WPL 2025: ಅಗ್ರಸ್ಥಾನಕ್ಕೆ ಮುಂಬೈ-ಗುಜರಾತ್ ಫೈಟ್
ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ಸದ್ಯ 8 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿದೆ. ಇಂದಿನ ಪಂದ್ಯ ಮಾತ್ರವಲ್ಲದೆ ಇನ್ನೊಂದು ಪಂದ್ಯ ಕೂಡ ಬಾಕಿ ಉಳಿದಿದೆ. 2 ಪಂದ್ಯ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಸದ್ಯ ಅಗ್ರಸ್ಥಾನದಲ್ಲಿರುವ ಡೆಲ್ಲಿ ಈಗಾಗಲೇ ತನ್ನ ಎಂಟೂ ಲೀಗ್ ಪಂದ್ಯಗಳನ್ನು ಮುಗಿಸಿದ್ದು, 10 ಅಂಕ ಹೊಂದಿದೆ.
                                -
                                
                                Abhilash BC
                            
                                Mar 10, 2025 12:47 PM
                            ಮುಂಬೈ: ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2025) ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್ ಸ್ಥಾನ ಕೂಡ ಖಚಿತಪಡಿಸಿದೆ. ಯುಪಿ ವಾರಿಯರ್ಸ್ ಮತ್ತು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಿರ್ಗಮ ಕಂಡಿದೆ. ಇದೀಗ ಗುಜರಾತ್(Gujarat Giants Women) ಮತ್ತು ಮುಂಬೈ(Mumbai Indians Women) ತಂಡಗಳು ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಇಂದು ಕಾದಾಟ ನಡೆಸಲಿದೆ. ಅಗ್ರಸ್ಥಾನಿಯಾದ ತಂಡ ನೇರವಾಗಿ ಫೈನಲ್ ತಲುಪುವುದರಿಂದ ಈ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದೆ.
ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ಸದ್ಯ 8 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿದೆ. ಇಂದಿನ ಪಂದ್ಯ ಮಾತ್ರವಲ್ಲದೆ ಇನ್ನೊಂದು ಪಂದ್ಯ ಕೂಡ ಬಾಕಿ ಉಳಿದಿದೆ. 2 ಪಂದ್ಯ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಸದ್ಯ ಅಗ್ರಸ್ಥಾನದಲ್ಲಿರುವ ಡೆಲ್ಲಿ ಈಗಾಗಲೇ ತನ್ನ ಎಂಟೂ ಲೀಗ್ ಪಂದ್ಯಗಳನ್ನು ಮುಗಿಸಿದ್ದು, 10 ಅಂಕ ಹೊಂದಿದೆ.
ಗುಜರಾತ್ 7 ಪಂದ್ಯಗಳಿಂದ 8 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಇಂದು ಗೆದ್ದರೆ ಅಗ್ರಸ್ಥಾನಕ್ಕೇರಬಹುದು. ತಂಡದ ರನ್‌ರೇಟ್ ಕೂಡ ಉತ್ತಮವಾಗಿದೆ. ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅಸಾಮಾನ್ಯ ಪ್ರದರ್ಶನದ ಮೂಲಕ ಗುಜರಾತ್ ಗೆಲುವು ಸಾಧಿಸಿತ್ತು. ಇದೇ ಪ್ರದರ್ಶನವನ್ನು ಇಂದು ಮುಂಬೈ ವಿರುದ್ಧವೂ ಮುಂದುವರಿಸುವ ಸಾಧ್ಯತೆ ಇದೆ.
ಗುಜರಾತ್ ಮೊದಲ ಸಲ ಪ್ಲೇಆಫ್ ಸುತ್ತು ಪ್ರವೇಶಿಸಿದ್ದರಿಂದ ತಂಡದ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ನಾಯಕಿ ಆಶ್ಲೆ ಗಾರ್ಡನರ್, ಬೆತ್ ಮೂನಿ, ಹಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಕಾಶ್ವಿ ಗೌತಮ್, ತನುಜಾ ಕನ್ವರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಇದನ್ನೂ ಓದಿ WPL 2025: ಯುಪಿ ವಾರಿಯರ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ವನಿತೆಯರು!
ಸಂಭಾವ್ಯ ತಂಡಗಳು
ಗುಜರಾತ್ ಜೈಂಟ್ಸ್: ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಡಿಯಾಂಡ್ರಾ ಡಾಟಿನ್, ಫೋಬೆ ಲಿಚ್‌ಫೀಲ್ಡ್, ಭಾರತಿ ಫುಲ್ಮಾಲಿ, ಕಾಶ್ವೀ ಗೌತಮ್, ಮೇಘನಾ ಸಿಂಗ್, ತನುಜಾ ಕನ್ವರ್, ಪ್ರಿಯಾ ಮಿಶ್ರಾ.
ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜನಾ, ಜಿ ಕಮಲಿನಿ, ಅಮನ್‌ಜೋತ್ ಕೌರ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಪರುಣಿಕಾ ಸಿಸೋಡಿಯಾ.