ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs PAK: ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆದ ಭಾರತ

T20 World Cup 2026: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಪಾಕ್ ತಂಡವು 18 ಓವರ್‌ಗಳಲ್ಲಿ 114 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪಾಕ್ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಉಸ್ಮಾನ್ ಖಾನ್ (44) ಹಾಗೂ ಕೊನೆಯಲ್ಲಿ ಶಹೀನ್ ಶಾ ಅಫ್ರಿದಿ (ಔಟಾಗದೇ 23) ಬಿಟ್ಟರೆ ಉಳಿದವರು ವಿಫಲರಾದರು.

ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆದ ಭಾರತ

pic credits afp/getty images -

Abhilash BC
Abhilash BC Feb 16, 2026 9:55 AM

ಕೊಲಂಬೊ, ಫೆ.16: ಬಹಿಷ್ಕಾರದ ಹೈಡ್ರಾಮಾ ಮಾಡಿದ್ದ ಪಾಕಿಸ್ತಾನ(IND vs PAK)ವನ್ನು ಹೀನಾಯವಾಗಿ ಸೋಲಿಸಿದ ಭಾರತ ತಂಡ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಭಾನುವಾರ ನಡೆದ ಟಿ20 ವಿಶ್ವಕಪ್‌(T20 World Cup 2026)ನ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ 61 ರನ್‌ ಅಂತರದ ಗೆಲವು ಸಾಧಿಸಿತು. ಇದು ಟಿ20ಯಲ್ಲಿ ಪಾಕ್‌ ವಿರುದ್ಧ ಭಾರತಕ್ಕೆ ಒಲಿದ ಅತಿ ಹೆಚ್ಚು ರನ್‌ ಅಂತರದ ಗೆಲುವು.

ಇದಕ್ಕೂ ಮುನ್ನ 11 ರನ್‌ ಅಂತರದ ಗೆಲವು ಸಾಧಿಸಿದ್ದೇ ದೊಡ್ಡ ಸಾಧನೆಯಾಗಿತ್ತು. 2012ರ ಆವೃತ್ತಿ ಟಿ20 ವಿಶ್ವಕಪ್‌ನಲ್ಲಿ ಈ ಗೆಲುವು ಒಲಿದಿತ್ತು. ಸಾರಸ್ಯವೆಂದರೆ ಈ ಪಂದ್ಯ ಕೂಡ ಕೊಲಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲೇ ದಾಖಲಾಗಿತ್ತು.

ಟಿ20ಐಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅತಿದೊಡ್ಡ ಗೆಲುವು

61 ರನ್‌- 2026

11 ರನ್‌- 2012

06 ರನ್‌- 2024

05 ರನ್‌-2007

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಪಾಕ್ ತಂಡವು 18 ಓವರ್‌ಗಳಲ್ಲಿ 114 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪಾಕ್ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಉಸ್ಮಾನ್ ಖಾನ್ (44) ಹಾಗೂ ಕೊನೆಯಲ್ಲಿ ಶಹೀನ್ ಶಾ ಅಫ್ರಿದಿ (ಔಟಾಗದೇ 23) ಬಿಟ್ಟರೆ ಉಳಿದವರು ವಿಫಲರಾದರು.

IND vs PAK: ಇಶಾನ್‌ ಕಿಶನ್‌ ಅಬ್ಬರ, ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತಕ್ಕೆ ಸೂಪರ್‌-8 ಟಿಕೆಟ್‌!

27 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಇಶಾನ್‌ 40 ಎಸೆತಕ್ಕೆ 77 ರನ್‌ ಗಳಿಸಿದರು. ಆ ಬಳಿಕ ತಿಲಕ್‌ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್‌ ಜವಾಬ್ದಾರಿಯುವ ಆಟದ ಮೂಲಕ ತಂಡವನ್ನು ಕಾಪಾಡಿದರು. ತಿಲಕ್‌ 24 ಎಸೆತಕ್ಕೆ 25, ಸೂರ್ಯಕುಮಾರ್‌ 29 ಎಸೆತಕ್ಕೆ 32 ರನ್‌ ಗಳಿಸಿದರು. ಶಿವಂ ದುಬೆ 17 ಎಸೆತಕ್ಕೆ 27 ರನ್ ಕೊಡುಗೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌

ಭಾರತ: 20 ಓವರ್‌ಗಳಲ್ಲಿ 175/7 (ಇಶಾನ್‌ 77, ಸೂರ್ಯ 32, ಶಿವಂ ದುಬೆ 27, ತಿಲಕ್‌ 25, ಸೈಮ್‌ ಅಯೂಬ್‌ -25), ಪಾಕಿಸ್ತಾನ: 18 ಓವರ್‌ಗಳಲ್ಲಿ 114/10 (ಉಸ್ಮಾನ್‌ 44, ಶಾಹೀನ್‌ 23, ಹಾರ್ದಿಕ್‌ 2-16, ಬೂಮ್ರಾ 2-17, ವರುಣ್‌ 2-17, ಅಕ್ಷರ್‌ 2-29).