ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ (PM Midi) ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜಿಎಸ್‌ಟಿ 2.0 (GST) ಸುಧಾರಣೆಗಳು ಜಾರಿಗೆ ಬರುವ ಒಂದು ದಿನ ಮೊದಲೇ ಮೋದಿ ಅವರು ಮಾತನಾಡಲಿದ್ದಾರೆ ಎಂದು ಊಹಿಸಲಾಗಿದೆ.

ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

-

Vishakha Bhat Vishakha Bhat Sep 21, 2025 12:11 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜಿಎಸ್‌ಟಿ 2.0 ಸುಧಾರಣೆಗಳು ಜಾರಿಗೆ ಬರುವ ಒಂದು ದಿನ ಮೊದಲೇ ಮೋದಿ ಅವರು ಮಾತನಾಡಲಿದ್ದಾರೆ. ಹೊಸ ಜಿಎಸ್‌ಟಿ (GST) ದರಗಳು ಸೆಪ್ಟೆಂಬರ್ 22, ಸೋಮವಾರದಿಂದ ಜಾರಿಗೆ ಬರಲಿದ್ದು, ಇದರಿಂದಾಗಿ ಹಲವಾರು ಗ್ರಾಹಕ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಲಿವೆ. ಈ ಕುರಿತು ಮೋದಿ ಮಾತನಾಡುವ ಸಾಧ್ಯತೆ ಇದೆ.

ಇಂದು ಮುಂಜಾನೆ, ಪ್ರಧಾನಿಯವರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ ನಲ್ಲಿ ಮಹಾಲಯಕ್ಕೆ ಶುಭಾಶಯ ಕೋರಿದರು. "ನಿಮ್ಮೆಲ್ಲರಿಗೂ ಶುಭೋ ಮಹಾಲಯ ಶುಭಾಶಯಗಳು! ದುರ್ಗಾ ಪೂಜೆಯ ಪವಿತ್ರ ದಿನಗಳು ಸಮೀಪಿಸುತ್ತಿದ್ದಂತೆ, ನಮ್ಮ ಜೀವನವು ಬೆಳಕು ಮತ್ತು ಉದ್ದೇಶದಿಂದ ತುಂಬಿರಲಿ. ಮಾತೆ ದುರ್ಗಾದೇವಿಯ ದೈವಿಕ ಆಶೀರ್ವಾದಗಳು ಅಚಲ ಶಕ್ತಿ, ಶಾಶ್ವತ ಸಂತೋಷ ಮತ್ತು ಅದ್ಭುತ ಆರೋಗ್ಯವನ್ನು ತರಲಿ" ಎಂದು ಪ್ರಧಾನಿ ಮೋದಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನಿನ್ನೆ ಗುಜರಾತ್‌ನಲ್ಲಿ ಜಗತ್ತಿನಲ್ಲಿ ನಮಗೆ ಯಾವುದೇ ಪ್ರಮುಖ ಶತ್ರುವಿಲ್ಲ. ನಮ್ಮ ದೊಡ್ಡ ಶತ್ರು ಏನೆಂದರೆ ಬೇರೆ ದೇಶಗಳನ್ನು ನಾವು ಅವಲಂಬಿಸುವುದು. ಇದು ನಮ್ಮ ದೊಡ್ಡ ಶತ್ರು, ಮತ್ತು ನಾವು ಒಟ್ಟಾಗಿ ಭಾರತದ ಈ ಶತ್ರುವನ್ನು, ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದು ಹೇಳಿದ್ದರು. ಟ್ರಂಪ್‌ ಅವರ H-1B ವೀಸಾ ಶುಲ್ಕ ಏರಿಕೆ ಆದೇಶ ಬಳಿಕ ಮೋದಿಯಿಂದ ಈ ಹೇಳಿಕೆ ಬಂದಿತ್ತು. ವಿದೇಶಿ ಅವಲಂಬನೆ ಹೆಚ್ಚಾದಷ್ಟೂ ದೇಶದ ವೈಫಲ್ಯ ಹೆಚ್ಚಾಗುತ್ತದೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಆತ್ಮನಿರ್ಭರವಾಗಬೇಕು. ನಾವು ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. 1.4 ಶತಕೋಟಿ ದೇಶವಾಸಿಗಳ ಭವಿಷ್ಯವನ್ನು ನಾವು ಇತರರ ಕೈಗೆ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Raghav Sharma Nidle Column: ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

ನೂರು ದುಃಖಗಳಿಗೆ ಒಂದೇ ಒಂದು ಔಷಧಿ ಇದೆ, ಮತ್ತು ಅದು ಸ್ವಾವಲಂಬಿ ಭಾರತ. ಜಗತ್ತಿಗೆ ಭಾರತ ಏನೆಂದು ತೋರಿಸುವ ಸಮಯ ಬಂದಿದೆ. ನಾವು ದೃಢ ಸಂಕಲ್ಪ ಮಾಡಲೇಬೇಕು ಎಂದು ಮೋದಿ ಯುವ ಪೀಳಿಗೆಗೆ ಕಿವಿ ಮಾತು ಹೇಳಿದ್ದಾರೆ. ಇಂದಿನ ಭಾಷಣದಲ್ಲಿಯೂ ಆ ಕುರಿತು ಮಾತನಾಡುವ ಸಾಧ್ಯತೆ ಇದೆ.