ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup: ವಿಶ್ವ ಗೆದ್ದ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ ಮೋಟಾರ್ಸ್

ನವೆಂಬರ್ 2, ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಚೊಚ್ಚಲ ವಿಶ್ವಕಪ್‌ ತನ್ನದಾಗಿಸಿಕೊಂಡಿತು. ಶಫಾಲಿ ವರ್ಮಾ ಅವರ 87 ರನ್ ಮತ್ತು ದೀಪ್ತಿ ಶರ್ಮಾ ಅವರ ಐದು ವಿಕೆಟ್ ಗೊಂಚಲು ನೆರವಿನಿಂದ ಭಾರತ ತಂಡವು ಕಿಕ್ಕಿರಿದು ತುಂಬಿದ ತವರಿನ ಪ್ರೇಕ್ಷಕರ ಮುಂದೆ 52 ರನ್‌ಗಳ ಜಯ ಸಾಧಿಸಿತ್ತು.

ಟಾಟಾ ಮೋಟಾರ್ಸ್ ಸಿಯೆರಾ ಕಾರು

ಮುಂಬಯಿ: ಚೊಚ್ಚಲ ಏಕದಿನ ವಿಶ್ವಕಪ್‌(Women's World Cup) ಗೆದ್ದ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ(Indian Women's team) ಬಹುಮಾನಗಳ ಸುರಿಮಳೆಯಾಗುತ್ತಿದೆ. ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ವಜ್ರದ ಆಭರಣ ಹಾಗ ಸೌರ ಫಲಕವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಟಾಟಾ ಮೋಟಾರ್ಸ್(Tata Motors) ವಿಶ್ವಕಪ್ ವಿಜೇತ ತಂಡಕ್ಕೆ ವಿಶೇಷ ಬಹುಮಾನವನ್ನು ಘೋಷಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಕಾರನ್ನು ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ನೀಡಲಾಗುವುದು ಎಂದು ಟಾಟಾ ಮೋಟಾರ್ಸ್ ಗುರುವಾರ ಪ್ರಕಟನೆಯಲ್ಲಿ ತಿಳಿಸಿದೆ.

"ವಿಶ್ವಕಪ್‌ ಗೆದ್ದ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಕಂಪನಿಯು ಸಿಯೆರಾದ ಉನ್ನತ ಮಾದರಿಯನ್ನು ಪ್ರಸ್ತುತಪಡಿಸಲಿದೆ, ಅವರ ಅದಮ್ಯ ಮನೋಭಾವವನ್ನು ಶ್ಲಾಘಿಸಲಿದೆ ಮತ್ತು ದೇಶಕ್ಕೆ ಕೀರ್ತಿ ತರುವಲ್ಲಿ ಅವರ ಅಪಾರ ಕೊಡುಗೆ ಮತ್ತು ತ್ಯಾಗವನ್ನು ಗುರುತಿಸಲಿದೆ" ಎಂದು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಆಟೋಮೋಟಿವ್ ಇತಿಹಾಸದಲ್ಲಿ ಟಾಟಾ ಸಿಯೆರಾ ವಿಶೇಷ ಸ್ಥಾನವನ್ನು ಹೊಂದಿದೆ. 1991 ರಲ್ಲಿ ಪರಿಚಯಿಸಲಾದ ಇದು ಭಾರತದ ಮೊದಲ ಖಾಸಗಿ ಒಡೆತನದ SUV ಗಳಲ್ಲಿ ಒಂದಾಗಿದೆ ಮತ್ತು ಟಾಟಾ ಟೆಲ್ಕೋಲಿನ್‌ನ ದೃಢವಾದ "X2" ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಈ ಐಕಾನಿಕ್ SUV ನವೆಂಬರ್ 25, 2025 ರಂದು ಆಧುನಿಕ 5-ಬಾಗಿಲಿನ ಮಾನೋಕಾಕ್ ವಾಹನವಾಗಿ ಮತ್ತೆ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ ICC Women's World Cup Team: ಟ್ರೋಫಿ ಗೆದ್ದರೂ ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ಹರ್ಮನ್‌ಪ್ರೀತ್‌ ಕೌರ್‌!

"ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತಮ್ಮ ಅಸಾಧಾರಣ ಪ್ರದರ್ಶನ ಮತ್ತು ಗಮನಾರ್ಹ ಗೆಲುವಿನಿಂದ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಅವರ ಪ್ರಯಾಣವು ದೃಢನಿಶ್ಚಯ ಮತ್ತು ನಂಬಿಕೆಯ ಶಕ್ತಿ, ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿ ನೀಡುವ ಗುಣಗಳಿಗೆ ನಿಜವಾದ ಸಾಕ್ಷಿಯಾಗಿದೆ" ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ ಹೇಳಿದರು.

ನವೆಂಬರ್ 2, ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಚೊಚ್ಚಲ ವಿಶ್ವಕಪ್‌ ತನ್ನದಾಗಿಸಿಕೊಂಡಿತು. ಶಫಾಲಿ ವರ್ಮಾ ಅವರ 87 ರನ್ ಮತ್ತು ದೀಪ್ತಿ ಶರ್ಮಾ ಅವರ ಐದು ವಿಕೆಟ್ ಗೊಂಚಲು ನೆರವಿನಿಂದ ಭಾರತ ತಂಡವು ಕಿಕ್ಕಿರಿದು ತುಂಬಿದ ತವರಿನ ಪ್ರೇಕ್ಷಕರ ಮುಂದೆ 52 ರನ್‌ಗಳ ಜಯ ಸಾಧಿಸಿತ್ತು.

ಸೂರತ್‌ನ ವಜ್ರದ ವ್ಯಾಪಾರಿ, ರಾಜ್ಯಸಭಾ ಸದಸ್ಯ ಗೋವಿಂದ ಧೋಲಾಕಿಯಾ ವಜ್ರದ ಆಭರಣ ಮತ್ತು ಸೋಲಾರ್‌ ಫಲಕವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ರಾಜೀವ್‌ ಶುಕ್ಲಾಗೆ ಪತ್ರ ಬರೆದಿರುವ ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್‌. ಪ್ರೈ. ಲಿಮಿಟೆಡ್‌ ಸ್ಥಾಪಕ ಧೋಲಾಕಿಯಾ , ‘ವಿಶ್ವಕಪ್‌ ತಂಡದಲ್ಲಿದ್ದ ಆಟಗಾರ್ತಿಯರಿಗೆ ಕೈಯಲ್ಲಿ ತಯಾರಿಸಿದ ನೈಸರ್ಗಿಕ ವಜ್ರದ ಆಭರಣ ಮತ್ತು ಅವರ ಮನೆಗಳಿಗೆ ಸೋಲಾರ್‌ ಅಳವಡಿಸಲು ಬಯಸಿದ್ದು, ದೇಶಕ್ಕೆ ಬೆಳಕು ನೀಡಿದವರ ಬದುಕು ಕೂಡ ಬೆಳಕಿನಿಂದ ಕೂಡಿರಲಿ’ ಎಂದಿದ್ದಾರೆ.