ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubman Gill: ಶೀಘ್ರದಲ್ಲೇ ಶುಭಮನ್‌ ಗಿಲ್‌ಗೆ ಏಕದಿನ ನಾಯಕತ್ವ!

ರೋಹಿತ್‌ ಆಸೀಸ್‌ ಸರಣಿಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಸರಣಿಯಲ್ಲಿ ಭಾರತ ‘ಎ’ ಪರ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಸೀಸ್‌ನಲ್ಲಿ ಭಾರತ ತಂಡ ಅಕ್ಟೋಬರ್‌ 19ರಿಂದ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಎ ತಂಡಗಳ ಸರಣಿ ಸೆ.30, ಅ. 3 ಮತ್ತು 5ರಂದು ಕಾನ್ಪುರದ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆಯಲಿದೆ.

ಶೀಘ್ರದಲ್ಲೇ ಶುಭಮನ್‌ ಗಿಲ್‌ಗೆ ಏಕದಿನ ನಾಯಕತ್ವ!

-

Abhilash BC Abhilash BC Sep 7, 2025 3:13 PM

ಮುಂಬಯಿ: ಶುಭಮನ್ ಗಿಲ್ ಅವರನ್ನು ಭಾರತದ ಟಿ20 ಉಪನಾಯಕನನ್ನಾಗಿ ನೇಮಿಸಿದಾಗಿನಿಂದ ಭಾರತೀಯ ಕ್ರಿಕೆಟ್ ವಲಯದಲ್ಲಿ ಭವಿಷ್ಯದ ಏಕದಿನ ಕ್ರಿಕೆಟ್‌ ತಂಡದ ನಾಯಕನ ಬಗ್ಗೆ ಚರ್ಚೆ ಆರಂಭವಾಗಿದೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ದೀರ್ಘಾವಧಿಯ ಭವಿಷ್ಯದ ಬಗ್ಗೆ ಕಳವಳಗಳು ಹೆಚ್ಚುತ್ತಿರುವುದರಿಂದ, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಪ್ರವಾಸವು ಹಿಟ್‌ಮ್ಯಾನ್‌ನ ಕೊನೆಯ ಪಂದ್ಯವೆಂದು ಪರಿಗಣಿಸಲ್ಪಡುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಏಕದಿನದ ನಾಯಕತ್ವವನ್ನೂ ಗಿಲ್‌ಗೆ ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಇಂಗ್ಲೆಂಡ್‌ ಸರಣಿಯಲ್ಲಿ ಗಿಲ್‌ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಗಮನ ಸೆಳೆದಿದ್ದರು. ಬ್ಯಾಟಿಂಗ್‌ ಮಾತ್ರವಲ್ಲದೆ ನಾಯಕತ್ವದಲ್ಲಿಯೂ ಅವರು ಸೈ ಎನಿಸಿಕೊಂಡಿದ್ದರು. ಏಷ್ಯಾಕಪ್‌ ಟಿ20ಯಲ್ಲಿ ಗಿಲ್‌ ಉಪನಾಯಕನನ್ನಾಗಿ ನೇಮಿಸಲಾಗಿದೆ.

ವರದಿಗಳ ಪ್ರಕಾರ, ಆಸೀಸ್‌ ಸರಣಿಯೇ ಕೊಹ್ಲಿ ಹಾಗೂ ರೋಹಿತ್‌ಗೆ ವಿದಾಯದ ಸರಣಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಅವರು ಆಸೀಸ್‌ ಸರಣಿ ಬಳಿಕ ಏಕದಿನದಲ್ಲಿ ಮುಂದುವರಿಯಲು ನಿರ್ಧರಿಸಿದರೂ, ಬಿಸಿಸಿಐ ಅವರನ್ನು 2027ರ ಏಕದಿನ ವಿಶ್ವಕಪ್‌ವರೆಗೂ ಮುಂದುವರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇದನ್ನೂ ಓದಿ Rohit Sharma: ಗಣೇಶ ಮಂದಿರದಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ರೋಹಿತ್‌