ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವರ್ಷದ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ

Indian sportswoman of the year: 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಕ್ಕಾಗಿ ಪ್ರೀತಿ ಪಾಲ್ ಅವರನ್ನು ವರ್ಷದ ಪ್ಯಾರಾ-ಸ್ಪೋರ್ಟ್ಸ್‌ವುಮನ್ ಎಂದು ಹೆಸರಿಸಲಾಯಿತು. ಶೂಟರ್ ಅಂಜಲಿ ಭಾಗವತ್ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

Smriti Mandhana

ಮುಂಬಯಿ, ಫೆ.17: ಸ್ಮೃತಿ ಮಂಧಾನ(Smriti Mandhana) ಅವರ ಕ್ರಿಕೆಟ್ ಜೀವನದ ಅವಿಸ್ಮರಣೀಯ ವರ್ಷವು ಮತ್ತೊಂದು ಪ್ರಮುಖ ಗೌರವಕ್ಕೆ ಪಾತ್ರವಾಗಿದೆ. ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್‌ವುಮನ್ ಆಫ್ ದಿ ಇಯರ್(Smriti Mandhana) ಪ್ರಶಸ್ತಿಗಳಲ್ಲಿ ಅವರನ್ನು ವರ್ಷದ ಭಾರತೀಯ ಕ್ರೀಡಾಪಟು ಎಂದು ಹೆಸರಿಸಲಾಗಿದೆ. ಭಾರತದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎರಡನೇ ಬಾರಿಗೆ ಡಬ್ಲ್ಯೂಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ ನಂತರ ಅವರು ಈ ಮನ್ನಣೆಯನ್ನು ಗಳಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್, ಚೆಸ್ ತಾರೆ ದಿವ್ಯಾ ದೇಶಮುಖ್, ಶೂಟರ್ ಸುರುಚಿ ಸಿಂಗ್ ಮತ್ತು ಅಥ್ಲೀಟ್‌ ಜ್ಯೋತಿ ಯರ್ರಾಜಿ ಅವರನ್ನು ಹಿಂದಿಕ್ಕಿ ಸ್ಮೃತಿ ಈ ಗೌರವಕ್ಕೆ ಪಾತ್ರರಾದರು. 29 ವರ್ಷದ ಮಂಧಾನ, 2025 ರ ಐಸಿಸಿ ಮಹಿಳಾ ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ಭಾರತದ ಉಪನಾಯಕಿಯಾಗಿದ್ದರು. ಜತೆಗೆ ಟೂರ್ನಿಯಲ್ಲೇ ಅತ್ಯಧಿಕ (434) ರನ್‌ಗಳನ್ನು ಗಳಿಸಿದ ಆಟಗಾರ್ತಿಯಾಗಿದ್ದರು.

"ವರ್ಷದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ನನಗೆ ನೀಡಿದ್ದಕ್ಕಾಗಿ ಬಿಬಿಸಿಗೆ ಧನ್ಯವಾದಗಳು. 2025, ಮಹಿಳಾ ಕ್ರಿಕೆಟ್‌ಗೆ ವಿಶೇಷ ವರ್ಷವಾಗಿತ್ತು. ವಿಶೇಷವಾಗಿ ಭಾರತವು ಹಲವು ಪಂದ್ಯಗಳನ್ನು ಗೆಲ್ಲಲು ನಾನು ನೀಡಿದ ಕೊಡುಗೆ ಬಗ್ಗೆ ನನಗೆ ಸಂತೋಷವಾಗಿದೆ" ಎಂದು ಮಂಧಾನ ಹೇಳಿದರು.

ಟೆನಿಸ್ ದಂತಕಥೆ ಲಿಯಾಂಡರ್ ಪೇಸ್, ​​ಪ್ಯಾರಾಲಿಂಪಿಕ್ ತಾರೆ ದೀಪಾ ಮಲಿಕ್ ಮತ್ತು ಲಾಂಗ್-ಜಂಪ್ ಐಕಾನ್ ಅಂಜು ಬಾಬಿ ಜಾರ್ಜ್ ಅವರನ್ನು ಒಳಗೊಂಡ ಗ್ರ್ಯಾಂಡ್ ಜ್ಯೂರಿ ಈ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ. 20 ನೇ ವಯಸ್ಸಿನಲ್ಲಿ FIDE ಮಹಿಳಾ ವಿಶ್ವಕಪ್ ಗೆದ್ದ ದಿವ್ಯಾ ದೇಶಮುಖ್, ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದರು.

IND vs PAK: ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆದ ಭಾರತ

2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಕ್ಕಾಗಿ ಪ್ರೀತಿ ಪಾಲ್ ಅವರನ್ನು ವರ್ಷದ ಪ್ಯಾರಾ-ಸ್ಪೋರ್ಟ್ಸ್‌ವುಮನ್ ಎಂದು ಹೆಸರಿಸಲಾಯಿತು. ಶೂಟರ್ ಅಂಜಲಿ ಭಾಗವತ್ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಮಂಧಾನಾಗೆ ಸ್ಮರಣೀಯ ವರ್ಷ

ವೈಯಕ್ತಿಕ ಜೀವನದಲ್ಲಿ ಕಠಿಣ ಸವಾಲಿನ ಹೊರತಾಗಿಯೂ, ಮೈದಾನದಲ್ಲಿ, ಸ್ಮೃತಿ ಮಂಧಾನಾ ಹಲವು ವಿಜಯೋತ್ಸವದ ವರ್ಷವನ್ನು ಕಂಡರು. ಏಕದಿನ ವಿಶ್ವಕಪ್‌, ಡಬ್ಲ್ಯುಪಿಎಲ್‌ ಸೇರಿ ಹಲವು ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಜತೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹಲವಾರು ಕೊಡುಗೆಗಳನ್ನು ನೀಡಿದರು.

16ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅವರು, 17 ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರೊಂದಿಗೆ ಜಂಟಿ ದಾಖಲೆ ಹೊಂದಿದ್ದಾರೆ.