ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಅವಳಿ ಶತಕಗಳ ಮೂಲಕ ಕೊಹ್ಲಿ-ಗವಾಸ್ಕರ್‌ ದಾಖಲೆ ಮುರಿದ ಶುಭಮನ್‌ ಗಿಲ್‌!

ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಶತಕ ಸಿಡಿಸುವ ಮೂಲಕ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ತಮ್ಮ ಅವಳಿ ಶತಕಗಳ ಮೂಲಕ ಗಿಲ್‌, ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ಸುನೀಲ್‌ ಗವಾಸ್ಕರ್‌ ಅವರ ದಾಖಲೆಗಳನ್ನು ಮುರಿದಿದ್ದಾರೆ.

ಅವಳಿ ಶತಕಗಳ ಮೂಲಕ ಕೊಹ್ಲಿ-ಗವಾಸ್ಕರ್‌ ದಾಖಲೆ ಮುರಿದ ಗಿಲ್‌!

ಅವಳಿ ಶತಕಗಳ ಮೂಲಕ ಕೊಹ್ಲಿ-ಗವಾಸ್ಕರ್‌ ದಾಖಲೆ ಮುರಿದ ಶುಭಮನ್‌ ಗಿಲ್‌.

Profile Ramesh Kote Jul 5, 2025 9:29 PM

ಬರ್ಮಿಂಗ್‌ಹ್ಯಾಮ್: ಭಾರತ (India) ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್(Shubman Gill) ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್‌ ಪ್ರವಾಸದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಶತಕ ಗಳಿಸಿದ ನಂತರ, ಶುಭಮನ್ ಗಿಲ್ ಪ್ರಸ್ತುತ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿಯೂ ದ್ವಿಶತಕ ಬಾರಿಸಿದ್ದರು. ಇದರ ನಂತರವೂ ಗಿಲ್ ನಿಲ್ಲಲಿಲ್ಲ ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿಯೂ ಅವರು ಭರ್ಜರಿ ಶತಕವನ್ನು ಗಳಿಸಿದ್ದಾರೆ. ಇದರೊಂದಿಗೆ ಪ್ರಸ್ತುತ ಸರಣಿಯಲ್ಲಿ ಶುಭಮನ್‌ ಗಿಲ್‌ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ರನ್‌ಗಳನ್ನು ದಾಖಲಿಸಿದ್ದಾರೆ. ಆ ಮೂಲಕ ತಮ್ಮ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂಯನ ಮೈಲುಗಲ್ಲು ತಲುಪಿದ್ದಾರೆ.

ಕರುಣ್‌ ನಾಯರ್‌ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ಶುಭಮನ್‌ ಗಿಲ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು 129 ಎಸೆತಗಳಲ್ಲಿಯೇ ಶತಕವನ್ನು ಪೂರ್ಣಗೊಳಿಸಿದರು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ಅವರು 269 ರನ್‌ಗಳನ್ನು ಗಳಿಸಿದ್ದರು. ಇದೀಗ ಮತ್ತೊಂದು ಅದ್ಭುತ ಇನಿಂಗ್ಸ್‌ ಆಡಿದ ಅವರು, 162 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ 161 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಈ ಟೆಸ್ಟ್‌ ಸರಣಿಯಲ್ಲಿ ಆಡಿದ ನಾಲ್ಕು ಇನಿಂಗ್ಸ್‌ಗಳಿಂದ ಗಿಲ್‌ 585 ರನ್‌ಗಳನ್ನು ಕಲೆ ಹಾಕಿದ್ದಾರೆ.

ENG vs IND: ಸುನೀಲ್‌ ಗವಾಸ್ಕರ್‌ರ ದೀರ್ಘಕಾಲದ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್!

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಗಿಲ್‌

ಭಾರತ ಟೆಸ್ಟ್‌ ತಂಡದ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸುವ ಮೂಲಕ ಶುಭಮನ್‌ ಗಿಲ್‌, ಮಾಜಿ ನಾಯಕ ವಿರಾಟ್‌ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ 2014-15ರ ಸಾಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ 449 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಗಿಲ್‌ ಕೇವಲ ಎರಡೇ ಟೆಸ್ಟ್‌ ಪಂದ್ಯಗಳಲ್ಲಿ 585 ರನ್‌ ಗಳಿಸಿ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.



ಟೆಸ್ಟ್‌ ಪಂದ್ಯದಲ್ಲಿ 300 ರನ್‌ ಗಳಿಸಿದ ಮೊದಲ ಭಾರತೀಯ ನಾಯಕ

ಏಕೈಕ ಟೆಸ್ಟ್‌ ಪಂದ್ಯದಲ್ಲಿ 300 ರನ್‌ ಗಳಿಸಿದ ಭಾರತ ತಂಡದ ಮೊದಲ ನಾಯಕ ಎಂಬ ದಾಖಲೆಯನ್ನು ಶುಭಮನ್‌ ಗಿಲ್‌ ಬರೆದಿದ್ದಾರೆ. 2017ರಲ್ಲಿ ಶ್ರೀಲಂಕಾ ವಿರುದ್ದ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ಕೊಹ್ಲಿ293 ರನ್‌ ಗಳಿಸಿದ್ದರು. ಇದೀಗ ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗಿಲ್‌ (587 ರನ್‌) ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ 542 ರನ್‌ ಗಳಿಸಿದ್ದ ಸುನೀಲ್‌ ಗವಾಸ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ. ರಾಹುಲ್‌ ದ್ರಾವಿಡ್‌ (602) ಅಗ್ರ ಸ್ಥಾನದಲ್ಲಿದ್ದರೆ, ವಿರಾಟ್‌ ಕೊಹ್ಲಿ (593) ಎರಡನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಭಾರತೀಯ ನಾಯಕರು

ಸುನೀಲ್ ಗವಾಸ್ಕರ್ vs ವೆಸ್ಟ್ ಇಂಡೀಸ್, ಕೋಲ್ಕತ್ತಾ, 1978

ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ, ಅಡಿಲೇಡ್, 2014

ಶುಭಮನ್ ಗಿಲ್ vs ಇಂಗ್ಲೆಂಡ್, ಎಡ್ಜ್‌ಬಾಸ್ಟನ್, 2025

IND vs ENG: ಎರಡನೇ ಟೆಸ್ಟ್‌ನಲ್ಲಿಯೂ ಭಾರತವನ್ನು ಸೋಲಿಸುತ್ತೇವೆಂದ ಹ್ಯಾರಿ ಬ್ರೂಕ್!

ಸುನೀಲ್‌ ಗವಾಸ್ಕರ್‌ ದಾಖಲೆ ಮುರಿದ ಶುಭಮನ್ ಗಿಲ್

ಶುಭಮನ್‌ ಗಿಲ್ ಮತ್ತೊಂದು ದಾಖಲೆಯನ್ನು ಕೂಡ ಬರೆದಿದ್ದಾರೆ. ಈ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ಗಿಲ್‌ 430 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಹಾಗೂ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಆ ಮೂಲಕ ಟೆಸ್ಟ್‌ ಪಂದ್ಯದಲ್ಲಿ 344 ರನ್‌ಗಳನ್ನು ಕಲೆ ಹಾಕಿದ್ದ ಸುನೀಲ್‌ ಗವಾಸ್ಕರ್‌ ಅವರನ್ನು ಗಿಲ್‌ ಹಿಂದಿಕ್ಕಿದ್ದಾರೆ.

IND vs ENG: 6 ವಿಕೆಟ್ ಕಿತ್ತು ಕಪಿಲ್ ದೇವ್ ಒಳಗೊಂಡ ಎಲೈಟ್ ಲೀಸ್ಟ್ ಸೇರಿದ ಮೊಹಮ್ಮದ್‌ ಸಿರಾಜ್‌!

ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌

430- ಶುಭಮನ್ ಗಿಲ್ vs ಇಂಗ್ಲೆಂಡ್, ಎಡ್ಜ್‌ಬಾಸ್ಟನ್, 2025

344- ಸುನಿಲ್ ಗವಾಸ್ಕರ್ vs ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್, 1971

340- ವಿವಿಎಸ್ ಲಕ್ಷ್ಮಣ್ vs ಆಸ್ಟ್ರೇಲಿಯಾ, ಕೋಲ್ಕತ್ತಾ, 2001

330- ಸೌರವ್ ಗಂಗೂಲಿ vs ಪಾಕಿಸ್ತಾನ, ಬೆಂಗಳೂರು, 2007

319- ವೀರೇಂದ್ರ ಸೆಹ್ವಾಗ್ vs ದಕ್ಷಿಣ ಆಫ್ರಿಕಾ, ಚೆನ್ನೈ, 2008

309- ವೀರೇಂದ್ರ ಸೆಹ್ವಾಗ್ vs ಪಾಕಿಸ್ತಾನ, ಮುಲ್ತಾನ್, 2004