T20 World Cup 2026: ಫೆ.15ಕ್ಕೆ ಭಾರತ-ಪಾಕ್ ಟಿ20 ವಿಶ್ವಕಪ್ ಫೈಟ್
India vs Pakistan: ಮೂಲಗಳ ಪ್ರಕಾರ, ಭಾರತ ಫೆಬ್ರವರಿ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ನಂತರ ಫೆಬ್ರವರಿ 12 ರಂದು ದೆಹಲಿಯಲ್ಲಿ ನಮೀಬಿಯಾ ವಿರುದ್ಧದ ಪಂದ್ಯವನ್ನು ಆಡಲಿದೆ.
ಭಾರತ vs ಪಾಕಿಸ್ತಾನ -
ನವದೆಹಲಿ, ನ.22: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್(T20 World Cup 2026) ಕ್ರಿಕೆಟ್ ಟೂರ್ನಿಯು ಮುಂದಿನ ವರ್ಷದ ಫೆಬ್ರವರಿ 7ರಿಂದ ಮಾರ್ಚ್ 8ರವರೆಗೆ ನಡೆಯುವ ಸಾಧ್ಯತೆಯಿದೆ. ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ(India vs Pakistan) ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇತ್ತಂಡಗಳ ನಡುವಣ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿದೆ ಎನ್ನಲಾಗಿದೆ.
ಎರಡೂ ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತವು ಪಾಕಿಸ್ತಾನದೊಂದಿಗೆ ಒಂದೇ ಗುಂಪಿನಲ್ಲಿ ಆಡುವುದನ್ನು ತಪ್ಪಿಸಬಹುದು ಎಂಬ ಊಹಾಪೋಹಗಳಿದ್ದವು. ಆದರೆ ಒಂದೇ ಗುಂಪಿನಲ್ಲಿ ಎರಡು ತಂಡಗಳು ಕಾಣಿಸಿಕೊಳ್ಳಲಿದೆ. ಅಮೆರಿಕ, ನಮೀಬಿಯಾ ಮತ್ತು ನೆದರ್‌ಲ್ಯಾಂಡ್ಸ್ ಈ ಗುಂಪಿನ ಇತರ ತಂಡಗಳು.
ಮೂಲಗಳ ಪ್ರಕಾರ, ಭಾರತ ಫೆಬ್ರವರಿ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ನಂತರ ಫೆಬ್ರವರಿ 12 ರಂದು ದೆಹಲಿಯಲ್ಲಿ ನಮೀಬಿಯಾ ವಿರುದ್ಧದ ಪಂದ್ಯವನ್ನು ಆಡಲಿದೆ.
ನಂತರ ತಂಡವು ಪಾಕಿಸ್ತಾನ ವಿರುದ್ಧದ ದೊಡ್ಡ ಪಂದ್ಯಕ್ಕಾಗಿ ಕೊಲಂಬೊಗೆ ಪ್ರಯಾಣ ಬೆಳೆಸಲಿದ್ದು, ಫೆಬ್ರವರಿ 18 ರಂದು ಮುಂಬೈನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆಯ ಗ್ರೂಪ್ ಲೀಗ್ ಪಂದ್ಯದಲ್ಲಿ ಆಡಲಿದೆ. ಫೆಬ್ರವರಿ 22, 26 ಮತ್ತು ಮಾರ್ಚ್ 1 ರಂದು ಕ್ರಮವಾಗಿ ಅಹಮದಾಬಾದ್, ಚೆನ್ನೈ ಮತ್ತು ಕೋಲ್ಕತ್ತಾ ಸೂಪರ್ 8 ಪಂದ್ಯಗಳನ್ನು ಆಯೋಜಿಸಲಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ T20 World Cup: ಕೋಲ್ಕತಾ, ಅಹಮದಾಬಾದ್‌ನಲ್ಲಿ ಸೆಮಿಫೈನಲ್ ಪಂದ್ಯಗಳು?
ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಅದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ, ಆದರೆ ಸ್ಪೋರ್ಟ್‌ಸ್ಟಾರ್ ಈ ಹಿಂದೆ ವರದಿ ಮಾಡಿದಂತೆ ಕೊಲಂಬೊ ಮಾರ್ಚ್ 4 ರಂದು ಮೊದಲ ಸೆಮಿಫೈನಲ್ ಅನ್ನು ಆಯೋಜಿಸುತ್ತದೆ. ಮೆಗಾ ಈವೆಂಟ್‌ನ ಫೈನಲ್ ಮಾರ್ಚ್ 8 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
20 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಪಂದ್ಯಗಳು ಭಾರತದ 5 ನಗರ ಮತ್ತು ಶ್ರೀಲಂಕಾದ 2 ಕ್ರೀಡಾಂಗಣಗಳಲ್ಲಿ ನಡೆಯಲಿವೆ.
ಅರ್ಹತೆ ಪಡೆದ ತಂಡಗಳು
ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಐರ್ಲೆಂಡ್, ಇಟಲಿ, ನಮೀಬಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಓಮನ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಯುಎಇ, ಯುಎಸ್ಎ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ.