T20 World Cup 2026: ಚೊಚ್ಚಲ ಟಿ20 ವಿಶ್ವಕಪ್ ಅರ್ಹತೆಯ ಹೊಸ್ತಿಲಲ್ಲಿ ಇಟಲಿ
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಟಲಿ ತಂಡ ಆರಂಭಿಕ ಬ್ಯಾಟರ್ ಎಮಿಲೊ ಗೇ(50) ಅವರ ಅರ್ಧಶತಕದ ನೆರವಿನಿಂದ 6ಕ್ಕೆ 167 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಸೋಲಿನಿಂದ ಜಾರ್ಜಮ್ ಮುನ್ಸಿ (72) ಅರ್ಧಶತಕ ವ್ಯರ್ಥವಾಯಿತು.


ದಿ ಹೇಗ್ (ನೆದರ್ಲೆಂಡ್ಸ್: ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 20 ತಂಡಗಳ ಟಿ20 ವಿಶ್ವಕಪ್‌ಗೆ(T20 World Cup 2026) ಅರ್ಹತೆ ಪಡೆಯಲು ಕೇವಲ ಏಳು ಸ್ಥಾನಗಳು ಉಳಿದಿರುವಾಗ, ನೆದರ್‌ಲ್ಯಾಂಡ್ಸ್‌ನ ವೂರ್‌ಬರ್ಗ್‌ನಲ್ಲಿ ನಡೆದ ಯುರೋಪ್ ಪ್ರಾದೇಶಿಕ ಫೈನಲ್ ಅರ್ಹತಾ ಪಂದ್ಯದಲ್ಲಿ ಸ್ಕಾಟ್ಲೆಂಡ್(italy vs scotland t20) ತಂಡವನ್ನು 12 ರನ್‌ಗಳಿಂದ ಮಣಿಸಿದ ಇಟಲಿ(Italy ) ತಂಡ ಇದೇ ಮೊದಲ ಸಲ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವತ್ತ ದಾಪುಗಾಲಿಟ್ಟಿದೆ.
ಶುಕ್ರವಾರದ ಸಿಂಗಲ್ ರೌಂಡ್-ರಾಬಿನ್ ಹಂತದ ಅಂತ್ಯದಲ್ಲಿ, ಅಗ್ರ ಎರಡು ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ. ಇಟಲಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಇಟಲಿ ಜಯ ಸಾಧಿಸಿದರೆ ನೇರವಾಗಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ನೆಟ್ ರನ್ ರೇಟ್ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಅರ್ಹತೆ ಗಿಟ್ಟಿಸಿಕೊಳ್ಳಬಹುದು.
ಸದ್ಯ ಇಟಲಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಒಟ್ಟು 5 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. 3 ಪಂದ್ಯಗಳನ್ನು ಆಡಿ 2ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ನೆದರ್ಲೆಂಡ್ಸ್ 4 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಸ್ಕಾಟ್ಲೆಂಡ್ ಮತ್ತು ಜೆರ್ಸಿ ತಂಡಗಳು ತಲಾ 3 ಅಂಕದೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಿಯಾಗಿದೆ. ಉಭಯ ತಂಡಗಳೇ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಇದನ್ನೂ ಓದಿ 2026ರ ಪುರುಷರ ಟಿ-20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಟಲಿ ತಂಡ ಆರಂಭಿಕ ಬ್ಯಾಟರ್ ಎಮಿಲೊ ಗೇ(50) ಅವರ ಅರ್ಧಶತಕದ ನೆರವಿನಿಂದ 6ಕ್ಕೆ 167 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಸೋಲಿನಿಂದ ಜಾರ್ಜಮ್ ಮುನ್ಸಿ (72) ಅರ್ಧಶತಕ ವ್ಯರ್ಥವಾಯಿತು.
ಇಟಲಿ ತಂಡದ ಕ್ವಾಲಿಫೈಯರ್ ಲೆಕ್ಕಾಚಾರ
ನೆದರ್ಲೆಂಡ್ಸ್ ವಿರುದ್ಧ ಗೆದ್ದರೆ ನೇರವಾಗಿ ಅರ್ಹತೆ ಪಡೆಯಲಿದೆ.
ನೆದರ್ಲೆಂಡ್ಸ್ ವಿರುದ್ಧ 20-30 ರನ್‌ಗಳಿಂದ ಸೋತರೂ ನೆಟ್ ರನ್ ರೇಟ್ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಅರ್ಹತೆ ಪಡೆಯಬಹುದು.
ಇಟಲಿ ವಿರುದ್ಧ ನೆದರ್ಲೆಂಡ್ಸ್ ಗೆದ್ದರೆ, ಆಗ ಜೆರ್ಸಿ ಅಥವಾ ಸ್ಕಾಟ್ಲೆಂಡ್ ತಂಡಗಳು ದೊಡ್ಡ ಅಂತರದಿಂದ ಗೆಲ್ಲಬಾರದು.
ಅರ್ಹತೆ ಪಡೆದ ತಂಡಗಳು
ಭಾರತ ,ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಕೆನಡಾ.