ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wimbledon: ಜೊಕೋವಿಕ್‌ ಪಂದ್ಯ ವೀಕ್ಷಿಸಿದ ಕೊಹ್ಲಿ-ಅನುಷ್ಕಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ 2024ರಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದ ಈ ಸೆಲೆಬ್ರಿಟಿ ಜೋಡಿ ಮಗು ಹುಟ್ಟಿದ ಬಳಿಕ ಲಂಡನ್‌ಗೆ ತೆರಳಿ ಅಲ್ಲಿಯೇ ವಾಸ ಮಾಡುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು.

ಜೊಕೋವಿಕ್‌ ಪಂದ್ಯ ವೀಕ್ಷಿಸಿದ ಕೊಹ್ಲಿ-ಅನುಷ್ಕಾ

Profile Abhilash BC Jul 8, 2025 9:37 AM

ಲಂಡನ್‌: ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಭಾರತೀಯ ಕ್ರಿಕೆಟಿಗ ವಿರಾಟ್‌ ಕೊಹ್ಲಿ(Virat Kohli) ಸದ್ಯ ವಿಶ್ರಾಂತಿಯಲ್ಲಿದ್ದಾರೆ. ತಮ್ಮ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮ(Anushka Sharma) ಜತೆ ವಿಂಬಲ್ಡನ್‌(Wimbledon) ಟೆನಿಸ್‌ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ನೊವಾಕ್‌ ಜೊಕೋವಿಕ್‌ ಮತ್ತು ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ನಡುವಣ ಪಂದ್ಯವನ್ನು ವೀಕ್ಷಿಸಿದರು. ಕೊಹ್ಲಿ ಹಾಗೂ ಅನುಷ್ಕಾ ಮಾತ್ರವಲ್ಲದೆ ಸ್ವಿಸ್​ ದಿಗ್ಗಜ ರೋಜರ್​ ಫೆಡರರ್,​ಇಂಗ್ಲೆಂಡ್​ ಕ್ರಿಕೆಟಿಗರಾದ ಜೋ ರೂಟ್​, ಜೇಮ್ಸ್​ ಆಂಡರ್​ಸನ್​ ಕೂಡ ಹಾಜರಿದ್ದರು.

ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ ನಡೆದ ಪುರುಷರ ಪ್ರಿ ಕ್ವಾರ್ಟರ್​ಫೈನಲ್​​ನಲ್ಲಿ 24 ಗ್ರಾಂಡ್​ ಸ್ಲಾಂ ಒಡೆಯ ಜೋಕೊವಿಕ್​ 1-6, 6-4,6-4, 6-4 ಅಂತರದಿಂದ 11ನೇ ಶ್ರೇಯಾಂಕಿತ ಅಲೆಕ್ಸ್​ ಡಿ ಮಿನೌರ್​ ವಿರುದ್ಧ ಗೆದ್ದು ಬೀಗಿದರು. ಇದರೊಂದಿಗೆ 8ನೇ ವಿಂಬಲ್ಡನ್​ ಹಾಗೂ ದಾಖಲೆಯ 25ನೇ ಪ್ರಶಸ್ತಿ ಹೋರಾಟ ಜೀವಂತವಿರಿಸಿದ 38 ವರ್ಷದ ಜೋಕೋ, ಮುಕ್ತ ಟೆನಿಸ್​ ಯುಗದಲ್ಲಿ ಗರಿಷ್ಠ 63 ಬಾರಿ ಗ್ರಾಂಡ್​ ಸ್ಲಾಂನಲ್ಲಿ ಕ್ವಾರ್ಟರ್​ಫೈನಲ್​​ಗೇರಿದ ಆಟಗಾರ ಎನಿಸಿದರು.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ 2024ರಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದ ಈ ಸೆಲೆಬ್ರಿಟಿ ಜೋಡಿ ಮಗು ಹುಟ್ಟಿದ ಬಳಿಕ ಲಂಡನ್‌ಗೆ ತೆರಳಿ ಅಲ್ಲಿಯೇ ವಾಸ ಮಾಡುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು.

ಇದನ್ನೂ ಓದಿ IND vs ENG: ಅವಳಿ ಶತಕಗಳ ಮೂಲಕ ಕೊಹ್ಲಿ-ಗವಾಸ್ಕರ್‌ ದಾಖಲೆ ಮುರಿದ ಶುಭಮನ್‌ ಗಿಲ್‌!

ಪ್ರಸ್ತುತ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಗ್ಲಾಮರ್‌ ಜೀವನದಿಂದ ದೂರವಾಗಿ ಶಾಂತ ಜೀವನವನ್ನು ನಡೆಸುತ್ತಿದ್ದಾರೆ. 2024ರಲ್ಲಿ ಭಾರತ ತ್ಯಜಿಸಿರುವ ಇವರು ಕೆಲಸದ ನಿಮಿತ್ತ ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.

2017ರಲ್ಲಿ ಇಟಲಿಯಲ್ಲಿ ವಿವಾಹವಾದ ದಂಪತಿಗೆ 2021ರಲ್ಲಿ ಹೆಣ್ಣು ಮಗು ಜನಿಸಿತ್ತು. ಅವಳಿಗೆ ವಾಮಿಕಾ ಎಂದು ಹೆಸರಿಡಲಾಯಿತು. ಬಳಿಕ 2024ರಲ್ಲಿ ಅವರು ಗಂಡು ಮಗುವನ್ನು ಸ್ವಾಗತಿಸಿದ್ದು, ಅದಕ್ಕೆ ಅಕಾಯ್‌ ಎಂದು ಹೆಸರಿಡಲಾಗಿದೆ. ಅಕಾಯ್‌ ಜನಿಸಿದ್ದು ಕೂಡ ಲಂಡನ್‌ನಲ್ಲಿಯೇ.