ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Smriti Mandhana: ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಸ್ಮೃತಿ ಮಂಧಾನ

ವಿರಾಟ್ ಕೊಹ್ಲಿ 12 ವರ್ಷಗಳ ಹಿಂದೆ, ಅಕ್ಟೋಬರ್ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಮಂಧಾನ 50 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ತಮ್ಮ ಹೆಸರಿಗೆ ಬರೆದರು. ಪಂದ್ಯದಲ್ಲಿ ಒಟ್ಟು 63 ಎಸೆತ ಎದುರಿಸಿದ ಮಂಧಾನ 5 ಸಿಕ್ಸರ್‌ಗಳು ಮತ್ತು 17 ಬೌಂಡರಿ ನೆರವಿನಿಂದ 125 ರನ್ ಗಳಿಸಿದರು.

ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಸ್ಮೃತಿ ಮಂಧಾನ

-

Abhilash BC Abhilash BC Sep 21, 2025 11:09 AM

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ(AUSW vs INDW ) ಪಂದ್ಯದಲ್ಲಿ ದಿಟ್ಟ ಹೋರಾಟ ನಡೆಸಿದರೂ 43 ರನ್‌ ಅಂತರದಿಂದ ಭಾರತ ಮಹಿಳಾ ತಂಡ ಸೋಲು ಕಂಡಿತ್ತು. ಆದರೆ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಶತಕ ಬಾರಿಸಿ ಮಿಂಚಿದ್ದ ಸ್ಮೃತಿ ಮಂಧಾನ(Smriti Mandhana) ಅವರು ವಿರಾಟ್‌ ಕೊಹ್ಲಿ(Virat Kohli)ಯ ದಾಖಲೆಯೊಂದನ್ನು ಮುರಿದಿದ್ದಾರೆ.

412 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್‌ ಮಂದಾನ ಬಿರುಸಿನ ಬ್ಯಾಟಿಂಗ್‌ ಮೂಲಕ ಉತ್ತಮ ಆರಂಭ ಒದಗಿಸಿದರು. ಕೇವಲ 50 ಎಸೆತಗಳಲ್ಲಿ ಶತಕದ ಗಡಿ ದಾಟುವ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೇ ಬ್ಯಾಟರ್ ಎನಿಸಿದರು. ಇದು ಮಾತ್ರವಲ್ಲದೆ ಆಸ್ಟ್ರೇಲಿಯಾ ವಿರುದ್ಧ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಕ್ರಿಕೆಟರ್‌ ಎನಿಸಿದರು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿತ್ತು.

ವಿರಾಟ್ ಕೊಹ್ಲಿ 12 ವರ್ಷಗಳ ಹಿಂದೆ, ಅಕ್ಟೋಬರ್ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಮಂಧಾನ 50 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ತಮ್ಮ ಹೆಸರಿಗೆ ಬರೆದರು. ಪಂದ್ಯದಲ್ಲಿ ಒಟ್ಟು 63 ಎಸೆತ ಎದುರಿಸಿದ ಮಂಧಾನ 5 ಸಿಕ್ಸರ್‌ಗಳು ಮತ್ತು 17 ಬೌಂಡರಿ ನೆರವಿನಿಂದ 125 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: 47.5 ಓವರ್‌ಗಳಲ್ಲಿ 412 (ಅಲಿಸಾ ಹೀಲಿ 30, ಜಾರ್ಜಿಯಾ ವೊಲ್ 81, ಎಲಿಸ್ ಪೆರಿ 68, ಬೆತ್ ಮೂನಿ 138, ಆ್ಯಷ್ಲೆ ಗಾರ್ಡನರ್ 39, ಜಾರ್ಜಿಯಾ ವೆರ್ಹಾಮ್ 16, ರೇಣುಕಾ ಸಿಂಗ್ 79ಕ್ಕೆ2, ಅರುಂಧತಿ ರೆಡ್ಡಿ 86ಕ್ಕೆ3, ದೀಪ್ತಿ ಶರ್ಮಾ 75ಕ್ಕೆ2).

ಭಾರತ: 47 ಓವರ್‌ಗಳಲ್ಲಿ 369 (ಸ್ಮೃತಿ ಮಂದಾನ 125, ಹರ್ಮನ್‌ಪ್ರೀತ್ ಕೌರ್ 52, ದೀಪ್ತಿ ಶರ್ಮಾ 72, ಸ್ನೇಹ ರಾಣಾ 35, ಮೇಗನ್ ಶುಟ್ 53ಕ್ಕೆ2, ಕಿಮ್ ಗಾರ್ಥ್ 69ಕ್ಕೆ3).

ಇದನ್ನೂ ಓದಿ IND vs PAK: ಪಾಕ್‌ ವಿರೋಧದ ಮಧ್ಯೆಯೂ ಸೂಪರ್ 4 ಪಂದ್ಯಕ್ಕೆ ಪೈಕ್ರಾಫ್ಟ್ ಮ್ಯಾಚ್ ರೆಫರಿ