಯಕ್ಷ ಜಯ್‌ ಶಾ ಜತೆ ವಿಐಪಿ ಸೀಟ್‌ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದರು.