ಅಡಿಲೇಡ್: ಭಾನುವಾರ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ(AUS vs IND 2nd ODI) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಅಂತರದ ಸೋಲು ಕಂಡಿತ್ತು. ಗೆಲುವು ಸಾಧಿಸಿದ ಮಿಚೆಲ್ ಮಾರ್ಷ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ದ್ವಿತೀಯ ಪಂದ್ಯ ಗುರುವಾರ ಅಡಿಲೇಡ್‌ನ ಓವಲ್(Adelaide Oval) ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿ ಜೀವಂತವಿರಿಸಿಕೊಳ್ಳಬೇಕಿದ್ದರೆ ಭಾರತಕ್ಕೆ ಇದು ಮಸ್ಟ್ ವಿನ್ ಗೇಮ್ ಆಗಿದೆ.
7 ತಿಂಗಳ ಬಳಿಕ ಭಾರತ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡ ರೋಹಿತ್ ಹಾಗೂ ಕೊಹ್ಲಿ ತಮ್ಮ ಕಮ್‌ಬ್ಯಾಕ್ ಪಂದ್ಯದಲ್ಲಿ ಸಂಪೂರ್ಣ ವಿಫಲರಾಗಿದರು. ಇದೀಗ ಸರಣಿಯಲ್ಲಿ ಇನ್ನೆರಡು ಪಂದ್ಯ ಬಾಕಿ ಇದ್ದು, ಆ ಪಂದ್ಯಗಳಲ್ಲಾದರೂ ಭಾರತದ ದಿಗ್ಗಜ ಆಟಗಾರರಿಬ್ಬರು ಅಬ್ಬರಿಸುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಮಳೆ ಭೀತಿ ಇದೆಯೇ?
ಪರ್ತ್ ಪಂದ್ಯಕ್ಕೆ ಹಲವು ಬಾರಿ ಮಳೆ ಅಡಚಣೆ ಉಂಟುಮಾಡಿತ್ತು. ಆದರೆ ಅಡಿಲೇಡ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿಲ್ಲ. ಅಕ್ಯೂವೆದರ್ ವರದಿ ಪ್ರಕಾರ ಮಳೆ ಸಾಧ್ಯತೆ ಕೇವಲ 2 ಶೇ. ಎಂದಿದೆ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ Smriti Mandhana: ಸ್ಮೃತಿ ಮಂಧಾನಗೆ ಕೂಡಿ ಬಂದ ಕಂಕಣ ಭಾಗ್ಯ; ಬಹುಕಾಲದ ಪ್ರಿಯಕರನ ಜತೆ ಮದುವೆ
ಭಾರತ ಪರ ದ್ವಿತೀಯ ಪಂದ್ಯಕ್ಕೆ ಕೆಲವು ಬದಲಾವಣೆ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರ್ ಬದಲು ಕುಲ್‌ದೀಪ್ ಯಾದವ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆಸೀಸ್ ತಂಡಕ್ಕೆ ಜಾಂಫಾ ಸೇರಿ ಕೆಲ ಆಟಗಾರರು ಸೇರ್ಪಡೆಗೊಂಡರೂ ಕೂಡ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಅನುಮಾನ. ವಿನ್ನಿಂಗ್ ಕಾಂಬಿನೇಶನ್ ಮುಂದುವರಿಸಬಹುದು.