Vajral Gowda : ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ 5 ಮೆಡಲ್ ಗಳ ಸಾಧನೆಗೈದ ಮೇಲೂರು ಪ್ರತಿಭೆ ವಜ್ರಲ್ ಗೌಡ
ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವುದೆಂದರೆ ಕ್ರೀಡಾಪಟುವಿಗೆ ಸಂತೋಷ ತರುತ್ತದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ ನಲ್ಲಿ ಐದು ಗೋಲ್ಡ್ ಮೆಡಲ್ಸ್ ಸಾಧನೆ ಮಾಡಿದ್ದೇನೆ. ನನ್ನ ಈ ಸಾಧನೆಯಿಂದ ನನ್ನ ತಾಯಿ ಮತ್ತು ಸಹೋದರಿ ಯರ ಅಪಾರವಾದ ಬೆಂಬಲವಿದೆ
ಮೇಲೂರಿನ ಗ್ರಾಮದಲ್ಲಿ ಯುವ ಪ್ರತಿಭೆ ಪವರ್ ಲಿಫ್ಟಿಂಗ್ ಕ್ರೀಡಾಪಟು ವಜ್ರಲ್ ಗೌಡ ಅವರನ್ನು ಸನ್ಮಾನಿಸಲಾಯಿತು. -
ಚಿಕ್ಕಬಳ್ಳಾಪುರ : ಯುವ ಪ್ರತಿಭೆ ಮೇಲೂರಿನ ವಜ್ರಲ್ ಗೌಡ(17 ವ) ಕಳೆದ ಎರಡು ವರ್ಷಗಳಿಂದ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿರುವುದು ಜಿಲ್ಲೆಯ ಹೆಮ್ಮೆಯಾಗಿದೆ ಎಂದು ಮೇಲೂರಿನ ಜನತೆ ಅಭಿನಂದಿಸಿದ್ದಾರೆ. ಸಂಜಯ ನಗರದ ಪರ್ಹ್ಹಾನ್ ಹುಸೇನ್ ಎಂಬ ಗುರುಗಳ ಮೂಲಕ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಜ್ರಲ್ ಗೌಡ ಈವರೆಗೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ಸಾಧನೆ, ಏಷ್ಯನ್ ಗೇಮ್ಸ್ ನಲ್ಲಿ ಗೆಲುವಿನ ಸಾಧನೆ ಮಾಡಿದ ನಂತರ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವುದೆಂದರೆ ಕ್ರೀಡಾಪಟುವಿಗೆ ಸಂತೋಷ ತರುತ್ತದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ ನಲ್ಲಿ ಐದು ಗೋಲ್ಡ್ ಮೆಡಲ್ಸ್ ಸಾಧನೆ ಮಾಡಿದ್ದೇನೆ. ನನ್ನ ಈ ಸಾಧನೆಯಿಂದ ನನ್ನ ತಾಯಿ ಮತ್ತು ಸಹೋದರಿ ಯರ ಅಪಾರವಾದ ಬೆಂಬಲವಿದೆ ಎಂದು ಹೆಮ್ಮೆಯಿಂದ ಹೇಳಿದರು.
ಇದನ್ನೂ ಓದಿ: IPL Auction 2026: ಎಲ್ಲಾ 10 ತಂಡಗಳ ಸೋಲ್ಡ್, ಅನ್‌ಸೋಲ್ಡ್ ಆಟಗಾರರ ಸಂಪೂರ್ಣ ಪಟ್ಟಿ!
ಹದಿನಾರನೇ ವಯಸ್ಸಿನಿಂದಲೇ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಏನಾದ್ರೂ ವಿಶೇಷವಾದ ಸಾಧನೆ ಮಾಡಬೇಕೆಂಬ ಹಂಬಲದಿಂದ ಅಭ್ಯಾಸದಲ್ಲಿ ತೊಡಗಿದ್ದೆ.
ಪರಿಣಾಮವಾಗಿ ಇತ್ತೀಚೆಗೆ ರಷ್ಯಾದಲ್ಲಿ ನಡೆದ ಪವರ್ ಲಿಫ್ಟಿಂಗ್ ವರ್ಲ್ಡ್ ಕಪ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಐದು ಮೆಡಲ್ ಗೆಲ್ಲುವಂತ ಸಾಧನೆ ದಾಖಲಿಸಲು ಸಾಧ್ಯವಾಗಿದೆ.
