ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದು ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ

ICC T20 World Cup 2026: ಬಹುನಿರೀಕ್ಷಿತ 2026ರ ಟಿ20 ವಿಶ್ವಕಪ್‌ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದ್ದು, ನವೆಂಬರ್‌ 26ರ ಸಂಜೆ 6:30ಕ್ಕೆ ವೇಳಾ ಪಟ್ಟಿ ಪ್ರಕಟವಾಗಲಿದೆ. 20 ತಂಡಗಳನ್ನು 4ಗುಂಪುಗಳಾಗಿ ವಿಂಗಡಿಸಲಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಪಾಕ್‌ ಮತ್ತು ಭಾರತ ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ.

ಇಂದು ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ ಸಾಧ್ಯತೆ

2026ರ ಟಿ20 ವಿಶ್ವಕಪ್‌(ಸಾಂದರ್ಭಿಕ ಚಿತ್ರ) -

Abhilash BC
Abhilash BC Nov 25, 2025 12:15 PM

ಮುಂಬಯಿ, ನ.25: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಪುರುಷರ ಐಸಿಸಿ ಟಿ20 ವಿಶ್ವಕಪ್‌(ICC T20 World Cup 2026) ವೇಳಾಪಟ್ಟಿ ಇಂದು ಸಂಜೆ(ಮಂಗಳವಾರ) 6:30 ಕ್ಕೆ ಪ್ರಕಟವಾಗಲಿದೆ. ಈ ಕಾರ್ಯಕ್ರಮವನ್ನು ಜಿಯೋಹಾಟ್‌ಸ್ಟಾರ್‌, ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. 20 ತಂಡಗಳನ್ನು 4ಗುಂಪುಗಳಾಗಿ ವಿಂಗಡಿಸಲಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ.

ಟೂರ್ನಿಯಲ್ಲಿ ಪ್ರತಿಯೊಂದು ತಂಡವು ಪ್ರತಿ ಎದುರಾಳಿಯೊಂದಿಗೆ ಒಂದು ಬಾರಿ ಮುಖಾಮುಖಿಯಾಗಲಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳಂತೆ ಒಟ್ಟು 8 ತಂಡಗಳು ಸೂಪರ್‌-8 ಹಂತಕ್ಕೆ ಪ್ರವೇಶಿಸಲಿವೆ. ಬಳಿಕ ನಾಲ್ಕು ತಂಡಗಳಂತೆ ಎರಡು ಗುಂಪುಗಳನ್ನು ರೂಪಿಸಲಾಗುವುದು. ಎರಡೂ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಡಲಿವೆ. ಈ ಹಂತದಲ್ಲಿ ಗೆದ್ದ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಬಿಸಿಸಿಐ ಮತ್ತು ಪಿಸಿಬಿ ನಡುವಿನ ಪರಸ್ಪರ ಒಪ್ಪಂದದ ಭಾಗವಾಗಿ, ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿವೆ. ಒಂದು ವೇಳೆ ಪಾಕ್‌ ಸೆಮೀಸ್‌ ಅಥವಾ ಫೈನಲ್‌ ತಲುಪಿದರೆ ಆ ಪಂದ್ಯಗಳನ್ನು ಭಾರತದ ಬದಲಾಗಿ ಶ್ರೀಲಂಕಾದಲ್ಲಿ ನಡೆಸಲಾಗುವುದು. ಭಾರತ ಮತ್ತು ಪಾಕ್‌ ನಡುವಣ ಲೀಗ್‌ ಪಂದ್ಯ ಫೆ.15ರಂದು ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ IND vs SA: ʻಭಾರತ ತಂಡ 201ಕ್ಕೆ ಆಲೌಟ್‌ʼ-ಬ್ಯಾಟ್ಸ್‌ಮನ್‌ಗಳ ಬಗ್ಗೆ ಬೇಸರ ಹೊರಹಾಕಿದ ರವಿಶಾಸ್ತ್ರಿ!

ಅರ್ಹತೆ ಪಡೆದ ತಂಡಗಳು

ಅತಿಥೇಯ ಭಾರತ ಮತ್ತು ಶ್ರೀಲಂಕಾ ಜತೆಗೆ, 2024ರ ಟಿ20 ವಿಶ್ವಕಪ್‌ನ ಅಂಕಪಟ್ಟಿಯಲ್ಲಿದ್ದ ಅಗ್ರ 7 ಸ್ಥಾನಗಳಾದ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್ ನೇರ ಅರ್ಹತೆ ಪಡೆದಿವೆ. ಮತ್ತು ಟಿ20ಐ ಶ್ರೇಯಾಂಕದ ಆಧಾರದ ಮೇಲೆ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಐರ್ಲೆಂಡ್ ಅರ್ಹತೆ ಪಡೆದುಕೊಂಡಿದ್ದು, ಕೆನಡಾ (ಅಮೆರಿಕ), ಇಟಲಿ ಮತ್ತು ನೆದರ್‌ಲ್ಯಾಂಡ್ಸ್ (ಯುರೋಪ್), ನಮೀಬಿಯಾ ಮತ್ತು ಜಿಂಬಾಬ್ವೆ (ಆಫ್ರಿಕಾ), ಮತ್ತು ನೇಪಾಳ, ಓಮನ್ ಮತ್ತು ಯುಎಇ ಜಾಗತಿಕ ಅರ್ಹತೆಯ ಮೂಲಕ ಆಡಲಿವೆ. ಈ ಆವೃತ್ತಿಯಲ್ಲಿ ಇಟಲಿ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದೆ.

ಗುಂಪುಗಳು

ʻಎʼ ಗುಂಪು – ಭಾರತ, ಪಾಕಿಸ್ತಾನ, ನೆದರ್ಲೆಂಡ್, ನಮೀಬಿಯಾ, ಯುಎಸ್ಎ

ʻಬಿʼ ಗುಂಪು – ಶ್ರೀಲಂಕಾ, ಆಸ್ಟ್ರೇಲಿಯಾ, ಜಿಂಬಾಬ್ವೆ, ಐರ್ಲೆಂಡ್, ಒಮನ್

ʻಸಿʼ ಗುಂಪು – ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ, ಇಟಲಿ

ʻಡಿʼ ಗುಂಪು – ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ, ಕೆನಡಾ