ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಶಿಶ್‌ ನೆಹ್ರಾ ಮಾಸ್ಟರ್‌ ಪ್ಲ್ಯಾನ್‌ಗೆ ವಿಕೆಟ್‌ ಕಳೆದುಕೊಂಡ ಸೂರ್ಯವಂಶಿ; ಇಲ್ಲಿದೆ ವಿಡಿಯೊ

IPL 2026: 2026ರ ಐಪಿಎಲ್‌ನಲ್ಲಿ ಸೂರ್ಯವಂಶಿ ಅವರು ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಆಡಿರುವ 11 ಪಂದ್ಯಗಳಿಂದ 40ರ ಸರಾಸರಿಯಲ್ಲಿ 1 ಶತಕ, 2 ಅರ್ಧಶತಕ ಸಹಿತ 440 ರನ್ ಗಳಿಸಿದ್ದಾರೆ.

ಕೋಚ್‌ ನೆಹ್ರಾ ಮಾಸ್ಟರ್‌ ಪ್ಲ್ಯಾನ್‌ಗೆ ವಿಕೆಟ್‌ ಕಳೆದುಕೊಂಡ ಸೂರ್ಯವಂಶಿ

Vaibhav Sooryavanshi -

Abhilash BC
Abhilash BC May 10, 2026 1:53 PM

ಜೈಪುರ, ಮೇ 10: ಶನಿವಾರ ನಡೆದಿದ್ದ ಐಪಿಎಲ್‌(IPL 2026) ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಅಪಾಯಕಾರಿ ಬ್ಯಾಟರ್‌ ಸೂರ್ಯವಂಶಿಯ ವಿಕೆಟ್‌ ಕೀಳಲು ಗುಜರಾತ್‌ ಕೋಚ್‌ ಆಶಿಶ್‌ ನೆಹ್ರಾ ನೀಡಿದ ಸಲಹೆಯ ವಿಡಿಯೊ ವೈರಲ್‌ ಆಗಿದೆ.

ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದ ಸೂರ್ಯವಂಶಿ 16 ಎಸೆತಗಳಲ್ಲಿ 36 ರನ್‌ ಗಳಿಸಿದರು. ಪಂದ್ಯದ ಮೂರನೇ ಓವರ್‌ನಲ್ಲಿ ಜಿಟಿ ಕೋಚ್ ಆಶಿಶ್ ನೆಹ್ರಾ ತನ್ನ ತಲೆಯ ಕಡೆಗೆ ಸನ್ನೆ ಮಾಡುವ ಮೂಲಕ ಸಿರಾಜ್‌ಗೆ ಬೌನ್ಸರ್ ಎಸೆಯುವಂತೆ ಸೂಚಿಸಿದರು. ಕೋಚ್‌ ಸಲಹೆಯಂತೆ ಸಿರಾಜ್‌ ಬೌನ್ಸರ್‌ ಎಸೆದರು. ಬೀಸಿ ಬಾರಿಸಲೆತ್ನಿಸಿದ ಸೂರ್ಯವಂಶಿ ಕ್ಯಾಚ್‌ ನೀಡುವ ಮೂಲಕ ವಿಕೆಟ್‌ ಕಳೆದುಕೊಂಡರು. ವಿಕೆಟ್‌ ಕಿತ್ತ ಸಿರಾಜ್‌ ಅತಿರೇಕದಿಂದ ಸಂಭ್ರಮಿಸಿದರು.



ಟಿ20 ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ಮಿಂಚಿದರು. ಆ ಮೂಲಕ ಅವರು ಟಿ20 ಕ್ರಿಕೆಟ್‌ನಲ್ಲಿ 102 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.

2026ರ ಐಪಿಎಲ್‌ನಲ್ಲಿ ಸೂರ್ಯವಂಶಿ ಅವರು ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಆಡಿರುವ 11 ಪಂದ್ಯಗಳಿಂದ 40ರ ಸರಾಸರಿಯಲ್ಲಿ 1 ಶತಕ, 2 ಅರ್ಧಶತಕ ಸಹಿತ 440 ರನ್ ಗಳಿಸಿದ್ದಾರೆ.

ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಎರಡನೇ ಸ್ಥಾನಕ್ಕೇರಿದ ಗುಜರಾತ್‌

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ತಂಡಕ್ಕೆ ನಾಯಕ ಶುಭಮನ್‌ ಗಿಲ್‌ (84) ಮತ್ತು ಸಾಯಿ ಸುದರ್ಶನ್‌ (55) ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಅಂತಿಮವಾಗಿ ತಂಡವು 4 ವಿಕೆಟ್‌ಗೆ 229 ರನ್‌ಗಳ ಭಾರಿ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ರಶೀದ್‌ (33ಕ್ಕೆ 4), ಜೇಸನ್‌ ಹೋಲ್ಡರ್‌ (13ಕ್ಕೆ 3) ಮತ್ತು ಕಗಿಸೊ ರಬಾಡ (33ಕ್ಕೆ 2) ದಾಳಿಗೆ ತತ್ತರಿಸಿ 16.3 ಓವರ್‌ಗಳಲ್ಲಿ 152 ರನ್‌ಗೆ ಸರ್ವಪತನ ಕಂಡಿತು.