ರಷ್ಯಾ ಖಜಕಿಸ್ತಾನ ಸೇರಿದಂತೆ ಏಳು ದೇಶಗಳ ಸ್ಪರ್ಧಿಗಳ ನಡುವೆ ಸ್ಪರ್ಧೆ ಇತ್ತು.ನಾನು ಭಾರತ ದೇಶದ ಪ್ರತಿನಿಧಿಯಾಗಿ ತೋರಿದ ಉತ್ತಮ ಸಾಧನೆಯ ಕಾರಣಕ್ಕಾಗಿ 5 ಮೆಡಲ್ಗಳ ಗುರಿ ತಲುಪಲು ಸಾಧ್ಯವಾಯಿತು. ಇದು ನನ್ನ ಜೀವನದಲ್ಲಿ ಮರೆಯಲಾಗದ ಗಳಿಗೆ ಎಂದು ಸಂತೋಷ ವ್ಯಕ್ತಪಡಿಸಿದರು.
ಕಂಬದಹಳ್ಳಿಯ ಬಿಜೆಪಿ ಮುಖಂಡ ಸುರೇಂದ್ರ ಗೌಡ ಮಾತನಾಡಿ, ಹಿಂದೆ ಮೇಲೂರಿನಿಂದ ಎಂ.ಎಲ್. ಸಿ ಆಗಿದ್ದ ನಂಜುಂಡಪ್ಪ ಅವರ ಮೊಮ್ಮಗ ವಜ್ರಲ್ ಗೌಡ. ಈತನ ತಂದೆ ಸಣ್ಣ ವಯಸ್ಸಿನಲ್ಲಿ ಮರಣ ಹೊಂದಿದರು. ತಾಯಿ ಆಶ್ರಯದಲ್ಲಿ ಬೆಳೆದ ಈತ ಕ್ರೀಡಾಪಟುವಾಗಿ ಬೆಳೆದು, ಉತ್ತಮ ಸಾಧನೆಯ ಮೂಲಕ ಭಾರತದ ಕೀರ್ತಿ ಬೆಳಗಿದ್ದಾರೆ. ಈ ಪ್ರತಿಭೆ ಇನ್ನು ಎತ್ತರದ ಸ್ಥಾನ ಗಳಿಸಲಿ ಎಂದು ಜಿಲ್ಲೆಯ ಪರವಾಗಿ ಆಶಿಸುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ಕೆ. ಮಂಜು ಮಾತನಾಡಿ ನನ್ನ ಸ್ನೇಹಿತನ ಮಗ ರಷ್ಯಾದಲ್ಲಿ ನಡೆದ ಅಂತರಾ ಷ್ಟ್ರೀಯ ಪವರ್ ಲಿಫ್ಟಿಂಗ್ ನಲ್ಲಿ ಭಾಗವಹಿಸಿ ಭಾರತಕ್ಕೆ 5 ಚಿನ್ನದ ಪದಕಗಳನ್ನು ತಂದಿರುವ ವಿಚಾರ ಅಪಾರ ಸಂತೋಷವನ್ನುಂಟು ಮಾಡಿದೆ. ಹೀಗಾಗಿ ವಜ್ರಲ್ ಗೌಡ ಅವರನ್ನು ಮನೆಗೆ ಆಹ್ವಾನಿಸಿ ಸಿಹಿ ತಿನ್ನಿಸಿ ಗೌರವಿಸುವ ಮೂಲಕ ಆಶೀರ್ವಾದ ಮಾಡಿದ್ದೇನೆ.
ಜಿಲ್ಲಾಡಳಿತ ಜನಪ್ರತಿನಿಧಿಗಳು ಈತನಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುತ್ತಾರೆ ಈ ಕೆಲಸ ಆಗಲಿ ಎಂದರು.
ಪವರ್ ಲಿಫ್ಟಿಂಗ್ ನಲ್ಲಿ ಅಮೋಘ ಸಾಧನ ತೋರಿರುವ ಜಿಲ್ಲೆಯ ಅಪರೂಪದ ಪ್ರತಿಭೆಯನ್ನು ಮೇಲೂರಿನ ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡು ಹಾರ ತುರಾಯಿ ಹಾಕುವ ಮೂಲಕ ನಿಮ್ಮ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.